ಮಗನ ಕಿರುಕುಳ ತಾಳಲಾರದೆ 'ದಯಾಮರಣ'ಕ್ಕೆ ಮೊರೆ ಇಟ್ಟ ವೃದ್ಧ ದಂಪತಿ

ಹೆತ್ತು, ಹೊತ್ತು ಸಾಕಿ ಸಲಹಿದ ಮಗನಿಂದಲೇ ಆಗುತ್ತಿದ್ದ ದೌರ್ಜನ್ಯ ಹಾಗೂ ಕಿರುಕುಳ ತಾಳಲಾರದೆ ವೃದ್ಧ ದಂಪತಿಗಳು ದಯಾಮರಣ ಕರುಣಿಸುವಂತೆ ಸರ್ಕಾರದ ಬಳಿ ಗೋಗರೆದಿರುವ ಘಟನೆಯೊಂದು ಚೆನ್ನೈನ ತಿರ್ಪುರ್ ನಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರ್ಪುರ್: ಹೆತ್ತು, ಹೊತ್ತು ಸಾಕಿದ ಮಗನಿಂದಲೇ ಆಗುತ್ತಿದ್ದ ದೌರ್ಜನ್ಯ ಹಾಗೂ ಕಿರುಕುಳ ತಾಳಲಾರದೆ ವೃದ್ಧ ದಂಪತಿಗಳು ದಯಾಮರಣ ಕರುಣಿಸುವಂತೆ ಸರ್ಕಾರದ ಬಳಿ ಗೋಗರೆದಿರುವ ಘಟನೆಯೊಂದು ಚೆನ್ನೈನ ತಿರ್ಪುರ್ ನಲ್ಲಿ ನಡೆದಿದೆ. 

ಚೆನ್ನಿಯಪ್ಪನ್ (85) ಹಾಗೂ ಕರುನಾಯ್'ಯಮ್ಮಳ್ (65) ಕುರುಕುಳ ಅನುಭವಿಸುತ್ತಿರುವ ವೃದ್ಧ ದಂಪತಿಗಳಾಗಿದ್ದು, ಕಿರುಕಳ ತಾಳಲಾರದೆ ದಯಾಮರಣ ಕರುಣಿಸುವಂತೆ ತಿರ್ಪುರ ಜಿಲ್ಲಾಧಿಕಾರಿಗಳಿ ಮನವಿ ಮಾಡಿಕೊಂಡಿದ್ದಾರೆ. 

ಮಗಳಿಗೆ ವಿವಾಹವಾಗಿದ್ದು, ಪತಿ ಮನೆಯಲ್ಲಿದ್ದಾಳೆ. ಇನ್ನು ಮಗ ಪಳನಿಸಾಮಿ ಜೊತೆಗೆ ನಾವು ವಾಸವಿದಿದ್ದವು. ಹಲವಾರು ಕಾರಣಗಳಿಂದ ಮಗ ಹಾಗೂ ಸೊಸೆ ನಮಗೆ ದೈಹಿಕ ಹಾಗೂ ಮಾನಸಿಕವಾಗಿ ನೋವು, ಹಿಂಸೆ ನೀಡುತ್ತಿದ್ದರು. ಕಿರುಕುಳ ತಾಳಲಾರದೆ, ಮನೆಯ ಮತ್ತೊಂದು ಭಾಗದಲ್ಲಿ ನಾವು ವಾಸವಿದ್ದೆವು. ಬಳಿಕ ಮಗನಿಗೆ ಒಂದು ಭಾಗದ ಮನೆಯನ್ನು ಆತನ ಹೆಸರಿಗೆ ಬರೆದುಕೊಟ್ಟಿದ್ದೆವು. ಆದರೂ, ನಮಗೆ ಕಿರುಕುಳ ನಿಲ್ಲಲಿಲ್ಲ. ಮನೆಯ ವಿದ್ಯುತ್, ನೀರು ವ್ಯವಸ್ಥೆಯನ್ನು ಕಡಿತಗೊಳಿಸುತ್ತಿದ್ದರು. ಬಳಿಕ ನಮ್ಮನ್ನೇ ನಿಂದಿಸುತ್ತಿದ್ದರು. ಈ ಸಂಬಂಧ ಪೊಲೀಸರಿಗೂ ದೂರು ನೀಡಿದ್ದೆವು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. 

ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ವಾಹನ ಸವಾರನೊಬ್ಬ ನನಗೆ ಗುದ್ದಿದ್ದ. ಈ ವೇಳೆ ಸ್ಥಳೀಯರು ನನ್ನ ಸಹಾಯಕ್ಕೆ ಧಾವಿಸಿದಾಗಲೂ ಯಾರೂ ಸಹಾಯ ಮಾಡದಂತೆ ನಿಂದಿಸಿದ್ದ. ಬಳಿಕ ನಾನೇ ನಿಧಾನಗತಿಯಲ್ಲಿ ಸ್ಥಳೀಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿಲ್ಲ. ಕಾಲು ಮೂಳೆ ಮರಿದಿತ್ತು. ಎರಡು ತಿಂಗಳು ಚಿಕಿತ್ಸೆ ಪಡೆದುಕೊಂಡಿದ್ದೆ ಎಂದು ಜಿಲ್ಲಾಧಿಕಾರಿಗಳ ಬಳಿ ಅಳಲು ತೋಡಿಕೊಂಡು ದಯಾಮರಣ ಕರುಣಿಸುವಂತೆ ಮೊರೆ ಇಟ್ಟಿದ್ದಾರೆಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com