ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಾಕ್ ಡೌನ್ ಎಫೆಕ್ಟ್: ಊರು ಸೇರಿದ ಬಳಿಕ ಕದ್ದ ಬೈಕ್ ವಾಪಸ್ ಪಾರ್ಸಲ್ ಮಾಡಿದ ಕಳ್ಳ, ಮಾಲೀಕ ಫುಲ್ ಖುಷ್!

ಕೊರೋನಾ ಲಾಕ್ ಡೌನ್ ನಿಂದಾಗಿ ಯಾವುದೇ ವಾಹನ ಇಲ್ಲದೆ ಸುಮಾರು 200 ಕಿ.ಮೀ. ದೂರದ ತನ್ನ ಊರು ತಲುಪಲು ಪರದಾಡುತ್ತಿದ್ದ ವ್ಯಕ್ತಿಯೊಬ್ಬ ಬೈಕ್ ವೊಂದನ್ನು ಕದ್ದು, ತನ್ನ ಪತ್ನಿ ಜತೆ ಊರು ಸೇರಿದ್ದಾನೆ. ಬಳಿಕ ಕಳ್ಳತನ ಮಾಡಿದ್ದ ಬೈಕ್ ಅನ್ನು ಮಾಲೀಕನಿಗೆ ವಾಪಸ್ ಪಾರ್ಸಲ್ ಮಾಡುವ ಮೂಲಕ ಪ್ರಾಮಾಣಿಕತೆ ಮೇರೆದಿದ್ದಾನೆ.

ಕೊಯಮತ್ತೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಯಾವುದೇ ವಾಹನ ಇಲ್ಲದೆ ಸುಮಾರು 200 ಕಿ.ಮೀ. ದೂರದ ತನ್ನ ಊರು ತಲುಪಲು ಪರದಾಡುತ್ತಿದ್ದ ವ್ಯಕ್ತಿಯೊಬ್ಬ ಬೈಕ್ ವೊಂದನ್ನು ಕದ್ದು, ತನ್ನ ಪತ್ನಿ ಜತೆ ಊರು ಸೇರಿದ್ದಾನೆ. ಬಳಿಕ ಕಳ್ಳತನ ಮಾಡಿದ್ದ ಬೈಕ್ ಅನ್ನು ಮಾಲೀಕನಿಗೆ ವಾಪಸ್ ಪಾರ್ಸಲ್ ಮಾಡುವ ಮೂಲಕ ಪ್ರಾಮಾಣಿಕತೆ ಮೇರೆದಿದ್ದಾನೆ. ಬೈಕ್ ವಾಪಸ್ ಬಂದಿದ್ದಕ್ಕೆ ಮಾಲೀಕ ಸಹ ಫುಲ್ ಖುಷ್ ಆಗಿದ್ದು, ಕಳ್ಳನಿಗೆ ಧನ್ಯವಾದ ಹೇಳಿದ್ದಾರೆ.

ಬೈಕ್ ಕದ್ದಿದ್ದ ಪ್ರಶಾಂತ್ ಎಂಬ ವ್ಯಕ್ತಿ, ಬೈಕ್ ಮಾಲೀಕ 34 ವರ್ಷದ ವಿ ಸುರೇಶ್ ಕಮಾರ್ ಎಂಬುವವರಿಗೆ ವಾಪಸ್ ಪಾರ್ಸಲ್ ಮಾಡಿದ್ದಾರೆ.

ಶನಿವಾರ ಅಚ್ಚರಿಯ ಪಾರ್ಸಲ್ ಸ್ವೀಕರಿಸಿದ ಸುರೇಶ್ ಕುಮಾರ್ ಅವರು, ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ್ದು, ಮೇ 18ರಂದು ನನ್ನ ವರ್ಕ್ ಶಾಪ್ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಕದಿಯಲಾಗಿತ್ತು. ಈ ಸಂಬಂಧ ನಾನು ಪೊಲೀಸರಿಗೆ ದೂರು ಸಹ ನೀಡಿದ್ದೆ ಮತ್ತು ನಾನು ಸಹ ಬೈಕ್ ಗಾಗಿ ಹುಡುಕಾಟ ನಡೆಸಿದ್ದೆ. 

ನೆರೆಹೊರೆಯ ಮತ್ತು ಸಮೀಪದ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಣ್ಣಂಪಲಯದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನನ್ನ ಬೈಕ್ ಕದ್ದಿರುವುದು ಪತ್ತೆಯಾಯಿತು. ಆತನ ಬಗ್ಗೆ ವಿಚಾರಿಸಿದಾಗ ಪ್ರಶಾಂತ್ ತನ್ನ ಪತ್ನಿ ಜತೆ ಊರಿಗೆ ಹೋಗಿರುವುದು ತಿಳಿಯಿತು. ಆದರೆ ಈಗ ಅವರು ಬೈಕ್ ಅನ್ನು ವಾಪಸ್ ಕಳುಹಿಸಿದ್ದು, ನಾನು 1400 ರೂಪಾಯಿ ಪಾರ್ಸಲ್ ಚಾರ್ಜ್ ನೀಡಿ ಬೈಕ್ ತೆಗೆದುಕೊಂಡಿದ್ದೇನೆ. ನನ್ನ ಬೈಕ್ ನನಗೆ ವಾಪಸ್ ಬಂದಿದ್ದದ್ದಕೆ ಖುಷಿಯಾಯಿತು ಎಂದಿದ್ದಾರೆ.

ನನ್ನ ಬೈಕ್ ಕದ್ದ ವ್ಯಕ್ಕಿಯ ಪರಿಸ್ಥಿತಿ ನನಗೂ ಅರ್ಥವಾಗುತ್ತೆ. ಬೈಕ್ ಹಿಂದಿರುಗಿಸಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ  ಎಂದು ಸುರೇಶ್‌ಕುಮಾರ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com