'ಕೊರೋನಾ ಮಹಾಮಾರಿ ತಡೆಗೆ 21 ದಿನದ ಲಾಕ್ ಡೌನ್ ಸಾಕಾಗುವುದಿಲ್ಲ'! 

ಭಾರತ ಕೊರೋನಾ ವೈರಸ್ ತಡೆಗಟ್ಟುವುದಕ್ಕೆ 3 ವಾರಗಳ ಕಾಲ ಲಾಕ್ ಡೌನ್ ಘೋಷಿಸಿರುವುದು ವೈರಸ್ ಹರಡುವುದಿಕೆ ತಡೆಗೆ ಸಾಕಾಗುವುದಿಲ್ಲ ಎಂದು ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 
'ಕೊರೋನಾ ಮಹಾಮಾರಿ ತಡೆಗೆ 21 ದಿನದ ಲಾಕ್ ಡೌನ್ ಸಾಕಾಗುವುದಿಲ್ಲ'!
'ಕೊರೋನಾ ಮಹಾಮಾರಿ ತಡೆಗೆ 21 ದಿನದ ಲಾಕ್ ಡೌನ್ ಸಾಕಾಗುವುದಿಲ್ಲ'!

ನವದೆಹಲಿ: ಭಾರತ ಕೊರೋನಾ ವೈರಸ್ ತಡೆಗಟ್ಟುವುದಕ್ಕೆ 3 ವಾರಗಳ ಕಾಲ ಲಾಕ್ ಡೌನ್ ಘೋಷಿಸಿರುವುದು ವೈರಸ್ ಹರಡುವುದಿಕೆ ತಡೆಗೆ ಸಾಕಾಗುವುದಿಲ್ಲ ಎಂದು ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 

ಒಮ್ಮೆ ಗುಣಮುಖವಾದಂತೆ ತೋರಿ ಮರುಕಳಿಸುವ ಸಾಧ್ಯತೆಗಳಿದ್ದು, ತಿಂಗಳುಗಳಲ್ಲಿ ಸಾವಿರಾರು ಜನರಿಗೆ ವ್ಯಾಪಿಸುವ ಸಾಧ್ಯತೆ ಇರುವ ವೈರಸ್ ಗೆ ಸಂಬಂಧಪಟ್ಟಂತೆ ಕೇಂಬ್ರಿಡ್ಜ್ ಸಂಶೋಧಕರ ಸಲಹೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಪರಿಶೀಲಿಸುತ್ತಿದೆ.  

ನಿಯಮಿತ ಅಂತರದಲ್ಲಿ ಮೂರು ಬಾರಿ ಲಾಕ್ ಡೌನ್ ಗೆ ಕೇಂಬ್ರಿಡ್ಜ್ ಸಂಶೋಧಕರು ಸಲಹೆ ನೀಡಿದ್ದು, 5 ದಿನಗಳ ಅಂತರ ನೀಡುವುದಕ್ಕೆ ಹೇಳಿದೆ. 21 ದಿನಗಳು, 28 ದಿನಗಳು, 18 ದಿನಗಳು ಈ ಮಧ್ಯದಲ್ಲಿ 5 ದಿನಗಳ ಸಡಿಲಿಕೆ ನೀಡುವುದು ಕೊರೋನಾ ವೈರಸ್ ಹರಡುವಿಕೆ ತಡೆ ಹೋರಾಟಕ್ಕೆ ಇರುವ ಪರಿಣಾಮಕಾರಿ ಲಾಕ್ ಡೌನ್ ವಿಧಾನ ಎಂದು ಅಭಿಪ್ರಾಯಪಟ್ಟಿದ್ದಾರೆ.

ಯುನಿವರ್ಸಿಟಿ ಆಫ್ ಕೇಂಬ್ರಿಡ್ಜ್ ನ ಗಣಿತ ವಿಜ್ಞಾನ ವಿಭಾಗದ ರೋನೊಜೋಯ್ ಅಧಿಕಾರಿ ಹಾಗೂ ರಾಜೇಶ್ ಸಿಂಗ್ ಕೊರೋನಾ ನಿಯಂತ್ರಣಕ್ಕಾಗಿ ಭಾರತಕ್ಕಾಗಿಯೇ ಮಾದರಿಯನ್ನು ತಯಾರಿಸಿದ್ದಾರೆ. 

ಮನೆ ಹಾಗೂ ಕೆಲಸದ ಸ್ಥಳಗಳಲ್ಲಿರುವ ಸಾಮಾಜಿಕ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ನಡೆಸಿರುವ ಗಣಿತ ವಿಜ್ಞಾನ ವಿಭಾಗದ ಸಂಶೋಧಕರು ಕೊರೋನಾದಿಂದ ಉಂಟಾಗಬಹುದಾದ ಮರಣ ಪ್ರಮಾಣಗಳನ್ನೂ ಅಂದಾಜಿಸಿದ್ದು, ಒಂದು ವೇಳೆ ಸೋಶಿಯಲ್ ಡಿಸ್ಟೆನ್ಸಿಂಗ್ ನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇದ್ದರೆ ಭಾರತದಲ್ಲಿ 60-64 ವಯಸ್ಸಿನ 6 ಲಕ್ಷ ಜನ, 65-69 ವಯಸ್ಸಿನ 4 ಲಕ್ಷ ಜನ 20 ವಯಸ್ಸಿನ 3 ಲಕ್ಷ ಜನರು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. 

ಭಾರತ ಮಾ.25 ರಿಂದ ಕೈಗೊಂಡಿರುವ ಲಾಕ್ ಡೌನ್ ನಿಂದಾಗಿ ಹೊಸ ವೈರಾಣು ಹರಡುವಿಕೆ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ಮೇ.15 ರ ವೇಳೆಗೆ ಮತ್ತೆ, 6,000 ಕ್ಕಿಂತ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಈ ರೀತಿಯಾಗಬಾರದೆಂದರೆ, ಕೊರೋನಾ ವಿರುದ್ಧ ಹೋರಾಡಲು 49 ದಿನಗಳ ಲಾಕ್ ಡೌನ್ ಅಗತ್ಯ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com