ಕೋವಿಡ್-19: ಚೇತರಿಕೆ ಪ್ರಕರಣಗಳು ಸಕ್ರಿಯ ಪ್ರಕರಣಗಳಿಗಿಂತ 2.95 ಲಕ್ಷ ಮೀರಿದೆ!

ದೇಶದಲ್ಲಿ ಕೋವಿಡ್ 19 ಕೇಸ್ ಲೋಡ್ 3,58,692 ಆಗಿದ್ದರೆ 24 ಗಂಟೆಗಳಲ್ಲಿ 18 ಸಾವಿರ ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಸಂಖ್ಯೆಯು 6,53,750ಕ್ಕೆ ಏರಿಕೆಯಾಗಿದ್ದು ಇದು ಸಕ್ರಿಯ ಪ್ರಕರಣಗಳನ್ನು 2,95,058ರಷ್ಟು ಮೀರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಕೋವಿಡ್ 19 ಕೇಸ್ ಲೋಡ್ 3,58,692 ಆಗಿದ್ದರೆ 24 ಗಂಟೆಗಳಲ್ಲಿ 18 ಸಾವಿರ ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಸಂಖ್ಯೆಯು 6,53,750ಕ್ಕೆ ಏರಿಕೆಯಾಗಿದ್ದು ಇದು ಸಕ್ರಿಯ ಪ್ರಕರಣಗಳನ್ನು 2,95,058ರಷ್ಟು ಮೀರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
  
ಹೋಂ ಐಸೋಲೇಷನ್ ಅಥವಾ ಆಸ್ಪತ್ರೆಗಳಲ್ಲಿ ತೀವ್ರತರವಾದ ಪ್ರಕರಣಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

"ಕಳೆದ 24 ಗಂಟೆಗಳಲ್ಲಿ 17,994 ಕೋವಿಡ್-19 ರೋಗಿಗಳು ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣ ಈಗ ಶೇಕಡಾ 63 ಆಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರದ ನೇತೃತ್ವದಲ್ಲಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜಾರಿಗೆ ತಂದಿರುವ ಕೊರೊನಾವೈರಸ್ ಸೋಂಕು ನಿರ್ವಹಣೆಗೆ ಸಮಯೋಚಿತ, ಪೂರ್ವಭಾವಿ ಮತ್ತು ಶ್ರೇಣೀಕೃತ ಕಾರ್ಯತಂತ್ರದ
ಉಪಕ್ರಮಗಳು ಪರಿಣಾಮಕಾರಿಯಾಗಿದ್ದು ಇದು ಕೋವಿಡ್ 19 ಕ್ಯಾಸೆಲೋಡ್ ಅನ್ನು ನಿರ್ವಹಿಸಬಲ್ಲದು ಎಂದು ಖಚಿತಪಡಿಸಿದೆ ಎಂದಿದೆ.

ಒಟ್ಟಾರೆಯಾಗಿ, 1,34,33,742 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಅದರಲ್ಲಿ ಶುಕ್ರವಾರ ಒಂದೇ ದಿನ 3,61,024 ಪರೀಕ್ಷೆ ನಡೆಸಲಾಗಿದ್ದು, ಪ್ರತಿ ಮಿಲಿಯನ್‌ಗೆ ಪರೀಕ್ಷೆಗಳ ಸಂಖ್ಯೆಯನ್ನು 9734.6ಕ್ಕೆ
ಏರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕ್ಯಾಸೆಲೋಡ್ ಹೆಚ್ಚಳಕ್ಕೆ ಸಾಕ್ಷಿಯಾದ ಪ್ರದೇಶಗಳಿಗೆ ತಜ್ಞರ ತಂಡಗಳನ್ನು ಕಳುಹಿಸುವ ಮೂಲಕ ರಾಜ್ಯ ಸರ್ಕಾರಗಳ ಪ್ರಯತ್ನಗಳಿಗೆ ಕೇಂದ್ರವು ಬೆಂಬಲವಾಗಿ ನಿಂತಿದೆ ಎಂದು ಸಚಿವಾಲಯ ಹೇಳಿದೆ.

ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಒಡಿಶಾದಲ್ಲಿ ದಿನನಿತ್ಯದ ಹೊಸದಾಗಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಕೇಂದ್ರ ಆರೋಗ್ಯ ಸಚಿವಾಲಯವು ಈ ರಾಜ್ಯಗಳನ್ನು ಪ್ರಸರಣವನ್ನು ನಿಗ್ರಹಿಸಲು
ಹೊಸ ಪ್ರಯತ್ನಗಳನ್ನು ಮಾಡುವಂತೆ ಕೇಳಿಕೊಂಡಿದೆ ಮತ್ತು ಪ್ರಕರಣದ ಸಾವಿನ ಪ್ರಮಾಣವನ್ನು ಶೇಕಡಾಕ್ಕಿಂತ ಕಡಿಮೆ ಇರಿಸಿಕೊಳ್ಳಲು ಕೇಳಿಕೊಂಡಿದೆ.

ಈ ರಾಜ್ಯಗಳು ಹೊಸದಾಗಿ ಲಾಕ್‌ಡೌನ್‌ಗಳನ್ನು ವಿಧಿಸುವುದರೊಂದಿಗೆ, ಆರೋಗ್ಯ ಸಚಿವಾಲಯವು ಪ್ರಕರಣಗಳನ್ನು ಮೊದಲೇ ಪತ್ತೆಹಚ್ಚಲು ಕಾರಣವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com