ಭಯೋತ್ಪಾದನೆ ಪ್ರಾಯೋಜಕತ್ವ ರಾಷ್ಟ್ರಗಳ ಪಟ್ಟಿಯಿಂದ ಸುಡಾನ್ ಹೊರಕ್ಕೆ: ಭಾರತ ಸ್ವಾಗತ

ಸುಡಾನ್‌ನೊಂದಿಗಿನ ಸಂಬಂಧಗಳು ಐತಿಹಾಸಿಕ ಮತ್ತು ವಿಶೇಷವೆಂದಿರುವ ಭಾರತ, ಸುಡಾನ್ ಅನ್ನು ಭಯೋತ್ಪಾದನೆ ಪ್ರಾಯೋಜಕತ್ವ ಪಟ್ಟಿಯಿಂದ ತೆಗೆದುಹಾಕಿರುವುದು ಸ್ವಾಗತಾರ್ಹ ಎಂದು ಹೇಳಿದೆ.
ಅನುರಾಗ್ ಶ್ರೀವಾತ್ಸವ್
ಅನುರಾಗ್ ಶ್ರೀವಾತ್ಸವ್

ನವದೆಹಲಿ: ಸುಡಾನ್‌ನೊಂದಿಗಿನ ಸಂಬಂಧಗಳು ಐತಿಹಾಸಿಕ ಮತ್ತು ವಿಶೇಷವೆಂದಿರುವ ಭಾರತ, ಸುಡಾನ್ ಅನ್ನು ಭಯೋತ್ಪಾದನೆ ಪ್ರಾಯೋಜಕತ್ವ ಪಟ್ಟಿಯಿಂದ ತೆಗೆದುಹಾಕಿರುವುದು ಸ್ವಾಗತಾರ್ಹ ಎಂದು ಹೇಳಿದೆ.

ಅ 23 ರಂದು ಭಯೋತ್ಪಾದನೆ ಪ್ರಾಯೋಜಿತ ರಾಷ್ಟ್ರಗಳ ಪಟ್ಟಿಯಿಂದ ಸುಡಾನ್ ನನ್ನು ಅಮೆರಿಕ ತೆಗೆದು ಹಾಕಿದದ ನಂತರ ಇಸ್ರೇಲ್ ಜೊತೆಗಿನ ಸಂಬಂಧವನ್ನು ಪುನರ್ ಸ್ಥಾಪಿಸಿದ ಮೂರನೇ ಅರಬ್ ರಾಷ್ಟ್ರ ಸೂಡಾನ್ ಆಗಿದೆ. ಉತ್ತರ ಆಫ್ರಿಕಾದ ಸೂಡಾನ್ 27 ವರ್ಷಗಳಿಂದ ಪಟ್ಟಿಯಲ್ಲಿತ್ತು.

ಜುಬಾ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಸ್ವಾಗತಿಸಿದ್ದು, ಇದು ಪ್ರಜಾಪ್ರಭುತ್ವ ಬದಲಾವಣೆಗಳಿಗೆ ಕಾರಣವಾಗಲಿದೆ ಮತ್ತು ಸುಡಾನ್ ಅಭಿವೃದ್ಧಿ, ಶಾಂತಿ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ(ಎಂಇಎ) ಆಶಿಸಿದೆ.

ಕಳೆದ ತಿಂಗಳು, ನಾಗರಿಕ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಸುಡಾನ್‌ನ ಪರಿವರ್ತನಾ ಸರ್ಕಾರವು ಹಲವಾರು ಗುಂಪುಗಳೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಂಡಿತ್ತು.

ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ತನ್ನ ಭಯೋತ್ಪಾದನೆಯ ರಾಜ್ಯ ಪ್ರಾಯೋಜಕರ ಪಟ್ಟಿಯಿಂದ ಸುಡಾನ್ ಅನ್ನು ತೆಗೆದುಹಾಕುವುದಾಗಿ ಘೋಷಿಸಿತ್ತು. ಕೆಲವು ದಿನಗಳ ನಂತರ, ಇತ್ತೀಚಿನ ವಾರಗಳಲ್ಲಿ ಯುಎಸ್ ದಲ್ಲಾಳಿ ಒಪ್ಪಂದದಡಿಯಲ್ಲಿ ಇಸ್ರೇಲ್ ಜೊತೆಗಿನ ಸಂಬಂಧವನ್ನು ಸಾಮಾನ್ಯಗೊಳಿಸುವುದಾಗಿ ಘೋಷಿಸಿದ ಮೂರನೇ ದೇಶ ಸುಡಾನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com