ದೆಹಲಿ: ಏಮ್ಸ್ ನ 195 ಆರೋಗ್ಯ ಸಿಬ್ಬಂದಿಗೆ ಕೊರೋನಾ ಸೋಂಕು

ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಸಂಸ್ಥೆಯಲ್ಲಿ (ಏಮ್ಸ್‌) ಕಾರ್ಯನಿರ್ವಹಿಸುತ್ತಿದ್ದ 195 ಆರೋಗ್ಯ ಸಿಬ್ಬಂದಿಯಲ್ಲಿ ಕೋವಿಡ್‌-19 ಇರುವುದು ದೃಢಪಟ್ಟಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಸಂಸ್ಥೆಯಲ್ಲಿ (ಏಮ್ಸ್‌) ಕಾರ್ಯನಿರ್ವಹಿಸುತ್ತಿದ್ದ 195 ಆರೋಗ್ಯ ಸಿಬ್ಬಂದಿಯಲ್ಲಿ ಕೋವಿಡ್‌-19 ಇರುವುದು ದೃಢಪಟ್ಟಿದೆ. 

ಕಳೆದ ಎರಡು ದಿನಗಳಲ್ಲಿ ಒಬ್ಬ ಎಂಬಿಬಿಎಸ್ ವಿದ್ಯಾರ್ಥಿ, ಮೂವರು ವೈದ್ಯರು, ಎಂಟು ದಾದಿಯರು ಮತ್ತು ಐದು ಮೆಸ್ ಕಾರ್ಮಿಕರು ಸೇರಿದಂತೆ 50 ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ಕೋವಿಡ್‌-19 ಸೋಂಕಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಳಿದಂತೆ ಪ್ರಯೋಗಾಲಯ ಸಿಬ್ಬಂದಿ,  ತಂತ್ರಜ್ಞರು, ನೈರ್ಮಲ್ಯ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನು ಒಳಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಇದುವರೆಗೆ ಬೋಧಕ ವರ್ಗ, ಐವರು ವೈದ್ಯರು, 21 ಶುಶ್ರೂಷಾ ಸಿಬ್ಬಂದಿ, ಎಂಟು ತಂತ್ರಜ್ಞರು, 32 ನೈರ್ಮಲ್ಯ ಕಾರ್ಮಿಕರು ಮತ್ತು 68 ಭದ್ರತಾ ಸಿಬ್ಬಂದಿಗಳು ಸೇರಿದಂತೆ ಏಮ್ಸ್‌ಗೆ ಸೇರಿದ ಒಟ್ಟು 195 ಆರೋಗ್ಯ ಸಿಬ್ಬಂದಿ ಕೊರೊನಾ ಸೋಂಕಿತರಾಗಿದ್ದಾರೆ. 

28 ಆರೋಗ್ಯ ಕಾರ್ಯಕರ್ತರ ಮಾದರಿ ಸಂಗ್ರಹಿಸಿದ್ದು, ಗುರುವಾರ ಬೆಳಗ್ಗೆ ಅದರಲ್ಲಿ 23 ಮಂದಿಗೆ ಸೋಂಕು ದೃಢವಾಗಿದೆ. ಫೆಬ್ರವರಿ 1 ರಿಂದ ಇಲ್ಲಿಯವರೆಗೆ 5 ರೆಸಿಡೆಂಟ್ ವೈದ್ಯರು ಸೇರಿದಂತೆ 195 ಮಂದಿಗೆ ಸೋಂಕು ತಗುಲಿದೆ. 68 ಭದ್ರತಾಸಿಬ್ಬಂದಿಗೂ ಸೋಂಕು ದೃಢವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com