ಜಗತ್ತಿನಾದ್ಯಂತ ಮಹಾಮಾರಿ ಕೊರೋನಾಗೆ 20,519 ಬಲಿ, ಲಾಕ್ ಡೌನ್ ನಡುವೆಯೂ ಭಾರತದಲ್ಲಿ 12 ಸಾವು!

ಕೊರೋನಾ ವೈರಸ್ ಹರಡುವಿಕೆ ತಡೆಯಲು ಭಾರತ 21 ದಿನಗಳ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿರುವ ಮಧ್ಯೆಯೂ ಬುಧವಾರ ಕನಿಷ್ಠ 70 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 606ಕ್ಕೆ ತಲುಪಿದೆ. ಇನ್ನು ಜಗತ್ತಿನಾದ್ಯಂತ ಸಾವಿನ ಸಂಖ್ಯೆ 20 ಸಾವಿರ ಗಡಿ ದಾಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ಹರಡುವಿಕೆ ತಡೆಯಲು ಭಾರತ 21 ದಿನಗಳ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿರುವ ಮಧ್ಯೆಯೂ ಬುಧವಾರ ಕನಿಷ್ಠ 70 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 606ಕ್ಕೆ ತಲುಪಿದೆ. ಇನ್ನು ಜಗತ್ತಿನಾದ್ಯಂತ ಸಾವಿನ ಸಂಖ್ಯೆ 20 ಸಾವಿರ ಗಡಿ ದಾಟಿದೆ.

ಜಗತ್ತಿನಾದ್ಯಂತ 4,53,074 ಮಂದಿಗೆ ಸೋಂಕು ಹರಡಿದ್ದು 20,519 ಮಂದಿ ಬಲಿಯಾಗಿದ್ದಾರೆ. ಇನ್ನು ಇಂದು ಹೊಸದಾಗಿ 30 ಸಾವಿರಕ್ಕೂ ಹೆಚ್ಚು ಹೊಸದಾಗಿ ಪ್ರಕರಣಗಳು ದಾಖಲಾಗಿವೆ. ಇಂದು ಒಂದೇ ದಿನ 1,629 ಮಂದಿ ಬಲಿಯಾಗಿದ್ದಾರೆ. 

ಇಟಲಿಯಲ್ಲಿ ಮತ್ತೆ ಒಂದೇ ದಿನ 683 ಮಂದಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 7.503ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಸ್ಪೇನ್ ನಲ್ಲೂ 443 ಮಂದಿ ಸಾವನ್ನಪ್ಪಿದ್ದು 3,434 ಮಂದಿ ಸಾವನ್ನಪ್ಪಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com