ಗುಜರಾತ್: ಪ್ರಬಲ ಸ್ಫೋಟದ ನಂತರ ಗೋದಾಮು ಕುಸಿದು 9 ಮಂದಿ ದುರ್ಮರಣ

ಪ್ರಬಲ ಸ್ಫೋಟದ ನಂತರ ರಾಸಾಯನಿಕ ಗೋದಾಮಿನ ಒಂದು ಭಾಗ ಕುಸಿದು ಮೂವರು ಮಹಿಳೆಯರು ಸೇರಿದಂತೆ  9 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Published: 04th November 2020 08:28 PM  |   Last Updated: 04th November 2020 08:28 PM   |  A+A-


Casual_Photo1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಅಹಮದಾಬಾದ್:  ಪ್ರಬಲ ಸ್ಫೋಟದ ನಂತರ ರಾಸಾಯನಿಕ ಗೋದಾಮಿನ ಒಂದು ಭಾಗ ಕುಸಿದು ಮೂವರು ಮಹಿಳೆಯರು ಸೇರಿದಂತೆ  9 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಹಮದಾಬಾದ್ ನಗರದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಇತರ ಒಂಬತ್ತು ಮಂದಿ ಗಾಯಗೊಂಡಿರುವುದಾಗಿ ಅವರು ಹೇಳಿದ್ದಾರೆ.

ಸ್ಫೋಟದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ, ಅವಶೇಷಗಳಡಿಯಲ್ಲಿ ಸಿಲುಕಿದ್ದ 18 ಮಂದಿಯನ್ನು ಹೊರಗೆ ಎಳೆದು 108 ಅಂಬ್ಯುಲೆನ್ಸ್ ಮೂಲಕ ಎಲ್ ಜಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಅಗ್ನಿ ಶಾಮಕದ ಮುಖ್ಯಾಧಿಕಾರಿ ಎಂಎಫ್ ದಸ್ತೂರ್ ತಿಳಿಸಿದ್ದಾರೆ.

18 ಮಂದಿಯ ಪೈಕಿ 9 ಮಂದಿ ಸಾವನ್ನಪ್ಪಿರುವುದಾಗಿ ಆಸ್ಪತ್ರೆ ತಿಳಿಸಿದೆ. ಮೃತರೆಲ್ಲರೂ ಕಾರ್ಮಿಕರಾಗಿದ್ದಾರೆ. ಉಳಿದಿರುವ ಒಂಬತ್ತು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.  ಘಟನೆ ಬಗ್ಗೆ ಪ್ರಾಥಮಿಕ ತನಿಖೆಯನ್ನು ಆರಂಭಿಸಿರುವುದಾಗಿ ಉಪ ಪೊಲೀಸ್ ಆಯುಕ್ತ ಅಶೋಕ್ ಮುನಿಯಾ ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
farmers-Protest

ದೆಹಲಿಯಲ್ಲಿ ಟ್ರಾಕ್ಟರ್ ಪೆರೇಡ್ ಸಮಯದಲ್ಲಿನ ಹಿಂಸಾಚಾರವು ರೈತರ ಆಂದೋಲನದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp