ಭಾರತದಲ್ಲಿ ಕೊರೋನಾ ಸೋಂಕು 84ಕ್ಕೆ ಏರಿಕೆ: ಜಗತ್ತಿನಾದ್ಯಂತ ಮಹಾಮಾರಿ ಕೊರೋನಾಗೆ 5082 ಮಂದಿ ಬಲಿ!

ಚೀನಾದಲ್ಲಿ ನರಮೇಧ ಸೃಷ್ಠಿಸಿದ್ದ ಕೊರೋನಾ ವೈರಸ್ ಇದೀಗ ಜಗತ್ತಿನಾದ್ಯಂತ ತೀವ್ರ ಪ್ರಮಾಣದಲ್ಲಿ ಹಬ್ಬುತ್ತಿದ್ದು ಒಟ್ಟಾರೆ ವಿಶ್ವದಾದ್ಯಂತ 5000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಚೀನಾದಲ್ಲಿ ನರಮೇಧ ಸೃಷ್ಠಿಸಿದ್ದ ಕೊರೋನಾ ವೈರಸ್ ಇದೀಗ ಜಗತ್ತಿನಾದ್ಯಂತ ತೀವ್ರ ಪ್ರಮಾಣದಲ್ಲಿ ಹಬ್ಬುತ್ತಿದ್ದು ಒಟ್ಟಾರೆ ವಿಶ್ವದಾದ್ಯಂತ 5000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 

ಭಾರತ ಸೇರಿ ಒಟ್ಟು 130 ರಾಷ್ಟ್ರಗಳಿಗೂ ಹೆಚ್ಚು ಕಡೆ ಹಬ್ಬಿರುವ ಕೊರೋನಾ ವೈರಸ್ ಗೆ ಕರ್ನಾಟಕದ ಕಲಬುರಗಿಯಲ್ಲಿ ವ್ಯಕ್ತಿಯೊರ್ವ ಮೃತಪಟ್ಟಿದ್ದಾನೆ. ಇದು ಭಾರತದ ಮಟ್ಟಿಗೆ ಮೊದಲ ಬಲಿಯಾಗಿದ್ದು 84ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. 

ಸೋಂಕಿತ ಪ್ರಕರಣಗಳ ಸಂಖ್ಯೆ ಕೂಡ 1,38,432ಕ್ಕೆ ಏರಿಕೆಯಾಗಿದ್ದು ಇದರಲ್ಲಿ 70,719 ಮಂದಿ ಗುಣಮುಖರಾಗಿದ್ದಾರೆ. 

ವೈರಸ್ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮಾಸ್, ಥಿಯೇಟರ್, ಸಭೆ-ಸಮಾರಂಭಗಳು, ಜಾತ್ರೆಗಳಿಗೂ ನಿಷೇಧ ಹೇರಲಾಗಿದೆ. ಇದೇ ವೇಳೆ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com