ಮಹಾರಾಷ್ಟ್ರ: ಕೊರೋನಾ ವೈರಸ್ ಲಾಕ್ ಡೌನ್ ಗೆ ಬೇಸತ್ತು ಟ್ರೇಡ್ ಯೂನಿಯನ್ ಮುಖಂಡ ದಾದಾ ಸಮಂತ್ ಆತ್ಮಹತ್ಯೆ

ಕೊರೋನಾ ವೈರಸ್ ಸೋಂಕು ಮತ್ತು ಸತತ ಲಾಕ್ ಡೌನ್ ನಿಂದಾಗಿ ಬೇಸತ್ತು ಟ್ರೇಡ್ ಯೂನಿಯನ್ ಮುಖಂಡ ದಾದಾ ಸಮಂತ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ದಾದಾ ಸಮಂತ್ (ಸಂಗ್ರಹ ಚಿತ್ರ)
ದಾದಾ ಸಮಂತ್ (ಸಂಗ್ರಹ ಚಿತ್ರ)

ಮುಂಬೈ; ಕೊರೋನಾ ವೈರಸ್ ಸೋಂಕು ಮತ್ತು ಸತತ ಲಾಕ್ ಡೌನ್ ನಿಂದಾಗಿ ಬೇಸತ್ತು ಟ್ರೇಡ್ ಯೂನಿಯನ್ ಮುಖಂಡ ದಾದಾ ಸಮಂತ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮುಂಬೈನ ಬೋರಿವಲಿ ಪ್ರದೇಶದ ತಮ್ಮ ನಿವಾಸದಲ್ಲಿ ಟ್ರೇಡ್ ಯೂನಿಯನ್ ಮುಖಂಡ ದಾದಾ ಸಮಂತ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಮಂತ್ ಅವರು,  ಕೊರೋನಾ ಸಮಸ್ಯೆಯಿಂದ ಸಾಕಷ್ಟು ನೋಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಬೇಸತ್ತು ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ದಾದಾ ಸಮಂತ್ ಅವರ ಸಹೋದರ ದತ್ತಾ ಸಮಂತ್ ಅವರೂ ಕೂಡ ಕಾರ್ಮಿಕ ಒಕ್ಕೂಟ ನಾಯಕರಾಗಿದ್ದರು. ಅವರನ್ನು 1997ರಲ್ಲಿ ಗ್ಯಾಂಗ್ ಸ್ಟರ್ ಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದೇ ವೇಳೆ ದಾದಾ ಸಮಂತ್ ಅವರಿಗೆ ಕೊರೋನಾ ಸೋಂಕು ಇರಲಿಲ್ಲ ಎಂದು ಅಧಿಕಾರಿಗಳು  ಸ್ಪಷ್ಟಪಡಿಸಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com