ಇಂಡಿಯಾ ಪದವನ್ನು 'ಭಾರತ' ಎಂದು ಬದಲಿಸಲು ಕೋರಿದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಸಂವಿಧಾನವನ್ನು ತಿದ್ದುಪಡಿ ಮಾಡಿ "ಇಂಡಿಯಾ" ಎಂಬ ಹೆಸರನ್ನು "ಭಾರತ" ಅಥವಾ "ಹಿಂದೂಸ್ಥಾನ" ಎಂದು ಬದಲಾಯಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿರುವ ಮನವಿಯನ್ನು ಜೂನ್ 2 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಸಮ್ಮತಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸಂವಿಧಾನವನ್ನು ತಿದ್ದುಪಡಿ ಮಾಡಿ "ಇಂಡಿಯಾ" ಎಂಬ ಹೆಸರನ್ನು "ಭಾರತ" ಅಥವಾ "ಹಿಂದೂಸ್ಥಾನ" ಎಂದು ಬದಲಾಯಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿರುವ ಮನವಿಯನ್ನು ಜೂನ್ 2 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಸಮ್ಮತಿಸಿದೆ.

"ಒಕ್ಕೂಟದ ಹೆಸರು ಮತ್ತು ಭೂಪ್ರದೇಶದೊಂದಿಗೆ ವ್ಯವಹರಿಸುವ ಸಂವಿಧಾನದ 1 ನೇ ಪರಚ್ಚೇಧದ ತಿದ್ದುಪಡಿ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಮನವಿಯಲ್ಲಿ ಕೋರಲಾಗಿದೆ.ನಮ್ಮದೇ ರಾಷ್ಟ್ರೀಯತೆಯಲ್ಲಿ ಹೆಮ್ಮೆಯ ಭಾವವನ್ನು ಮೂಡಿಸುವಂತೆ "ಇಂಡಿಯಾ" ಎನ್ನುವ ಬದಲು "ಬಾರತ" ಅಥವಾ "ಹಿಂದೂಸ್ಥಾನ" ಎಂದು ದೇಶವನ್ನು ಸಂಬೋಧಿಸುವಂತೆ" ಮನವಿ ಕೇಳಿದೆ.

ಶುಕ್ರವಾರಈ ಅರ್ಜಿ ಸುಪ್ರೀಂ ಕೋರ್ಟ್ ಮುಂದೆ ಬಂದಿದ್ದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್ ಎ ಬೊಬ್ಡೆ ಲಭ್ಯವಿಲ್ಲದ ಕಾರಣ ಅದನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ನೋಟಿಸ್‌ನ ಪ್ರಕಾರ, ಈ ವಿಷಯವನ್ನು ಜೂನ್ 2 ರಂದು ಸಿಜೆಐ ನೇತೃತ್ವದ ನ್ಯಾಯಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗುವುದು.

ದೆಹಲಿ ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿರುವ ಮನವಿಯಲ್ಲಿ, ಇಂತಹ ತಿದ್ದುಪಡಿಯು "ಈ ದೇಶದ ನಾಗರಿಕರು ವಸಾಹತುಶಾಹಿ ಭೂತಕಾಲದಿಂದ ಹೊರಬರುವುದನ್ನು ಖಚಿತಪಡಿಸಲಿದೆ" ಎಂದು ಹೇಳಿದ್ದಾರೆ.

"ಇಂಗ್ಲಿಷ್ ಹೆಸರನ್ನು ತೆಗೆದುಹಾಕುವುದು ಸಾಂಕೇತಿಕವಾಗಿ ಕಂಡುಬರುತ್ತದೆಯಾದರೂ, ನಮ್ಮದೇ ರಾಷ್ಟ್ರೀಯತೆಯಲ್ಲಿ ಹೆಮ್ಮೆಯ ಭಾವವನ್ನು ಮೂಡಿಸುತ್ತದೆ, ವಿಶೇಷವಾಗಿ ಮುಂದಿನ ಪೀಳಿಗೆಗೆ. ಭಾರತವನ್ನು ಇಂಡಿಯಾ ಎನ್ನುವ ಬದಲಿಗೆ ಭಾರತ ಎಂದೇ ತಿಳಿಸಿಕೊಡಲು ಉತ್ತೇಜಿಸಬೇಕು. ಆ ಮೂಲಕ ಪೂರ್ವಜರ ಸ್ವಾತಂತ್ರ್ಯಕ್ಕಾಗಿನ ಕಠಿಣ ಹೋರಾಟದ ಮನವರಿಕೆ ಮಡಿಸಬೇಕು."
`
ರಡು ಸಂವಿಧಾನದ 1 ನೇ ಪರಿಚ್ಚೇಧದ1948 ರ ಸಂವಿಧಾನ ಸಭೆಯ ಚರ್ಚೆಯನ್ನು ಉಲ್ಲೇಖಿಸಿ, ಆ ಸಮಯದಲ್ಲಿ ದೇಶವನ್ನು 'ಭಾರತ’ಅಥವಾ 'ಹಿಂದೂಸ್ಥಾನ" ಎಂದು ಹೆಸರಿಸುವ ಪರವಾಗಿ "ಬಲವಾದ ಒಲವು" ಇತ್ತು ಎಂದು ಮನವಿ ಹೇಳಿದೆ. "ಆದಾಗ್ಯೂ, ದೇಶವನ್ನು ಅದರ ಮೂಲ ಮತ್ತು ಅಧಿಕೃತ ಹೆಸರಿನಿಂದ ಗುರುತಿಸುವ ಸಮಯ ಈಗ ಬಂದಿದೆ. ಅಂದರೆ ಭಾರತ ಎಂದು ಕರೆವಾಗ ವಿಶೇಷವಾಗಿ ನಮ್ಮ ನಗರಗಳನ್ನು ಭಾರತೀಯ ನೀತಿಯೊಂದಿಗೆ ಗುರುತಿಸಲು ಸಹಕಾರಿಯಾಗುತ್ತದೆ" ಅರ್ಜಿ ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com