ಕೋವಿಡ್-19 ಹೋರಾಟ: ಟಾಟಾ 500 ಕೋಟಿ ರೂ., ಅಕ್ಷಯ್ ಕುಮಾರ್ 25 ಕೋಟಿ ರೂ ದೇಣಿಗೆ, ನೀವೂ ಸಹಾಯ ಮಾಡಬೇಕೆ? ಇಲ್ಲಿದೆ ವಿವರ!

ವಿಶ್ವದ 190 ದೇಶಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಉದ್ಯಮಿಗಳು, ಬಾಲಿವುಡ್ ನಟರು ಕೈ ಜೋಡಿಸಿದ್ದು, ನೂರಾರು ಕೋಟಿ ರೂಗಳನ್ನು ದೇಣಿಗೆ ರೂಪದಲ್ಲಿ ಸರ್ಕಾರಕ್ಕೆ ನೀಡುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಿಶ್ವದ 190 ದೇಶಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಉದ್ಯಮಿಗಳು, ಬಾಲಿವುಡ್ ನಟರು ಕೈ ಜೋಡಿಸಿದ್ದು, ನೂರಾರು ಕೋಟಿ ರೂಗಳನ್ನು ದೇಣಿಗೆ ರೂಪದಲ್ಲಿ ಸರ್ಕಾರಕ್ಕೆ ನೀಡುತ್ತಿದ್ದಾರೆ.

ಭಾರತೀಯರಿಂದ ಸಕಾರಾತ್ಮಕ ಪ್ರತಿಕ್ರಿಯೆ
ದೇಶದಲ್ಲಿ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಭಾರತ ಈ ಸಾಂಕ್ರಾಮಿಕ ಕಾಯಿಲೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೋವಿಡ್ -19 ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಟೀಕೆಗಳಿಗೆ ಉತ್ತರಿಸಿದ ಮಾಹಿತಿ  ಮತ್ತು ಪ್ರಸರಣ ಸಚಿವಾಲಯ, ಕೊರೋನಾ ವೈರಸ್ ಅನ್ನು ಸಾಂಕ್ರಾಮಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸುವ ಮುನ್ನವೇ ಸರ್ಕಾರ ಸಮಗ್ರ ವ್ಯವಸ್ಥೆಯನ್ನು ಕೈಗೊಂಡಿತ್ತು. ವಿದೇಶದಿಂದ ಆಗಮಿಸುವವರ ತಪಾಸಣೆ, ವೀಸಾ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ರದ್ದತಿಯನ್ನು  ಕೂಡ ಇತರ ದೇಶಗಳಿಗಿಂತ ಮೊದಲೇ ಕೈಗೊಳ್ಳಲಾಗಿತ್ತು ಎಂದಿದ್ದಾರೆ. ಕೆಲ ಪ್ರಭಾವಿ ವ್ಯಕ್ತಿಗಳಿಗೆ ತಪಾಸಣೆ ನಡೆಸದೆ ಒಳಬರಲು ಅವಕಾಶ ಕಲ್ಪಿಸಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಸಚಿವಾಲಯ, ಯಾವುದೇ ವ್ಯಕ್ತಿಗೆ ತಪಾಸಣೆಯಿಂದ ವಿನಾಯಿತಿ ನೀಡಲಾಗಿಲ್ಲ.  ಶಂಕಿತರನ್ನು ಪ್ರತ್ಯೇಕವಾಗಿರಿಸಿ ತಪಾಸಣೆ ನಡೆಸಲಾಗಿದೆ. ಇದು ವ್ಯವಹಾರ ನಿಮಿತ್ತ, ಪ್ರವಾಸ ವಿದೇಶಕ್ಕೆ ಹೋದವರು, ವಿದ್ಯಾರ್ಥಿಗಳು ಮತ್ತು ವಿದೇಶಿಗರನ್ನು ಒಳಗೊಂಡಿದೆ. 
Board of Control for Cricket in India to contribute Rs 51 Crores to Prime Minister’s Citizen Assistance and Relief in Emergency Situations Fund (PM-CARES Fund) to fight COVID19 pic.twitter.com/FP7CuyBGF3

500 ಕೋಟಿ ನೀಡಿದ ರತನ್ ಟಾಟಾ
ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿದೆ. ಈ ಕುರಿತು ರತನ್ ಟಾಟಾ ಟ್ವೀಟ್ ಮಾಡಿದ್ದು, 'ಟಾಟಾ ಟ್ರಸ್ಟ್ ದೇಶದ ರಕ್ಷಣೆ ಹಾಗೂ ಪೀಡಿತ ಸಮುದಾಯಗಳ  ಸಬಲೀಕರಣಕ್ಕೆ ಬದ್ದವಾಗಿದ್ದು, 500 ಕೋಟಿ ರೂ. ದೇಣಿಗೆ ನೀಡುತ್ತಿದೆ' ಎಂದಿದ್ದರು. ಈ ಮೊತ್ತವನ್ನು ವೈದ್ಯರಿಗೆ ವೈಯಕ್ತಿಕ ರಕ್ಷಣಾ ಉಪಕರಣಗಳ ಖರೀದಿ, ರೋಗಿಗಳಿಗೆ ಶ್ವಾಸಕೋಶ ವ್ಯವಸ್ಥೆ, ತಪಾಸಣಾ ಕಿಟ್ ಗಳು, ಆಧುನಿಕ ತಪಾಸಣಾ ಸೌಲಭ್ಯಗಳ ಖರೀದಿ ಮತ್ತು ಆರೋಗ್ಯ  ಕಾರ್ಯಕರ್ತರು ಮತ್ತು ಸಾಮಾನ್ಯ ಜನತೆಯ ತರಬೇತಿಗೆ ಬಳಸಿಕೊಳ್ಳಬಹುದು ಎಂದು ಟಾಟಾ ತಿಳಿಸಿದ್ದಾರೆ.

