ಡ್ರಗ್ಸ್ ಕೇಸ್: ನಟಿ ದೀಪಿಕಾ ಪಡುಕೋಣೆ, ಸಾರಾ, ಶ್ರದ್ಧಾರನ್ನು ವಿಚಾರಣೆ ನಡೆಸಿದ್ದ ಎನ್'ಸಿಬಿ ಅಧಿಕಾರಿಗೆ ಕೊರೋನಾ ಪಾಸಿಟಿವ್!

ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಡ್ರಗ್ಸ್ ನಂಟಿರುವ ಹಿನ್ನೆಲೆಯಲ್ಲಿ ಈ ಕುರಿತು ತನಿಢೆ ನಡೆಸುತ್ತಿರುವ ಎನ್'ಸಿಬಿಯ ಉಪ ನಿರ್ದೇಶಕ ಕೆಪಿಎಸ್ ಮಲ್ಹೋತ್ರಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಮಲ್ಹೋತ್ರಾ
ಮಲ್ಹೋತ್ರಾ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಡ್ರಗ್ಸ್ ನಂಟಿರುವ ಹಿನ್ನೆಲೆಯಲ್ಲಿ ಈ ಕುರಿತು ತನಿಢೆ ನಡೆಸುತ್ತಿರುವ ಎನ್'ಸಿಬಿಯ ಉಪ ನಿರ್ದೇಶಕ ಕೆಪಿಎಸ್ ಮಲ್ಹೋತ್ರಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಡ್ರಗ್ಸ್ ಪ್ರಕರಣ ಸಂಬಂಧ ಈ ಹಿಂತೆ ಮಲ್ಹೋತ್ರಾ ಅವರು ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಮತ್ತು ಶ್ರದ್ಧಾ ಕಪೂರ್ ಅವರನ್ನು ವಿಚಾರಣೆಗೊಳಪಡಿಸಿದ್ದರು. 

ಸುಶಾಂತ್ ಪ್ರಕರಣದಲ್ಲಿ ಡ್ರಗ್ ನಂಟಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಎನ್‌ಸಿಬಿಯ 5 ಸದಸ್ಯರ ತಂಡವನ್ನು ದೆಹಲಿಯಿಂದ ಮುಂಬೈಗೆ ಕಳುಹಿಸಲಾಗಿದೆ. ಎನ್‌ಸಿಬಿಯ ಉಪನಿರ್ದೇಶಕ ಕೆಪಿಎಸ್ ಮಲ್ಹೋತ್ರಾ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. 

ಸುಶಾಂತ್ ಪ್ರಕರಣದಲ್ಲಿ ಬಾಲಿವುಡ್ ಮತ್ತು ಡ್ರಗ್ಸ್ ಮಾಫಿಯಾ ಸಂಪರ್ಕದ ಬಗ್ಗೆ ಈ ತಂಡ ತನಿಖೆ ನಡೆಸುತ್ತಿದೆ. ಇದೀಗ ಮಲ್ಹೋತ್ರಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com