ಮಗನನ್ನು ಎನ್ ಕೌಂಟರ್ ಮಾಡಿ ಕೊಂದು ಹಾಕಿ: ಪಾತಕಿ ವಿಕಾಸ್ ದುಬೆ ತಾಯಿಯಿಂದ ಪೊಲೀಸರಿಗೆ ಮನವಿ

ನನ್ನ ಮಗನನ್ನು ಎನ್ ಕೌಂಟರ್ ಮಾಡಿ ಕೊಂದು ಹಾಕಿ ಎಂದು ಪಾತಕಿ ವಿಕಾಸ್ ದುಬೆ ತಾಯಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ನಟೋರಿಯಸ್ ಕ್ರಿಮಿನಲ್ ವಿಕಾಸ್ ದುಬೆ
ನಟೋರಿಯಸ್ ಕ್ರಿಮಿನಲ್ ವಿಕಾಸ್ ದುಬೆ

ಲಖನೌ: ನನ್ನ ಮಗನನ್ನು ಎನ್ ಕೌಂಟರ್ ಮಾಡಿ ಕೊಂದು ಹಾಕಿ ಎಂದು ಪಾತಕಿ ವಿಕಾಸ್ ದುಬೆ ತಾಯಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಭೂಗತ ಪಾತಕಿ ವಿಕಾಸ್ ದುಬೆ ಎಂಬವನನ್ನು ಬಂಧಿಸಲು ಮುಂದಾದ ಎಂಟು ಮಂದಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಎಂಟು ಮಂದಿ ಪೊಲೀಸರ ಹತ್ಯೆ ನಡೆಸಿದ ಘಟನೆ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಆತನ ತಾಯಿ ಸರಳಾ ದೇವಿ, ಮಗನನ್ನು ಪೊಲೀಸರು ಎನ್ ಕೌಂಟರ್ ಮಾಡಿ ಹತ್ಯೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. 

ಪೊಲೀಸರನ್ನು ಹತ್ಯೆ ಮಾಡಿರುವ ವಿಷಯವನ್ನು ಟಿವಿಯಲ್ಲಿ ನೋಡಿ ತಿಳಿದುಕೊಂಡಿದ್ದಾಗಿ, ಪೊಲೀಸರನ್ನು ಹತ್ಯೆ ಮಾಡಿ ನನ್ನ ಮಗ ಅತ್ಯಂತ ಹೀನ ಕೃತ್ಯ ಎಸಗಿದ್ದಾನೆ ಎಂದು ಸರಳಾ ದೇವಿ ಹೇಳಿದ್ದಾರೆ. ಎಂಟು ಮಂದಿ ಪೊಲೀಸರನ್ನು ಕೊಂದಿರುವ ಮಗನನ್ನು ಪೊಲೀಸರೇ ಎನ್ ಕೌಂಟರ್ ಮಾಡಿ ಕೊಲ್ಲಬೇಕು ಎಂದು ಮನವಿ ಮಾಡಿದ್ದಾರೆ.

ಪೊಲೀಸರಿಗೆ ಆತ ಎಲ್ಲಿರುತ್ತಾನೆ ಎಂಬುದು ಗೊತ್ತಿದ್ದರೂ ಏಕೆ? ಅವನನ್ನು ಹಿಡಿಯುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ವಿಕಾಸ್ ದುಬೆ ತಾನೇ ಪೊಲೀಸರಿಗೆ ಶರಣಾಗಬೇಕು.. ಇಲ್ಲವಾದರೆ ಪೊಲೀಸರು ಆತತನನ್ನು ಎನ್ ಕೌಂಟರ್ ಮಾಡಿಕೊಲ್ಲಬೇಕು ಅವರು ಮನವಿ ಮಾಡಿದ್ದಾರೆ. ರಾಜಕೀಯ ನಾಯಕರ ಪರಿಚಯವಾದ ನಂತರ ವಿಕಾಸ್ ದುಬೆ ಅಪರಾಧಿಯಾಗಿ ಪರಿವರ್ತನೆಗೊಂಡಿದ್ದಾನೆ ಎಂದು ಆಕೆ ಹೇಳಿದ್ದಾರೆ. ದುಬೆ ಶಾಸಕನಾಗಿ ಗೆಲ್ಲಲು ಮಂತ್ರಿ ಸಂತೋಷ್ ಶುಕ್ಲಾ ರನ್ನೂ ಹತ್ಯೆ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಕಳೆದ ನಾಲ್ಕು ತಿಂಗಳುಗಳಿಂದ ಮಗನನ್ನು ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಸರಳಾ ದೇವಿ, ಪ್ರಸ್ತುತ ಕಿರಿಯ ಪುತ್ರನ ಲಕ್ನೋ ಮನೆಯಲ್ಲಿ ವಾಸವಾಗಿದ್ದೇನೆ ಎಂದು ಹೇಳಿದ್ದಾರೆ. 

ವಿಕಾಸ್ ದುಬೆ ತಲೆಗೆ 50 ಸಾವಿರ ನಗದು, ಬಂಧನಕ್ಕೆ 2 ತಂಡಗಳ ರಚನೆ
ಇನ್ನೊಂದೆಡೆ. ವಿಕಾಸ್ ದುಬೆ ಬಗ್ಗೆ ಮಾಹಿತಿ ನೀಡಿದವರಿಗೆ ೫೦ ಸಾವಿರ ನಗದು ಬಹುಮಾನ ನೀಡುವುದಾಗಿ ಕಾನ್ಫೂರ್ ಐಜಿ ಮೊಹಿತ್ ಅಗರ್ವಾಲ್ ಪ್ರಕಟಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು ವಿಕಾಸ್ ದುಬೆ ಇರುವಿಕೆಯ ಕುರಿತು ಯಾರಾದರೂ ಪೊಲೀಸರಿಗೆ ಮಾಹಿತಿ ನೀಡಿದರೆ ಅವರಿಗೆ 50 ಸಾವಿರ ನಗದು ಬಹುಮಾನ ಘೋಷಣೆ ಮಾಡಿದ್ದಾರೆ. ಅಲ್ಲದೆ ಆತನ ಕುರಿತು ಮಾಹಿತಿ ನೀಡುವವರ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ. ವಿಕಾಸ್ ದುಬೆ  ಬಂಧನಕ್ಕಾಗಿ 25ಕ್ಕೂ ಹೆಚ್ಚು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು, ತನಿಖಾ ತಂಡ ಆತನ ಗ್ಯಾಂಗ್ ನ ಸುಮಾರು 500ಕ್ಕೂ ಹೆಚ್ಚು ಮೊಬೈಲ್ ಗಳ ಟವರ್ ಲೊಕೇಷನ್ ಪರಿಶೀಲಿಸುತ್ತಿದ್ದಾರೆ.

ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳಿರುವ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಮತ್ತು ಆತನ ಸಹಚರರು ಇತ್ತೀಚೆಗೆ ಬಂಧನಕ್ಕಾಗಿ ಬಂದಿದ್ದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ 8 ಮಂದಿ ಪೊಲೀಸರನ್ನು ಹತ್ಯೆ ಗೈದಿದ್ದ. ಅಲ್ಲದೆ ಮೃತ ಮತ್ತು ಗಾಯಗೊಂಡ ಪೊಲೀಸರಿಂದ ಅವರ ಶಸ್ತ್ರಾಸ್ತ್ರಗಳನ್ನು ಕಸಿದು ಆ ತಂಡ ಪರಾರಿಯಾಗಿತ್ತು. ಇದೀಗ ಆತನ ಭೇಟೆಗಾಗಿ ಉತ್ತರ ಪ್ರದೇಶ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com