ಕೋವಿಡ್-19: ಡಿಸೆಂಬರ್ ವೇಳೆಗೆ ಭಾರತಕ್ಕೆ ಸಿಗಲಿದೆ 100 ಮಿಲಿಯನ್ ಆಸ್ಟ್ರಾಝೆನಿಕ ಲಸಿಕೆ

ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಕೋವಿಡ್-19 ಲಸಿಕೆ ಆಸ್ಟ್ರಾಝೆನಿಕಾದ ಲಸಿಕೆ ಉತ್ಪಾದನೆಯನ್ನು ಶೀಘ್ರಗೊಳಿಸುತ್ತಿದ್ದು, ಡಿಸೆಂಬರ್ ವೇಳೆಗೆ 100 ಮಿಲಿಯನ್ ಆಸ್ಟ್ರಾಝೆನಿಕಾ ಲಸಿಕೆ ಭಾರತಕ್ಕೆ ಲಭ್ಯವಾಗಲಿದೆ. 
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)

ನವದೆಹಲಿ: ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಕೋವಿಡ್-19 ಲಸಿಕೆ ಆಸ್ಟ್ರಾಝೆನಿಕಾ ಲಸಿಕೆ ಉತ್ಪಾದನೆಯನ್ನು ಶೀಘ್ರಗೊಳಿಸುತ್ತಿದ್ದು, ಡಿಸೆಂಬರ್ ವೇಳೆಗೆ 100 ಮಿಲಿಯನ್ ಆಸ್ಟ್ರಾಝೆನಿಕಾ ಲಸಿಕೆ ಭಾರತಕ್ಕೆ ಲಭ್ಯವಾಗಲಿದೆ. 

ಬ್ಲೂಮ್ ಬರ್ಗ್ ಗೆ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ನ ಸಿಇಒ ಅದಾರ್ ಪೂನಾವಾಲ ಅವರು ಸಂದರ್ಶನ ನೀಡಿದ್ದು, ಆಸ್ಟ್ರಾಝೆನಿಕಾ ಲಸಿಕೆ ಅಂತಿಮ ಹಂತದ ಪರೀಕ್ಷೆಯಲ್ಲಿದ್ದು ಕೊರೋನಾ ವೈರಾಣುವಿನಿಂದ ಅತ್ಯುತ್ತಮ ರಕ್ಷಣೆ ನೀಡುತ್ತಿದೆ. ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕನಿಷ್ಟ ಒಂದು ಬಿಲಿಯನ್ ಲಸಿಕೆಗಳನ್ನು ಉತ್ಪಾದಿಸಲು ಕೈಜೋಡಿಸಿದ್ದು, ದೆಹಲಿಯಿಂದ ತುರ್ತು ಅನುಮತಿಯನ್ನು ಪಡೆಯುವ ಸಾಧ್ಯತೆ ಇದೆ ಎಂದು ಅದಾರ್ ಪೂನಾವಾಲ ತಿಳಿಸಿದ್ದಾರೆ. 

ಪ್ರಾರಂಭಿಕವಾಗಿ ಭಾರತಕ್ಕೆ ಈ ಲಸಿಕೆಗಳು ಸಿಗುತ್ತವೆ. ಮುಂದಿನ ವರ್ಷದ ಆರಂಭದಲ್ಲಿ, ಬಡ ರಾಷ್ಟ್ರಗಳಿಗಾಗಿ ವಿಶ್ವಸಂಸ್ಥೆ ಬೆಂಬಲಿತ ಸಂಸ್ಥೆ ಕೋವ್ಯಾಕ್ಸ್ ಹಾಗೂ ಭಾರತದ ನಡುವೆ 50-50 ಅನುಪಾತದಲ್ಲಿ ಲಸಿಕೆಗಳು ಹಂಚಿಕೆಯಾಗಲಿವೆ ಎಂದು ಪೂನಾವಾಲಾ ತಿಳಿಸಿದ್ದಾರೆ. 

ಎಸ್ಐಐ 5 ಡೆವಲಪರ್ ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, 40 ಮಿಲಿಯನ್ ಗೂ ಅಧಿಕ ಆಸ್ಟ್ರಾಝೆನಿಕಾದ ಲಸಿಕೆಗಳನ್ನು ತಯಾರಿಸಿದೆ ಎಂಡು ಪೂನಾವಾಲ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com