ಐಎಫ್ಎಸ್ ಅಧಿಕಾರಿ ಅಕ್ರಮ ಸಂಪತ್ತು: ಬ್ಯಾಂಕ್ ನಲ್ಲಿ 9.4 ಕೋಟಿ, ವಿಮಾನ ಪ್ರಯಾಣಕ್ಕೆ 3 ಕೋಟಿ ವೆಚ್ಚ

ವಿಜಿಲೆನ್ಸ್ ಇತಿಹಾಸದಲ್ಲೇ ದೊಡ್ಡ ಮೊತ್ತದ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಿದ್ದು 1987ರ ಬ್ಯಾಚಿನ ಐಎಫ್ಎಸ್ ಅಧಿಕಾರಿಯೊಬ್ಬರನ್ನು ಬೇಟೆಯಾಡಿದೆ. 
ಆಕಾಶ್ ಪಾಠಕ್
ಆಕಾಶ್ ಪಾಠಕ್

ಭುವನೇಶ್ವರ್: ವಿಜಿಲೆನ್ಸ್ ಇತಿಹಾಸದಲ್ಲೇ ದೊಡ್ಡ ಮೊತ್ತದ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಿದ್ದು 1987ರ ಬ್ಯಾಚಿನ ಐಎಫ್ಎಸ್ ಅಧಿಕಾರಿಯೊಬ್ಬರನ್ನು ಬೇಟೆಯಾಡಿದೆ. 

ಹಿರಿಯ ಐಎಫ್‌ಎಸ್ ಅಧಿಕಾರಿ ಅಭಯ್ ಕಾಂತ್ ಪಾಠಕ್ ವಿರುದ್ಧ ರಾಜ್ಯ ವಿಜಿಲೆನ್ಸ್ ತನ್ನ ಅತಿದೊಡ್ಡ ಕಾರ್ಯಾಚರಣೆಯನ್ನು ನಡೆಸಿದೆ. ಅಭಯ್ ಕಾಂತ್ ಅವರು ತಮ್ಮ ಮಗ ಆಕಾಶ್ ಅವರ ಬ್ಯಾಂಕ್ ಖಾತೆಗಳಲ್ಲಿ 9.4 ಕೋಟಿ ರೂಪಾಯಿ ಇಟ್ಟಿದ್ದಾರೆ. ಅದರಲ್ಲೂ ಭುವನೇಶ್ವರದಲ್ಲಿನ ಎರಡು ಎಟಿಎಂಗಳ ಮೂಲಕ ಕನಿಷ್ಠ 8.4 ಕೋಟಿ ರೂ. ನಗದು ಜಮೆ ಮಾಡಿದ್ದರು. ಇದನ್ನು ವಿಜಿಲೆನ್ಸ್ ಪತ್ತೆ ಹಚ್ಚಿದ್ದು  ವಂಚನೆ ಆರೋಪ ಎದುರಿಸುತ್ತಿರುವ ಆಕಾಶ್ ಅವರನ್ನು ಪುಣೆಯಿಂದ ಭುವನೇಶ್ವರಕ್ಕೆ ಕರೆತರಲಾಗಿದೆ.

ಆಕಾಶ್ ತಾನು ಟಾಟಾ ಮೋಟಾರ್ಸ್‌ನ ಸಾರಿಗೆ ವಿಭಾಗದ ಎಂಡಿ ಎಂದು ಸುಳ್ಳು ಹೇಳಿಕೊಂಡಿದ್ದು ಈ ಸಂಬಂಧ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ. ಭುವನೇಶ್ವರದಲ್ಲಿ ಐ ಟಿ ಇ ಆರ್ ನಿಂದ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಆಕಾಶ್ ಅವರು ಪುಣೆಯಲ್ಲಿ ಮಾಸಿಕ 5 ಲಕ್ಷ ಬಾಡಿಗೆಯ ಎರಡು ಬೆಲೆಬಾಳುವ ಫ್ಲ್ಯಾಟ್‌ಗಳು, ಕಚೇರಿ ಮತ್ತು ತೋಟದ ಮನೆಗಳನ್ನು ಹೊಂದಿದ್ದಾರೆ. ಇದೇ ವೇಳೆ ಅವರ ಬಳಿ ಹಲವಾರು ಐಷಾರಾಮಿ ಕಾರುಗಳ ಒಡೆಯರಾಗಿದ್ದಾರೆ.

ಅಧಿಕೃತ ಪ್ರಕಟಣೆಯ ಪ್ರಕಾರ, ಭುವನೇಶ್ವರ, ಪುಣೆ, ಪಾಟ್ನಾ, ಮುಂಬೈ, ಜಮ್ಶೆಡ್ಪುರ ಮತ್ತು ದೆಹಲಿಯಂತಹ ನಗರಗಳಿಗೆ ಚಾರ್ಟರ್ ವಿಮಾನಗಳನ್ನು ಬಳಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಕೆಲವು ಟ್ರಿಪ್‌ಗಳನ್ನು ಕೈಗೊಂಡಿದ್ದರು. ಆಕಾಶ್ ಜುಹು(ಮುಂಬೈನಲ್ಲಿ) ನಿಂದ ಪುಣೆಗೆ ಚಾರ್ಟರ್ ಫ್ಲೈಟ್ ಬಳಸಿದ್ದಾರೆ. ಇದಕ್ಕಾಗಿ 13 ಆಸನಗಳ ಚಾರ್ಟೆಡ್ ವಿಮಾವನ್ನು 25 ಲಕ್ಷ ರೂಪಾಯಿಗೆ ಬುಕ್ ಮಾಡಿದ್ದರು. ಒಟ್ಟಾರೆ ವಿಮಾನಯಾನಕ್ಕೆ ಬರೋಬ್ಬರಿ 3 ಕೋಟಿ ರುಪಾಯಿ ವೆಚ್ಚ ಮಾಡಿದ್ದಾರೆ.

ಅಭಯ್ ಮತ್ತು ಅವರ ಕುಟುಂಬ ಸದಸ್ಯರು ಮಲೇಷ್ಯಾ, ಹಾಂಗ್ ಕಾಂಗ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಅರಬ್ ಎಮಿರೇಟ್ಸ್, ಮಾಲ್ಡೀವ್ಸ್‌ಗೆ ವಿದೇಶ ಪ್ರವಾಸ ಕೈಗೊಂಡಿದ್ದು, ವಿವರಗಳನ್ನು ವಿಜಿಲೆನ್ಸ್ ಅಧಿಕಾರಿಗಳು ಪಡೆದುಕೊಂಡಿದ್ದಾರೆ. 1987 ರ ಬ್ಯಾಚ್ ಐಎಫ್‌ಎಸ್ ಅಧಿಕಾರಿಯ ಅಧಿಕೃತ ಸ್ಥಾನ ಮತ್ತು ಅವರ ಅಧಿಕಾರವಧಿಯಲ್ಲಿ ನಡೆಸಿದ ಚಟುವಟಿಕೆಗಳ ಬಗ್ಗೆ ವಿಜಿಲೆನ್ಸ್ ಶೀಘ್ರದಲ್ಲೇ ತನಿಖೆ ಪ್ರಾರಂಭಿಸುತ್ತದೆ.

ರಾಜ್ಯ ಅರಣ್ಯ ಇಲಾಖೆಯಲ್ಲಿ ಜೂನ್ 2018ರಿಂದ ಅವರು ಅರಣ್ಯೀಕರಣ ಮತ್ತು ಯೋಜನೆ ವಿಭಾಗದಲ್ಲಿ ಹೆಚ್ಚುವರಿ ಪಿಸಿಸಿಎಫ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com