ಭಾರತೀಯರ ಸ್ಥಳಾಂತರದಲ್ಲಿ ಅವಿರತ ಸೇವೆ: ಏರ್ ಇಂಡಿಯಾದ ಧೈರ್ಯ ಕೊಂಡಾಡಿದ ಪ್ರಧಾನಿ ಮೋದಿ

ಕೊರೋನಾ ವೈರಸ್ ಪೀಡಿತ ರಾಷ್ಟ್ರಗಳಿಂದ ಜನರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಏರ್ ಇಂಡಿಯಾ ವಿಮಾನ ಸಂಸ್ಥೆಯ ಸಿಬ್ಬಂದಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಂಡಾಡಿದ್ದಾರೆ. 
ಮೋದಿ
ಮೋದಿ

ನವದೆಹಲಿ: ಕೊರೋನಾ ವೈರಸ್ ಪೀಡಿತ ರಾಷ್ಟ್ರಗಳಿಂದ ಜನರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಏರ್ ಇಂಡಿಯಾ ವಿಮಾನ ಸಂಸ್ಥೆಯ ಸಿಬ್ಬಂದಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಂಡಾಡಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಏರ್ ಇಂಡಿಯಾದ ತಂಡದ ದಬಗ್ಗೆ ಅತೀವ ಹೆಮ್ಮೆಯಿದೆ. ಧೈರ್ಯದಿಂದ ಸೇವೆ ಸಲ್ಲಿಸಿದ್ದು, ಮಾನವೀಯತೆ ಮೆರೆದಿದೆ. ಅವರ ಈ ಕಾರ್ಯಕ್ಕೆ ದೇಶದಾದ್ಯಂತ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಹೇಳಿದ್ದಾರೆ. 

ಕ್ಯಾಪ್ಟನ್ ಸ್ವಾತಿ ರಾವಲ್ ಮತ್ತು ಕ್ಯಾಪ್ಟನ್ ರಾಜಾ ಚೌಹಾನ್ ನೇತೃತ್ವದಲ್ಲಿ ಏರ್ ಇಂಡಿಯಾ ಬೋಯಿಂಗ್ 777 ವಿಮಾನದ ಸಿಬ್ಬಂದಿಗಳು ರೋಮ್ ನಲ್ಲಿದ್ದ 263 ಜನರನ್ನು ಏರ್ ಲಿಫ್ಟ್ ಮಾಡುತ್ತಿರುವ ಚಿತ್ರವನ್ನು ಟ್ವೀಟಿಸಿದ್ದ ವಿಮಾನಯಾನ ಸಚಿನ ಹರ್ದೀಪ್ ಸಿಂಗ್ ಪುರಿ ಅವರ ಟ್ವೀಟನ್ನು ಪ್ರಧಾನಿ ಮೋದಿಯವರು ರಿಟ್ವೀಟ್ ಮಾಡಿದ್ದಾರೆ. ಈ ಮೂಲಕ ಏರ್ ಇಂಡಿಯಾ ಸಂಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com