ರಾಹುಲ್ ಗಾಂಧಿ ಓರ್ವ ಸಲಿಂಗಕಾಮಿ ಎಂದು ನಾವು ಕೇಳಿದ್ದೇವೆ: ಸ್ವಾಮಿ ಚಕ್ರಪಾಣಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ "ಸಲಿಂಗಕಾಮಿ" ಎಂಬುದಾಗಿ ನಾವು ಕೇಳಿದ್ದೇನೆ ಎಂದು ಅಖಿಲ  ಭಾರತೀಯ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಹೇಳಿದ್ದಾರೆ. 

Published: 03rd January 2020 05:05 PM  |   Last Updated: 03rd January 2020 05:08 PM   |  A+A-


ಸ್ವಾಮಿ ಚಕ್ರಪಾಣಿ ಹಾಗೂ ರಾಹುಲ್ ಗಾಂಧಿ

Posted By : Raghavendra Adiga
Source : ANI

ಸಾವರ್ಕರ್-ಗೋಡ್ಸೆ ಸಂಬಂಧದ ಕುರಿತ ಪ್ರಶ್ನೆಗೆ ಹಿಂದೂ ಮಹಾಸಭಾ ಅಧ್ಯಕ್ಷರ ಪ್ರತಿಕ್ರಿಯೆ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ "ಸಲಿಂಗಕಾಮಿ" ಎಂಬುದಾಗಿ ನಾವು ಕೇಳಿದ್ದೇನೆ ಎಂದು ಅಖಿಲ  ಭಾರತೀಯ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಹೇಳಿದ್ದಾರೆ. 

ನಾಥುರಾಮ್ ಗೋಡ್ಸೆ ಮತ್ತು ವೀರ ಸಾವರ್ಕರ್ ನಡುವೆ "ದೈಹಿಕ ಸಂಬಂಧ" ಹೊಂದಿದ್ದಾರೆಂದು ಹೇಳಿರುವ ಕಾಂಗ್ರೆಸ್ ಸೇವಾ ದಳದ ಕಿರುಪುಸ್ತಕದ ವಿಚಾರ ಮಾತನಾಡಿದ ಚಕ್ರಪಾಣಿ ಸಾವರ್ಕರ್ ವಿರುದ್ಧದ ಆರೋಪಗಳು ಹಾಸ್ಯಾಸ್ಪದ ಎಂದು ಹೇಳಿದ್ದಾರೆ. ಅಲ್ಲದೆ ಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಓರ್ವ "ಸಲಿಂಗಕಾಮಿ" ಎಂಬುದಾಗಿ ನಾವು ಕೇಳಿ ಬಲ್ಲೆವು ಎಂದೂ ಹೇಳಿದ್ದಾರೆ.

ಸಾವರ್ಕರ್ ಅವರ ವಿರುದ್ಧ ಕಾಂಗ್ರೆಸ್ ಹಾಸ್ಯಾಸ್ಪದ ಆರೋಪಗಳನ್ನು ಮಾಡುತ್ತಿದೆ.ಎಂದು ಎಎನ್‌ಐಗೆ ಅವರು ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಸೇವಾ ದಳದ 10 ದಿನಗಳ ಶಿಬಿರದಲ್ಲಿ ಗುರುವಾರ ಬಿಡುಗಡೆಯಾಗಿರುವ ಕಿರುಪುಸ್ತಕವೊಂದರಲ್ಲಿ ಗಾಂಧಿಯವರ ಹಂತಕ ಗೋಡ್ಸೆ ಅವರೊಂದಿಗೆ ಸಾವರ್ಕರ್ "ದೈಹಿಕ ಸಂಬಂಧ" ಹೊಂದಿದ್ದರೆಂದು ಬರೆಯಲಾಗಿದೆ. ಇದು ಹುದೊಡ್ಡ ವಿವಾದವನ್ನು ಹುಟ್ಟು ಹಾಕಿದ್ದು ದೇಶಾದ್ಯಂತ ಕಾಂಗ್ರೆಸ್ ನಡೆಯ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ,

ಈ ನಡುವೆ ಕಾಂಗ್ರೆಸ್ ಸೇವಾ ದಳದ ಮುಖ್ಯಸ್ಥ ಲಾಲ್ಜಿ ದೇಸಾಯಿಸಾಕ್ಷ್ಯಗಳ ಆಧಾರದ ಮೇಲೆ ಲೇಖಕರು ಈ ಕಿರುಪುಸ್ತಕವನ್ನು ಬರೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲ್ಯಾಪಿಯರ್ ಬರೆದ 'ಫ್ರೀಡಮ್ ಅಟ್ ಮಿಡ್ನೈಟ್' ಪುಸ್ತಕದ ಪುಟ 423ರಲ್ಲಿ ಉಲ್ಲೇಖವಾಗಿದೆ ಎನ್ನಲಾದ ಈ ವಿವಾದಾತ್ಮಕ ಅಂಶವು "ವೀರ ಸಾವರ್ಕರ್ ಕಿತನೇ ವೀರ್?"ಎಂಬ ಕಿರುಪುಸ್ತಕದಲ್ಲಿ ವಿವರಿಸಲಾಗಿದೆ. 

ಪುಸ್ತಕದಲ್ಲಿ ಗೋಡ್ಸೆ ತನ್ನ ರ "ರಾಜಕೀಯ ಗುರು" ಸಾವರ್ಕರ್ ಅವರೊಂದಿಗೆ ಸಲಿಂಗಕಾಮ ಸಂಬಂಧವನ್ನು ಹೊಂದಿದ್ದರು ಎಂದು ಹೇಳಲಾಗಿದೆ.ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರನ್ನು ಅತ್ಯಾಚಾರ ಮಾಡಲು ಸಾವರ್ಕರ್ ತನ್ನ ಅನುಯಾಯಿಗಳನ್ನು ಪ್ರೋತ್ಸಾಹಿಸಿದರು ಮತ್ತು 12 ವರ್ಷದವರಾಗಿದ್ದ ವೇಳೆ ಅವರು ಮಸೀದಿಗಳ ಮೇಲೆ ಕಲ್ಲು ತೂರಾಟದಲ್ಲಿ ತೊಡಗಿದ್ದರು  ಎಂದೂ ಈ ಕಿರುಪುಸ್ತಕದಲ್ಲಿ ವಿವರಿಸಲಾಗಿದೆ.

ಈ ನಡುವೆ ಮಹಾನ್ ರಾಷ್ಟ್ರಪ್ರೇಮಿಯೊಬ್ಬರ ಮೇಲೆ ಕಾಂಗ್ರೆಸ್ ಕಳಂಕ ಹೊರಿಸುತ್ತಿದೆ ಎಂದು ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ ಆರೋಪಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp