ಕೊರೋನಾ ವಿರುದ್ಧ ಹೋರಾಟ: ವೈದ್ಯಕೀಯ ಸಿಬ್ಬಂದಿಗಳಿಗೆ ಸೇನೆಯಿಂದ ಫ್ಲೈ ಪಾಸ್ಟ್ ಗೌರವ, ಆಸ್ಪತ್ರೆಗಳ ಮೇಲೆ ಹೂ ಮಳೆ

ದೇಶದಲ್ಲಿ ಕೊರೋನಾ ವೈರಸ್ ರೌದ್ರನರ್ತನ ಮುಂದುವರೆಸಿದ್ದು, ವೈರಸ್ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದಿಟ್ಟ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಲು ಭಾರತೀಯ ಸೇನೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೊರೋನಾ ವಾರಿಯರ್ಸ್ ಕೇಂದ್ರಗಳ ಮೇಲೆ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸು ಗೌರವ ಸಲ್ಲಿಸಲಿದೆ. 
ಬಿಪಿನ್ ರಾವತ್
ಬಿಪಿನ್ ರಾವತ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ರೌದ್ರನರ್ತನ ಮುಂದುವರೆಸಿದ್ದು, ವೈರಸ್ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದಿಟ್ಟ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಲು ಭಾರತೀಯ ಸೇನೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೊರೋನಾ ವಾರಿಯರ್ಸ್ ಕೇಂದ್ರಗಳ ಮೇಲೆ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸು ಗೌರವ ಸಲ್ಲಿಸಲಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಆಯಾ ಸೇನಾ ನೆಲೆಗಳಲ್ಲಿರುವ ಹೆಲಿಕಾಪ್ಟರ್ ಮೂಲಕ ಪ್ರತಿ ಜಿಲ್ಲೆಗಳಲ್ಲಿನ ಕೊರೋನಾ ಚಿಕಿತ್ಸೆ ನೀಡತ್ತಿರುವ ಆಸ್ಪತ್ರೆಗಳ ಮೇಲೆ ಹಾಗೂ ಚಿಕಿತ್ಸೆ ನೀಡುತ್ತಿರುವ ಸಿಬ್ಬಂದಿಗಳ ಮೇಲೆ ಭಾರತೀಯ ಸೇನ ಆಗಸದಿಂದ ಹೂಮಳೆ ಸುರಿಸಲಿದೆ. ಮೇ.3ರ ಭಾನುವಾರ ಸಂಪೂರ್ಣ ಭಾರತದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹೂಮಳೆ ಸುರಿಸಲಿದೆ ಎಂದು ಹೇಳಿದ್ದಾರೆ. 

ಕೊರೋನಾ ವೈರಸ್ ಮಟ್ಟಹಾಕಲು ದಿಟ್ಟ ಹೋರಾಟ ಮಾಡುತ್ತಿರುವ ವೈದ್ಯರು, ಸ್ಯಾಟಿಟೈಸೇಷನ್ ಮಾಡುತ್ತಿರುವ ನೌಕರರು, ಮಾಧ್ಯಮವರ್ಗದವರು, ಪೊಲೀಸರಿಗೆ ಗೌರವ ಸಲ್ಲಿಸಲಾಗುತ್ತದೆ. 

ಶ್ರೀನಗರದಿಂದ ತಿರುವನಂತಪುರದವರೆಗೆ ಸೇನೆ ಫ್ಪೈ ಪಾಸ್ಟ್ ನಡೆಸಲಿದ್ದು, ಈ ವೇಳೆ ಆಸ್ಪತ್ರೆಗಳ ಮೇಲೆ ಹೂಮಳೆ ಸುರಿಸಿ ಕೊರೋನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಲಾಗುವುದು. ಇದೇ ರೀತಿ ಅಸ್ಸಾಂನ ದಿಬ್ರುಗರ್ಹ್ ಮತ್ತು ಗುಜರಾತ್ ರಾಜ್ಯದ ಕಚ್ ನಲ್ಲಿಯೂ ಗೌರವ ಸಲ್ಲಿಸಲಾಗುತ್ತದೆ. ನೌಕಾಪಡೆ ಕೂಡ ಮೇ3 ರಂದು ಕರಾವಳಿ ಪ್ರದೇಶಗಳಲ್ಲಿ ಯುದ್ಧನೌಕೆಗಳನ್ನು ನಿಯೋಜನೆಗೊಳಿಸಿ ಗೌರವ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ. 

ದೇಶದಲ್ಲಿರುವ ನಮ್ಮ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೆಡ್ ಝೋನ್ ನಲ್ಲಿ ಕಾರ್ಯನಿರ್ವಹಿಸುತ್ತಾರೆ. ರೆಡ್ ಝೋನ್ ನಲ್ಲಿನ ಪರಿಸ್ಥಿತಿ ನಿಭಾಯಿಸುವ ಸಾಮರ್ಥ್ಯ ಅವರಿಗಿದೆ. ಈ ವರೆಗೂ ಸೇನಾಪಡೆ ನಿಯೋಜಿಸುವ ಅವಶ್ಯಕತೆಗಳು ಬಂದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com