ಎಚ್-1 ಬಿ ವೀಸಾ ನಿಷೇಧ: ಅಮೆರಿಕ ಸರ್ಕಾರದ ಆದೇಶ 'ದಾರಿ ತಪ್ಪಿಸುವ ಕ್ರಮ ಮತ್ತು ಆರ್ಥಿಕತೆಗೆ ಹಾನಿಕಾರಕ': ನಾಸ್ಕಾಮ್

ಎಚ್-1 ಬಿ ವೀಸಾ ನಿಷೇಧಿಸಿರುವ ಅಮೆರಿಕ ಸರ್ಕಾರದ ಆದೇಶ 'ದಾರಿ ತಪ್ಪಿಸುವ ಮತ್ತು ಅಮೆರಿಕ ಆರ್ಥಿಕತೆಗೆ ಹಾನಿಕಾರಕ ನಡೆಯಾಗಿದೆ ಎಂದು ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮಗಳ ಒಕ್ಕೂಟ ನಾಸ್ಕಾಮ್ ಹೇಳಿದೆ.

Published: 23rd June 2020 12:57 PM  |   Last Updated: 23rd June 2020 01:02 PM   |  A+A-


Posted By : Srinivasamurthy VN
Source : The New Indian Express

ನವದೆಹಲಿ: ಎಚ್-1 ಬಿ ವೀಸಾ ನಿಷೇಧಿಸಿರುವ ಅಮೆರಿಕ ಸರ್ಕಾರದ ಆದೇಶ 'ದಾರಿ ತಪ್ಪಿಸುವ ಮತ್ತು ಅಮೆರಿಕ ಆರ್ಥಿಕತೆಗೆ ಹಾನಿಕಾರಕ ನಡೆಯಾಗಿದೆ ಎಂದು ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮಗಳ ಒಕ್ಕೂಟ ನಾಸ್ಕಾಮ್ ಹೇಳಿದೆ.

ಅತ್ತ ಅಮೆರಿಕ ಸರ್ಕಾರ ಹೆಚ್-1ಬಿ ವೀಸಾ ನಿಷೇಧಿಸಿದ ಬೆನ್ನಲ್ಲೇ ಇತ್ತ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ನಾಸ್ಕಾಮ್, ಅಮೆರಿಕ ಸರ್ಕಾರದ ಆದೇಶದಿಂದಾಗಿ ವಿದೇಶಗಳಲ್ಲಿರುವ ಪ್ರತಿಭಾನ್ವಿತರು ಅವಕಾಶ ವಂಚಿತರಾಗುತ್ತಾರೆ. ಅಂತೆಯೇ ಇದರಿಂದ ಅಮೆರಿಕ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು. ಸ್ಥಳೀಯ ಪ್ರತಿಭಾನ್ವಿತರ ಕೊರತೆ ಇದ್ದಾಗ ಉತ್ಪಾದನೆಯ ಮೇಲೆ ಹೊಡೆತ ಬೀಳುತ್ತದೆ. ಈಗಾಗಲೇ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಸಾಕಷ್ಟು ಸಂಸ್ಥೆಗಳು ಮುಚ್ಚಲ್ಪಟ್ಟಿದ್ದು, ಯುಎಸ್ ಸಿಐಎಸ್ ಮತ್ತು ಡಿಒಎಸ್ ಕಚೇರಿಗಳ ಸ್ಥಗಿತದಿಂದಾಗಿ ವೀಸಾಗಳ ಪ್ರಕ್ರಿಯೆ ವಿಳಂಬವಾಗಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ ಎಂದು ನಾಸ್ಕಾಮ್ ಅಭಿಪ್ರಾಯಪಟ್ಟಿದೆ.

ಈಹಿಂದೆ, ನಾಸ್ಕಾಮ್, ಯು.ಎಸ್. ಚೇಂಬರ್ ಆಫ್ ಕಾಮರ್ಸ್, ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್, ಕಾಂಪೆಟ್ ಅಮೆರಿಕಾ, ನ್ಯಾಷನಲ್ ಅಸೋಸಿಯೇಷನ್ ಆಫ್ ಮ್ಯಾನ್ಯುಫ್ಯಾಕ್ಚರರ್ಸ್, ಮತ್ತು ಅಮೆರಿಕನ್ ಯೂನಿವರ್ಸಿಟೀಸ್ ಅಸೋಸಿಯೇಷನ್ ಸೇರಿದಂತೆ ವ್ಯಾಪಾರ ಮತ್ತು ಉದ್ಯಮ ಸಂಸ್ಥೆಗಳು ಟ್ರಂಪ್ ಮತ್ತು ಅವರ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಸರ್ಕಾರದ ಕಠಿಣ ನೀತಿಗಳಿಂದಾಗಿ ಉದ್ಯೋಗ ಸೃಷ್ಟಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ನಿರ್ಣಾಯಕ ಮೂಲಸೌಕರ್ಯ ಸೇವೆಗಳನ್ನು ಈ ನಿಬಂಧನೆಗಳು ತಡೆಯುತ್ತದೆ. ಹೀಗಾಗಿ ನೀತಿ ಬದಲಿಸುವಂತೆ ಮನವಿ ಮಾಡಿದ್ದವು.

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಅಮೆರಿಕ ಕಂಪನಿಗಳ ಆದಾಯ ನೆಲಕಚ್ಚಿದ್ದು. ಈ ಹೊತ್ತಿನಲ್ಲಿ ಇಂತಹ ಕಠಿಣ ನಿರ್ಧಾರಗಳು ಮತ್ತಷ್ಟು ಮಾರಕವಾಗಿ ಪರಿಣಮಿಸುತ್ತವೆ. ಇದರಿಂದ ದೇಶದ ಆರ್ಥಿಕತೆ ಮೇಲೆ ಖಂಡಿತಾ ನಕಾರಾತ್ಮಕ ಪರಿಣಾಮ ಉಂಟಾಗಲಿದೆ. ಉತ್ಪಾದನೆ ಮತ್ತು ಮಾರಾಟ ಕುಸಿಯಲಿದೆ ಎಂದು ಹೇಳಿವೆ.

Stay up to date on all the latest ರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp