ಅರ್ನಾಬ್ ಗೋಸ್ವಾಮಿಗೆ ಬಂಧನದಿಂದ ರಕ್ಷಣೆ ವಿಸ್ತರಿಸಿದ ಸುಪ್ರೀಂ ಕೋರ್ಟ್

 ಕೋಮು ಸೌಹಾರ್ದತೆಗೆ ಭಂಗ ತಂದ ಆರೋಪದ ಮೇಲೆ ತನ್ನ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಸಲ್ಲಿಸಿದ್ದ ಮನವಿಯ ಆದೇಶವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.ಅಷ್ಟೇ ಅಲ್ಲದೆ ಏಪ್ರಿಲ್ 24 ರಂದು ಗೋಸ್ವಾಮಿಗೆ ನೀಡಲಾದ ಮಧ್ಯಂತರ ರಕ್ಷಣೆ ಯನ್ನು ಆದೇಶದ ಘೋಷಣೆಯಾಗುವವರೆಗೆ ಮುಂದುವರಿಸಬೇಕೆಂದು ಕೋರ್ಟ
ಅರ್ನಾಬ್ ಗೋಸ್ವಾಮಿ
ಅರ್ನಾಬ್ ಗೋಸ್ವಾಮಿ

ನವದೆಹಲಿ: ಕೋಮು ಸೌಹಾರ್ದತೆಗೆ ಭಂಗ ತಂದ ಆರೋಪದ ಮೇಲೆ ತನ್ನ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಸಲ್ಲಿಸಿದ್ದ ಮನವಿಯ ಆದೇಶವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.ಅಷ್ಟೇ ಅಲ್ಲದೆ ಏಪ್ರಿಲ್ 24 ರಂದು ಗೋಸ್ವಾಮಿಗೆ ನೀಡಲಾದ ಮಧ್ಯಂತರ ರಕ್ಷಣೆ ಯನ್ನು ಆದೇಶದ ಘೋಷಣೆಯಾಗುವವರೆಗೆ ಮುಂದುವರಿಸಬೇಕೆಂದು ಕೋರ್ಟ್ ಸೋಮವಾರ ಹೇಳಿದೆ. 

ಗೋಸ್ವಾಮಿ ಸಲ್ಲಿಸಿದ ಮೊದಲ ಅರ್ಜಿಯಲ್ಲಿ, ನ್ಯಾಯಾಲಯವು ಈ ಹಿಂದೆ ಆವರ ವಿರುದ್ಧದ ಎಲ್ಲಾ ಎಫ್‌ಐಆರ್‌ಗಳ ಮೇಲೆ  (ನಾಗ್ಪುರದಲ್ಲಿನ ಒಂದು ಪ್ರಕರಣ ಹೊರತು)ಕ್ರಮಕೈಗೊಂಡಿತ್ತು. ಆ ನಾಗ್ಪುರ ಎಫ್‌ಐಆರ್  ಮುಂಬೈಗೆ ವರ್ಗಾಯಿಸಲ್ಪಟ್ಟಿತು ಮತ್ತು ಅದಕ್ಕೆ ಸಂಬಂಧಿಸಿದಂತೆ, ಗೋಸ್ವಾಮಿ ವಿರುದ್ಧ  ಕ್ರಮದ ವಿರುದ್ಧ ಮೂರು ವಾರಗಳ ಕಾಲ ಬಂಧನದಿಂದ ರಕ್ಷಣೆ ನೀಡಲಾಗಿತ್ತು. 

ಸುಪ್ರೀಂ ಕೋರ್ಟ್ ಇದೀಗ ನ್ಯಾಯಾಲಯದ ಆದೇಶ ಪ್ರಕಟವಾಗುವವರೆಗೆ ಈ ರಕ್ಷಣೆ ಮುಂದುವರಿಯುತ್ತದೆ ಎಂದು ಹೇಳಿದೆ.  ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್. ಶಾ ಅವರಿದ್ದ ನ್ಯಾಯಪೀಠ ಈ ಹೇಳಿಕೆ ನೀಡಿದೆ.

ವಾರದ ನಂತರ ತನ್ನ ಆದೇಶವನ್ನು ಘೋಷಿಸಲಾಗುತದೆ ಎಂದು ನ್ಯಾಯಾಲಯ ಃಏಳಿದ್ದು ಗೋಸ್ವಾಮಿ ವಿರುದ್ಧದ ತನಿಖೆಯನ್ನು ಸ್ವತಂತ್ರ ತನಿಖಾ ಏಜೆನ್ಸಿಗೆ ವರ್ಗಾಯಿಸಲು ಮಾಡಿದ  ಮನವಿಯನ್ನೂ ಸಹ ಇದು ಪರಿಗಣಿಸುತ್ತದೆ. ಗೋಸ್ವಾಮಿ ಒತ್ತಡ ಮತ್ತು ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ ಎಂದು ಪೊಲೀಸರು ಮಾಡಿದ ಆರೋಪವನ್ನೂ ನ್ಯಾಯಾಲಯವು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com