ಗಲ್ವಾನ್ ಕಣಿವೆ ಮೇಲೆ ಚೀನಾದ ಸಾರ್ವಭೌಮತ್ವದ ಹಕ್ಕು ತಿರಸ್ಕರಿಸಿದ ಭಾರತ ಸರ್ಕಾರ!

ಗಲ್ವಾನ್ ಕಣಿವೆಯ ಮೇಲೆ ಚೀನಾದ ಸಾರ್ವಭೌಮತ್ವದ ಹಕ್ಕನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಭಾರತ ಸರ್ಕಾರ ಚೀನಾದ ಹೇಳಿಕೆಯನ್ನು ತಿರಸ್ಕರಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಲ್ವಾನ್ ಕಣಿವೆಯ ಮೇಲೆ ಚೀನಾದ ಸಾರ್ವಭೌಮತ್ವದ ಹಕ್ಕನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಭಾರತ ಸರ್ಕಾರ ಚೀನಾದ ಹೇಳಿಕೆಯನ್ನು ತಿರಸ್ಕರಿಸಿದೆ. 

ಈಶಾನ್ಯ ಲಡಾಖ್ ನಲ್ಲಿ ಭಾರತೀಯ ಸೇನೆ-ಚೀನಾ ಸೇನೆ ನಡುವೆ ನಡೆದ ಸಂಘರ್ಷದ ಬಳಿಕ ಚೀನಾ ಗಲ್ವಾನ್ ಕಣಿವೆಯ ಮೇಲೆ ಹಕ್ಕು ಪ್ರತಿಪಾದನೆಯ ಮಾತುಗಳನ್ನಾಡಿತ್ತು. ಆದರೆ ಈ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಚೀನಾದ ಪ್ರತಿಪಾದನೆ ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದಿದೆ. 

ಚೀನಾದ ಪ್ರತಿಪಾದನೆ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಘ್ ಶ್ರೀವಾಸ್ತವ, ಗಲ್ವಾನ್ ಮೇಲಿನ ಹಕ್ಕು ಪ್ರತಿಪಾದನೆ ಅದರದ್ದೇ ಈ ಹಿಂದಿನ ನಿಲುವುಗಳಿಗೆ ಅನುಗುಣವಾಗಿಲ್ಲ ಎಂದು ಹೇಳಿದ್ದಾರೆ. ಗಲ್ವಾನ್ ಕಣಿವೆಗೆ ಸಂಬಂಧಿಸಿದ ನಿಲುವು ಐತಿಹಾಸಿಕವಾಗಿ ಸ್ಪಷ್ಟವಾಗಿದೆ ಎಂದು ಅನುರಾಗ್ ಶ್ರೀವಾಸ್ತವ ಸ್ಪಷ್ಟಪಡಿಸಿದ್ದಾರೆ. 

ಭಾರತ-ಚೀನಾದ ಪಶ್ಚಿಮ ಸೆಕ್ಟರ್ ಪ್ರದೇಶಗಳಲ್ಲಿ ಎಲ್ಎಸಿ ಹಾಗೂ ಇನ್ನಿತರ ಭಾಗಗಳನ್ನು ಅತಿಕ್ರಮಿಸುವ ಚೀನಾದ ಯತ್ನಗಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com