ಕೊರೋನಾ ಬೆನ್ನಲ್ಲೇ ನೆರೆ ರಾಜ್ಯದಿಂದ ಬಂತು ಮತ್ತೊಂದು ಆಘಾತಕಾರಿ ಸುದ್ದಿ, ಗಡಿಯಲ್ಲಿ ಕಟ್ಟೆಚ್ಚರ!

ಮಾರಣಾಂತಿಕ ಕೊರೋನಾ ವೈರಸ್ ನಿಂದ ಕಂಗಲಾಗಿರುವ ಕರ್ನಾಟಕಕ್ಕೆ ಇದೀಗ ನೆರೆಯ ರಾಜ್ಯ ಕೇರಳದಿಂದ ಮತ್ತೊಂದು ಬರಸಿಡಿಲು ಬಂದೊದಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಳಿಕೋಡ್: ಮಾರಣಾಂತಿಕ ಕೊರೋನಾ ವೈರಸ್ ನಿಂದ ಕಂಗಲಾಗಿರುವ ಕರ್ನಾಟಕಕ್ಕೆ ಇದೀಗ ನೆರೆಯ ರಾಜ್ಯ ಕೇರಳದಿಂದ ಮತ್ತೊಂದು ಬರಸಿಡಿಲು ಬಂದೊದಗಲಿದೆ.

ಕೇರಳದ ಕೋಳಿಕೋಡ್ ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಕೋಳಿ ಫಾರಂ ಹಾಗೂ ಖಾಸಗಿ ನರ್ಸರಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ಕೂಡಲೇ ಕೇರಳ ಪಶುಸಂಗೋಪನಾ ಇಲಾಖೆ ತುರ್ತು ಸಭೆ ಕರೆದಿದೆ. 

ಪ್ರತಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಸಾಯುತ್ತಿರುವುದರಿಂದ ಅನುಮಾನಗೊಂಡುಡ ಕಣ್ಣೂರು ಲ್ಯಾಬ್ ಮತ್ತು ಭೋಪಾಲ್ ಲ್ಯಾಬ್ ಗಳಿಗೆ ಕಳುಹಿಸಲಾಗಿತ್ತು. ಇನ್ನು ಸ್ಯಾಂಪಲ್ ಗಳಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ. 

ಈ ಹಿನ್ನೆಲೆಯಲ್ಲಿ ಕೋಳಿ ಫಾರಂ ಸುತ್ತಲು ಹೈ ಅಲರ್ಟ್ ಘೋಷಿಸಲಾಗಿದೆ. ಇದೇ ವೇಳೆ ಕರ್ನಾಟಕದಲ್ಲೂ ಹೈ ಅಲರ್ಟ್ ಘೋಷಿಸಲಾಗಿದ್ದು ಗಡಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com