ಭಾರತ ಲಾಕ್ ಡೌನ್; ಏಪ್ರಿಲ್ 14ರವರೆಗೂ ರೈಲುಗಳ ಸೇವೆ ಇಲ್ಲ

ಮಾರ್ಚ್ 31ರವರೆಗೆ ಸರಕು ರೈಲುಗಳನ್ನು ಹೊರತುಪಡಿಸಿ ಎಲ್ಲಾ ರೈಲುಗಳನ್ನು ರದ್ದುಗೊಳಿಸಿರುವುದಾಗಿ ಈ ಹಿಂದೆಯೇ ಪ್ರಕಟಿಸಿದ್ದ ರೈಲ್ವೆ ಇಲಾಖೆ ಈಗ ಈ ಗಡುವನ್ನು ಏಪ್ರಿಲ್ 14 ರವರೆಗೆ ವಿಸ್ತರಿಸಿದೆ. ಏಪ್ರಿಲ್ 14 ರವರೆಗೆ ಗೂಡ್ಸ್ ರೈಲುಗಳು ಹೊತುಪಡಿಸಿ ಉಳಿದ ರೈಲುಗಳು ಸಂಚರಿಸುವುದಿಲ್ಲ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.
ಭಾರತೀಯ ರೈಲ್ವೆ
ಭಾರತೀಯ ರೈಲ್ವೆ

ನವದೆಹಲಿ: ದೇಶಾದ್ಯಂತ ಸಾರ್ವಜನಿಕರು 21 ದಿನಗಳ ಕಾಲ ಲಾಕ್ ಡೌನ್ ಪಾಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ಬೆನ್ನಲ್ಲೇ ಭಾರತೀಯ ರೈಲ್ವೆ ಪ್ರಮುಖ ನಿರ್ಧಾರ ಕೈಗೊಂಡಿದೆ.

ಮಾರ್ಚ್ ೩೧ರವರೆಗೆ ಸರಕು ರೈಲುಗಳನ್ನು ಹೊರತುಪಡಿಸಿ ಎಲ್ಲಾ ರೈಲುಗಳನ್ನು ರದ್ದುಗೊಳಿಸಿರುವುದಾಗಿ ಈ ಹಿಂದೆಯೇ ಪ್ರಕಟಿಸಿದ್ದ ರೈಲ್ವೆ ಇಲಾಖೆ ಈಗ ಈ ಗಡುವನ್ನು ಏಪ್ರಿಲ್ 14 ರವರೆಗೆ ವಿಸ್ತರಿಸಿದೆ. ಏಪ್ರಿಲ್ 14 ರವರೆಗೆ ಗೂಡ್ಸ್ ರೈಲುಗಳು ಹೊತುಪಡಿಸಿ ಉಳಿದ ರೈಲುಗಳು ಸಂಚರಿಸುವುದಿಲ್ಲ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.

ಬಸ್‌ಗಳಿಗಿಂತ, ರೈಲುಗಳಲ್ಲಿ ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚು. ದೇಶವ್ಯಾಪ್ತಿ ಲಾಕ್ ಡೌನ್ ಈಗಾಗಲೇ ಜಾರಿಯಲ್ಲಿರುವುದರಿಂದ, ಸಾರಿಗೆ ಸೌಲಭ್ಯಗಳು ಸ್ಥಗಿತಗೊಂಡಿವೆ. ಸದಾ ಹಳಿಗಳ ಚಲಿಸುತ್ತಿದ್ದ ರೈಲ್ವೆಗಳು ಈಗ ಎಲ್ಲೆಂದರಲ್ಲಿ ನಿಂತಿರುವುದರಿಂದ ಜನ ಜೀವನ ಸಂಪೂರ್ಣ ಸ್ಥಗಿತಗೊಂಡಿದೆ.

ದೇಶದಲ್ಲಿ ಈಗಾಗಲೇ 600ಕ್ಕೂ ಹೆಚ್ಚು ಜನರಲ್ಲಿ ಸೋಂಕು ತಗುಲಿದ್ದು, 10 ಜನರು ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com