ಕೊರೋನಾ ಹಿನ್ನೆಲೆ: ಕೋರ್ಟ್ ಆವರಣ ಬಂದ್ ಮಾಡಿ, ಕಾರ್ಯಕಲಾಪ ಸ್ಥಗಿತಕ್ಕೆ ಮುಂದಾದ ಸುಪ್ರೀಂ!

ಕೊರೋನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ತನ್ನ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿ, ವರ್ಚುವಲ್ ವಿಧಾನಗಳ ಮೂಲಕ ತುರ್ತು ವಿಷಯಗಳ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮುಂದಾಗಿದೆ. 

Published: 23rd March 2020 01:43 PM  |   Last Updated: 23rd March 2020 02:30 PM   |  A+A-


Supremecourt1

ಸುಪ್ರೀಂಕೋರ್ಟ್

Posted By : Nagaraja AB
Source : PTI

ನವದೆಹಲಿ: ಕೊರೋನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ತನ್ನ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿ, ವರ್ಚುವಲ್ ವಿಧಾನಗಳ ಮೂಲಕ ತುರ್ತು ವಿಷಯಗಳ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮುಂದಾಗಿದೆ. 

ಮಂಗಳವಾರ ಸಂಜೆ ವೇಳೆಗೆ ಸುಪ್ರೀಂಕೋರ್ಟ್ ಆವರಣ ಹಾಗೂ ಸುತ್ತಮುತ್ತಲಿನ ಎಲ್ಲಾ ವಕೀಲರ ಕೊಠಡಿಗಳನ್ನು ಬಂದ್ ಮಾಡಲಾಗುವುದು ಎಂದು ಉನ್ನತ ನ್ಯಾಯಾಲಯ ತಿಳಿಸಿದೆ. 

ವಕೀಲರನ್ನು ನ್ಯಾಯಾಲಯಕ್ಕೆ ಬಾರದಂತೆ ತಡೆಯಲು ಸುಪ್ರೀಂಕೋರ್ಟ್ ಆಡಳಿತವು ಎಲ್ಲಾ ರೀತಿಯ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗುವುದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎಸ್.ಎ. ಬೊಬ್ದೆ ನೇತೃತ್ವದ ನ್ಯಾಯಪೀಠ ತಿಳಿಸಿದೆ. 

ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ವಕೀಲರನ್ನು ನ್ಯಾಯಾಲಯಕ್ಕೆ ಬರದಂತೆ ತಡೆಯಲು ಸುಪ್ರೀಂ ಕೋರ್ಟ್ ಆಡಳಿತವು ಎಲ್ಲಾ ಸಾಮೀಪ್ಯ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸುತ್ತದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ದುಶ್ಯಂತ್ ಡೇವ್ ಮಾತ್ರ ತುರ್ತು ಕಾರಣಗಳಿಗಾಗಿ ವಕೀಲರನ್ನು ಉನ್ನತ ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸಲು ಅಧಿಕಾರ ನೀಡಬಹುದು ಎಂದು ಎಲ್ ಎನ್ ರಾವ್ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿತು. ಮುಂದಿನ ಆದೇಶದವರೆಗೂ ವಕೀಲರು ನ್ಯಾಯಾಲಯದ ಆವರಣದಲ್ಲಿ ಸೇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ವಕೀಲರ ಸಂಘಟನೆಗಳು ಒತ್ತಾಯಿಸುತ್ತಿರುವಂತೆ ಕೋರ್ಟ್ ಕಾರ್ಯ ಕಲಾಪ ಸ್ಥಗಿತಗೊಳಿಸುವ ಅಥವಾ ಬೇಸಿಗೆಯ ರಜಾ ದಿನ ಮುಂದುವರೆಸುವ ಬಗ್ಗೆಇಂದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ  ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ಕೊರೋನಾಸೋಂಕಿನ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪ ಸ್ಥಗಿತಗೊಳಿಸುವಂತೆ ಸುಪ್ರೀಂಕೋರ್ಟ್ ಬಾರ್ ಕೌನ್ಸಿಲ್ ಅಸೋಸಿಷನ್ ಅಧ್ಯಕ್ಷರು ಸೇರಿದಂತೆ ವಿವಿಧ ವಕೀಲರ ಸಂಘಟನೆಗಳು ಒತ್ತಾಯಿಸಿದ್ದವು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp