ಭಾರತದ ಅಭಿವೃದ್ಧಿ ಸಹಕಾರವು ಯಾವುದೇ ಷರತ್ತು ಹೊಂದಿರುವುದಿಲ್ಲ: ಪಿಎಂ ನರೇಂದ್ರ ಮೋದಿ

ಮಾರಿಷಸ್ ನ ಸುಪ್ರೀಂ ಕೋರ್ಟ್ ನ ನೂತನ ಕಟ್ಟಡವನ್ನು ಪೋರ್ಟ್ ಲೂಯಿಸ್ ನಲ್ಲಿ ಅಲ್ಲಿನ ಪ್ರಧಾನಿ ಪ್ರವಿಂದ್ ಜುಗ್ನೌತ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ನವದೆಹಲಿ: ಮಾರಿಷಸ್ ನ ಸುಪ್ರೀಂ ಕೋರ್ಟ್ ನ ನೂತನ ಕಟ್ಟಡವನ್ನು ಪೋರ್ಟ್ ಲೂಯಿಸ್ ನಲ್ಲಿ ಅಲ್ಲಿನ ಪ್ರಧಾನಿ ಪ್ರವಿಂದ್ ಜುಗ್ನೌತ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ವರ್ಚುವಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿಯ ಸಹಭಾಗಿತ್ವದ ಹೆಸರಿನಲ್ಲಿ ದೇಶಗಳು ಪರಸ್ಪರ ಅವಲಂಬಿತವಾಗಿ ಸಹಭಾಗಿತ್ವ ಹೊಂದಬೇಕು ಎಂಬುದನ್ನು ನಮಗೆ ಇತಿಹಾಸ ಕಲಿಸಿಕೊಟ್ಟಿದೆ. ಅದರಿಂದ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಆಡಳಿತ ಹೆಚ್ಚಾಯಿತು, ಜಾಗತಿಕ ಶಕ್ತಿ ಬೆಳವಣಿಗೆಗೆ ಅಡಿಗಲ್ಲಾಯಿತು ಎಂದು ಹೇಳಿದ್ದಾರೆ. 

ಸಹಕಾರದ ಬೆಳವಣಿಗೆಯ ಮೂಲಭೂತ ತತ್ವವೆಂದರೆ ಸಹಭಾಗಿ ದೇಶವನ್ನು ಗೌರವಿಸುವುದು. ಅಭಿವೃದ್ಧಿ ಪಾಠಗಳನ್ನು ದೇಶಗಳ ಜೊತೆ ಹಂಚಿಕೊಳ್ಳುವುದು ಭಾರತದ ಏಕಮಾತ್ರ ಧ್ಯೇಯವಾಗಿದೆ. ಇದರಿಂದಾಗಿ ಅಭಿವೃದ್ಧಿಯ ಸಹಕಾರದಡಿ ಭಾರತ ಯಾವತ್ತಿಗೂ ಷರತ್ತು ಹಾಕುವುದಿಲ್ಲ ಎಂದು ಮೋದಿ ಪ್ರತಿಪಾದಿಸಿದ್ದಾರೆ.

ಮಾರಿಷನ್ ನ ಪೋರ್ಟ್ ಲೂಯಿಸ್ ನಲ್ಲಿರುವ ಸುಪ್ರೀಂ ಕೋರ್ಟ್ ನ ಹೊಸ ಕಟ್ಟಡ ಭಾರತ ಮತ್ತು ಮಾರಿಷಸ್ ನಡುವೆ ಸಹಕಾರ ವರ್ಧನೆಯ ಹೆಗ್ಗುರುತಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com