ಮುಂಬೈ: ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಶತಾಯುಷಿ!

ಕೋವಿಡ್-19 ಮಹಾಮಾರಿಯ ವಿರುದ್ದ ಆತ್ಮಸ್ಥೈರ್ಯದಿಂದ ಹೋರಾಡಿ, ಇದೀಗ ಗುಣಮುಖರಾಗಿರುವ 103 ವರ್ಷದ ಶತಾಯುಷಿಯೊಬ್ಬರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ
ಶತಾಯುಷಿ ದಾಖಲಾಗಿದ್ದ ಐಸೋಲೇಷನ್ ವಾರ್ಡ್
ಶತಾಯುಷಿ ದಾಖಲಾಗಿದ್ದ ಐಸೋಲೇಷನ್ ವಾರ್ಡ್

ಠಾಣೆ: ಕೋವಿಡ್-19 ಮಹಾಮಾರಿಯ ವಿರುದ್ದ ಆತ್ಮಸ್ಥೈರ್ಯದಿಂದ ಹೋರಾಡಿ, ಇದೀಗ ಗುಣಮುಖರಾಗಿರುವ 103 ವರ್ಷದ ಶತಾಯುಷಿಯೊಬ್ಬರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಶತಾಯುಷಿಯ 85 ವರ್ಷದ ಸಹೋದರ ಕೂಡಾ ಸೋಂಕಿನಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದು, ಅವರನ್ನು ಕೂಡಾ ಶೀಘ್ರದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಡಾ. ಸಾಮೀಟ್ ಸೊಹೊನಿ ಹೇಳಿದ್ದಾರೆ.

1917ರಲ್ಲಿ ಜನಿಸಿರುವ ಸಿದ್ದೇಶ್ವರ್ ಟಾಲೋ ಪ್ರದೇಶದ ಶತಾಯುಷಿ, ಒಂದು ವರ್ಷ ಹಿಂದಷ್ಟೇ ಸ್ಪಾನಿಶ್ ಪ್ಲೂ ಸಾಂಕ್ರಾಮಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದರು.ತಿಂಗಳ ಹಿಂದೆ ಕೊರೋನಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

20 ದಿನಗಳ ಕಾಲ ಐಸಿಯುನಲ್ಲಿ ಇಡಲಾಗಿತ್ತು. ನಂತರ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು,ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.ಶತಾಯುಷಿ ಮೊಮ್ಮಕ್ಕಳಿಗೂ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಕೆ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ಸೊಹೊನಿ ಹೇಳಿದ್ದಾರೆ.

ಈ ಮಧ್ಯೆ ಕೊರೋನಾವೈರಸ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಜುಲೈ 2ರಿಂದ ಠಾಣೆಯನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ಆಡಳಿತಾಧಿಕಾರಿಗಳು ಚಿಂತನೆ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com