ಸಂಸದರು, ಶಾಸಕರ ಅನರ್ಹತೆ ಅಧಿಕಾರ ಸ್ಪೀಕರ್'ಗೆ: ನಿರ್ಧಾರ ಕುರಿತು ಮರುಚಿಂತನೆ ನಡೆಸಲು 'ಸುಪ್ರೀಂ' ಸಲಹೆ

ಸಂಸದರು ಮತ್ತು ಶಾಸಕರ ಅನರ್ಹತೆಗೊಳಿಸುವ ವಿಚಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗುತ್ತಿದ್ದು, ಆಡಳಿತ ಪಕ್ಷದ ಪರವಾಗಿರುವ ಸ್ಪೀಕರ್ ಅವರ ನಿರ್ಧಾರದಲ್ಲಿ ಪಕ್ಷಪಾತ ನಡೆಯುತ್ತಿದೆ ಎಂಬ ಆರೋಪಗಳೂ ಕೂಡ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಅನರ್ಹತೆಯ ವಿಧಾನವನ್ನು ಹೆಚ್ಚು ನ್ಯಾಯಸಮ್ಮತ ಮಾಡಬೇಕೆಂದು ಸುಪ್ರೀಂಕೋರ್ಟ್ ಪ್ರಯತ್ನ ನಡೆಸಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸಂಸದರು ಮತ್ತು ಶಾಸಕರ ಅನರ್ಹತೆಗೊಳಿಸುವ ವಿಚಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗುತ್ತಿದ್ದು, ಆಡಳಿತ ಪಕ್ಷದ ಪರವಾಗಿರುವ ಸ್ಪೀಕರ್ ಅವರ ನಿರ್ಧಾರದಲ್ಲಿ ಪಕ್ಷಪಾತ ನಡೆಯುತ್ತಿದೆ ಎಂಬ ಆರೋಪಗಳೂ ಕೂಡ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಅನರ್ಹತೆಯ ವಿಧಾನವನ್ನು ಹೆಚ್ಚು ನ್ಯಾಯಸಮ್ಮತ ಮಾಡಬೇಕೆಂದು ಸುಪ್ರೀಂಕೋರ್ಟ್ ಪ್ರಯತ್ನ ನಡೆಸಿದ್ದು, ಸಂಸದರು ಹಾಗೂ ಶಾಸಕರನ್ನು ಅನರ್ಹಗೊಳಿಸುವ ಸ್ಪೀಕರ್ ಅಧಿಕಾರದ ಕುರಿತು ಮರುಚಿಂತನೆ ನಡೆಸುವಂತೆ ಸಂಸತ್ತಿಗೆ ಸರ್ವೋಚ್ಛ ನ್ಯಾಯಾಲಯ ಸಲಹೆ ನೀಡಿದೆ. 

ಮಣಿಪುರದಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಪಡೆದುಕೊಂಡು ಜಯಗಳಿಸಿದ ಬಳಿಕ ಬಿಜೆಪಿ ಸರ್ಕಾರ ಸೇರ್ಪಡೆಗೊಂಡಿದ್ದ ಅರಣ್ಯ ಹಾಗೂ ಪರಿಸರ ಸಚಿವ ಟಿ.ಶ್ಯಾಮಕುಮಾರ್ ಅನರ್ಹತೆಗೊಳಿಸಿದ ಪ್ರಕರಣದ ವಿಚಾರಣೆಗೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯಕ್ಕೆ ಬಂದಿದೆ. 

ನ್ಯಾ ನಾರಿಮನ್ ನೇತೃತ್ವದ ತ್ರಿಸದಸ್ಯ ಸುಪ್ರೀಂಕೋರ್ಟ್ ನ್ಯಾಯಪೀಠವು, ಜನಪ್ರತಿನಿಧಿಗಳ ಅನರ್ಹತೆ ವಿಚಾರದಲ್ಲಿ ಸ್ವತಂತ್ರ ಸಂಸ್ಥೆಗೆ ಅಧಿಕಾರ ನೀಡುವೋ ಬಗ್ಗೆ ಸಂಸತ್ತು ಚಿಂತನೆ ನಡೆಸಬೇಕೆಂದು ಎಂದು ಸಲಹೆ ನೀಡಿದೆ. 

ಅನರ್ಹತೆ ಅರ್ಜಿಗಳ ವಿಚಾರವನ್ನು ಸ್ಪೀಕರ್ ನಿರ್ಧಾರಕ್ಕೆ ಬಿಡುವುದು ಸರಿ ಹೋಗುವುದಿಲ್ಲ. ಏಕೆಂದರೆ ಸ್ಪೀಕರ್ ಕೂಡ ಒಂದು ರಾಜಕೀಯ ಪಕ್ಷದ ಸದಸ್ಯರೇ ಆಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಸ್ವತಂತ್ರವಾದ ಇತರೆ ಒಂದು ಸಂಸ್ಥೆಯನ್ನು ರಚನೆ ಮಾಡುುದು ಸೂಕ್ತವಾಗುತ್ತದೆ. ಹಾಗೆಯೇ ಶಾಸಕರ ಅನರ್ಹತೆಯಅರ್ಜಿ ವಿಚಾರಣೆಯನ್ನು ಸ್ಪೀಕರ್ ಹೆಚ್ಚು ವಿಳಂಬ ಮಾಡಬಾರದು, 3 ತಿಂಗಳೊಳಗೆ ಅರ್ಜಿ ಇತ್ಯರ್ಥಪಡಿಸಬೇಕೆಂದು ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com