ಮೋದಿಯನ್ನು ಕೊಲ್ಲುತ್ತೇವೆ; ಕೊರೋನಾ ದಿಂದ ಚೇತರಿಕೆಯಾದ ಮಗುವಿನ ಮಾತು!; ವಿವಾದಿತ ವಿಡಿಯೋ ಅಪ್ಲೋಡ್ ಮಾಡಿದ ಬಿಜೆಪಿ ನಾಯಕ

ಮಾರಕ ಕೊರೋನಾ ವೈರಸ್ ನಿಂದ ಚೇತರಿಕೆಯಾದ ಕುಟುಂಬವೊಂದರ ಮಗು ಪ್ರಧಾನಿ ಮೋದಿಯನ್ನು ಕೊಲ್ಲುತ್ತೇವೆ ಎಂದು ಹೇಳಿದ ವಿವಾದಿತ ವಿಡಿಯೊವೊಂದನ್ನು ಬಿಜೆಪಿ ನಾಯಕ ಅಮಿತ್ ಮಾಳವಿಯ ಅಪ್ಲೋಡ್ ಮಾಡಿದ್ದಾರೆ.
ವಿವಾದಿತ ವಿಡಿಯೋ
ವಿವಾದಿತ ವಿಡಿಯೋ

ನವದೆಹಲಿ: ಮಾರಕ ಕೊರೋನಾ ವೈರಸ್ ನಿಂದ ಚೇತರಿಕೆಯಾದ ಕುಟುಂಬವೊಂದರ ಮಗು ಪ್ರಧಾನಿ ಮೋದಿಯನ್ನು ಕೊಲ್ಲುತ್ತೇವೆ ಎಂದು ಹೇಳಿದ ವಿವಾದಿತ ವಿಡಿಯೊವೊಂದನ್ನು ಬಿಜೆಪಿ ನಾಯಕ ಅಮಿತ್ ಮಾಳವಿಯ ಅಪ್ಲೋಡ್ ಮಾಡಿದ್ದಾರೆ.

ಕುಟುಂಬವೊಂದರ ಸದಸ್ಯರು ಕೊರೊನಾ ಸೋಂಕಿನಿಂದ ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಕ್ಯಾಮೆರಾಗೆ ಪೋಸ್ ನೀಡುತ್ತಿದ್ದ ಸಂದರ್ಭದಲ್ಲಿ ಮಗುವೊಂದು ‘ಹಮ್ ಮೋದಿ ಕೊ ಮಾರೆಂಗೇ’ ಎಂದು ಹೇಳಿರುವ ವಿಡಿಯೊ ಸಾಮಾಜಿಕ  ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದು, ಪುಟ್ಟ ಮಗುವಿನ ಮುಗ್ಧ ಮನಸ್ಸಿನಲ್ಲಿ ವಿಷ ತುಂಬಿದವರು ಯಾರು ಎಂದು ಪ್ರಶ್ನಿಸಿದ್ದಾರೆ.

‘ನಾವು ಮೋದಿಯನ್ನು ಕೊಲ್ಲುತ್ತೇವೆ’. ಈ ಮಾತುಗಳು ಮೇ 13ರಂದು ತನ್ನ ಕುಟುಂಬ ಮತ್ತು ಸಂಬಂಧಿಕರೊಂದಿಗೆ ಕೊರೋನಾ ಯುದ್ಧದಲ್ಲಿ ಜಯಗಳಿಸಿದ ನಂತರ ಮಧ್ಯ ಪ್ರದೇಶದ ಇಂದೋರ್‌ನ ಇಂಡೆಕ್ಸ್ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಿಂದ ಮನೆಗೆ ಹಿಂದಿರುಗುತ್ತಿದ್ದ 6 ವರ್ಷದ  ಮಗುವಿನ ಬಾಯಿಂದ ಬಂದಿರುವುದು. ಈ ಸಣ್ಣ ಮುಗ್ಧ ಮಗುವಿನ ಮನಸ್ಸಿನಲ್ಲಿ ಈ ವಿಷವನ್ನು ತುಂಬಿದವರು ಯಾರು?’ ಎಂದು ಟ್ವೀಟ್‌ನಲ್ಲಿ ಅವರು ಪ್ರಶ್ನಿಸಿದ್ದಾರೆ.

ಈ ವಿಡಿಯೋ ಟ್ವಿಟ್ಟರ್‌ನಲ್ಲಿ ಸಕತ್ ವೈರಲ್ ಆಗಿದೆ. 1.8 ಸಾವಿರ ಜನರು ಕಾಮೆಂಟ್ ಮಾಡಿದ್ದಾರೆ. 6.4 ಸಾವಿರ ಜನ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ. 14 ಸಾವಿರ ಜನ ಲೈಕ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com