೨೫ ಕೋಟಿ ರೂ ದೇಣಿಗೆ ಪ್ರಕಟಿಸಿದ ಅಕ್ಷಯ್ ಕುಮಾರ್
ಇನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಬೃಹತ್ ಪ್ರಮಾಣದ ದೇಣಿಗೆ ಪ್ರಕಟಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೈಗೊಂಡಿರುವ ಕೊರೊನಾ ನಿಯಂತ್ರಣ ಕ್ರಮಗಳಿಗಾಗಿ ತಮ್ಮ ಉಳಿತಾಯ ಖಾತೆಯಿಂದ ೨೫ ಕೋಟಿ ರೂ.ಗಳ ದೇಣಿಗೆಯನ್ನು ಪ್ರಕಟಿಸಿ ಅಕ್ಷಯ್ ಕುಮಾರ್  ಉದಾರತೆಯನ್ನು ಮೆರೆದಿದ್ದಾರೆ. ಈ ಮೊತ್ತವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಲಿದ್ದೇನೆ ಎಂದು ಅವರು ಟ್ವೀಟ್ ನಲ್ಲಿ ಪ್ರಕಟಿಸಿದ್ದಾರೆ.

100 ಕೋಟಿ ನೀಡಿದ ವೇದಾಂತ ಗ್ರೂಪ್
ಇನ್ನು ವೇದಾಂತ ಗ್ರೂಪ್ ನ ಮುಖ್ಯಸ್ಥ ಅನಿಲ್ ಅಗರ್ವಾಲ್ ಅವರು 100 ಕೋಟಿ ರೂಗಳ ದೇಣಿಗೆ ಪ್ರಕಟಿಸಿದ್ದಾರೆ. 

ನೀವೂ ಕೂಡ ಸಹಾಯಹಸ್ತ ಚಾಚಬೇಕೇ ಇಲ್ಲಿದೆ ಮಾಹಿತಿ
ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕೇರ್ಸ್ ಫಂಡ್ ಆರಂಭಿಸಿದ್ದು, ಆಸಕ್ತರು ಇದಕ್ಕೆ ತಮ್ಮ ಕೈಲಾದ ನೆರವು ಸಲ್ಲಿಸಬಹುದು. ಈಗಾಗಲೇ ಇದಕ್ಕೆ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಗೌತಮ್ ಗಂಭೀರ್ ರಂತಹ  ಖ್ಯಾತನಾಮ ಕ್ರಿಕೆಟಿಗರು, ತೆಲುಗು ಸಿನಿ ರಂಗದ ಖ್ಯಾತನಾಮ ನಟರು, ಬಾಲಿವುಡ್ ನಟರು, ನಿರ್ಮಾಪಕರು ದೇಣಿಗೆ ರೂಪದಲ್ಲಿ ನೆರವು ನೀಡುತ್ತಿದ್ದಾರೆ. ಅಲ್ಲದೆ ದೇಶದ ಪ್ರಮುಖ ಉದ್ಯಮಿಗಳೂ ಕೂಡ ನೂರಾರು ಕೋಟಿ ನೆರವು ನೀಡುತ್ತಿದ್ದಾರೆ. 

ಇನ್ನು ನೀವು ಕೂಡ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹಣ ನೆರವು ನೀಡಲು ಬಯಸಿದರೆ ಈ ಕೆಳಕಂಡ ಬ್ಯಾಂಕ್ ಖಾತೆಯ ವಿವರಕ್ಕೆ ಹಣ ಸಂದಾಯ ಮಾಡಬಹುದು. ಇಲ್ಲವೆ ಈ pmindia.gov.in ವೆಬ್ ತಾಣಕ್ಕೆತೆರಳಿ ಅಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಇಂಟರ್ ನೆಟ್  ಬ್ಯಾಂಕಿಂಗ್, ಆರ್ ಟಿಜಿಎಸ್, ಎನ್ ಇಎಫ್ ಟಿ ಯುಪಿಐ (ಗೂಗಲ್ ಪೇ, ಫೋನ್ ಪೇ, ಅಮೇಜಾನ್ ಪೇ, ಭೀಮ್, ಪೇಟಿಎಂ, ಮೊಬಿಕ್ವಿಕ್ ಮತ್ತು ಇತರೆ) ಮೂಲಕವೂ ಹಣ ಸಂದಾಯ ಮಾಡಬಹುದು. 
Name of the Account : PM CARES
Account Number : 2121PM20202
IFSC Code          : SBIN0000691
SWIFT Code        : SBININBB104
Name of Bank & Branch : State Bank of India, New Delhi Main Branch
UPI ID : pmcares@sbi

People from all walks of life expressed their desire to donate to India’s war against COVID-19.

Respecting that spirit, the Prime Minister’s Citizen Assistance and Relief in Emergency Situations Fund has been constituted. This will go a long way in creating a healthier India.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com