ಚೆನ್ನೈ: 'ಮುಸ್ಲಿಂ ನೌಕರರು ಇಲ್ಲ' ಟ್ಯಾಗ್ ಲೈನ್ ಬಳಸಿ ಉತ್ಪನ್ನ ಪ್ರಚುರಪಡಿಸುತ್ತಿದ್ದ ಬೇಕರಿ ಮಾಲೀಕ ಬಂಧನ

ತಮ್ಮ ಸಂಸ್ಥೆಯಲ್ಲಿ ಮುಸ್ಲಿಂ ನೌಕರರು ಇಲ್ಲ ಎಂಬ ಟ್ಯಾಗ್ ಲೈನ್ ಬಳಸಿಕೊಂಡು ಉತ್ಪನ್ನಗಳನ್ನು ಪ್ರಚುರ ಪಡಿಸುತ್ತಿದ್ದ  ಆರೋಪದ ಮೇರೆಗೆ 32 ವರ್ಷದ ಬೇಕರಿ ಮಾಲೀಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ:  ತಮ್ಮ ಸಂಸ್ಥೆಯಲ್ಲಿ ಮುಸ್ಲಿಂ ನೌಕರರು ಇಲ್ಲ ಎಂಬ ಟ್ಯಾಗ್ ಲೈನ್ ಬಳಸಿಕೊಂಡು ಉತ್ಪನ್ನಗಳನ್ನು ಪ್ರಚುರ ಪಡಿಸುತ್ತಿದ್ದ  ಆರೋಪದ ಮೇರೆಗೆ 32 ವರ್ಷದ ಬೇಕರಿ ಮಾಲೀಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಬಂಧಿತ ವ್ಯಕ್ತಿ ಬೇಕರಿ ಉತ್ಪನ್ನಗಳನ್ನು ಪ್ರಚುರಪಡಿಸುವ ಉದ್ದೇಶದಿಂದ  ವಾಟ್ಸಾಪ್ ಗ್ರೂಪ್ ನಲ್ಲಿ ಆರ್ಡರ್ ಮೇಲೆ ಜೈನರು ಮಾಡಿದ್ದಾರೆ. ಮುಸ್ಲಿಂ ಸಿಬ್ಬಂದಿ ಇಲ್ಲ ಎಂಬ ಟ್ಯಾಗ್ ಲೈನ್ ಬಳಸಿ ಆನ್ ಲೈನ್ ನಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. 

ಇಂತಹ ಟ್ಯಾಗ್ ಲೈನ್ ಮುಸ್ಲಿಂ ಸಮುದಾಯದ ಬಗ್ಗೆ ಕೆಟ್ಟ ಭಾವನೆ ಮೂಡಿಸುತ್ತದೆ ಎಂದು ಆರೋಪಿಸಿ ಬೇಕರಿ ಮಾಲೀಕನ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಸಂಬಂಧ ಮಾಂಬಲಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿರುವುದಾಗಿ ಹೇಳಿಕೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿಗೆ ಡೆಲಿವರಿ ವ್ಯಕ್ತಿ ಮುಸ್ಲಿಂ ಆಗಿದ್ದರಿಂದ ಆನ್ ಲೈನ್ ನಲ್ಲಿ ಆರ್ಡರ್ ಮಾಡಲಾಗಿದ್ದ ದಿನಸಿ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ನಿರಾಕರಿಸಿದ ವ್ಯಕ್ತಿಯೊಬ್ಬನನ್ನು ಮುಂಬೈನಲ್ಲಿ ಬಂಧಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com