ಭಾರತದಲ್ಲಿ ಸ್ಪುಟ್ನಿಕ್ V ಕೋವಿಡ್-19 ಲಸಿಕೆ ಕ್ಲಿನಿಕಲ್ ಟ್ರಯಲ್ ಗೆ ಅನುಮತಿ 

ರಷ್ಯಾದಲ್ಲಿ ತಯಾರಿಸಲಾಗಿರುವ ಸ್ಪುಟ್ನಿಕ್ V ಕೋವಿಡ್-19 ಲಸಿಕೆಯನ್ನು ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ ಗಳಿಗೆ ಒಳಪಡಿಸಲು ಔಷಧ ನಿಯಂತ್ರಕ (ಡಿಸಿಜಿಐ) ಅನುಮೋದನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಷ್ಯಾದಲ್ಲಿ ತಯಾರಿಸಲಾಗಿರುವ ಸ್ಪುಟ್ನಿಕ್ V ಕೋವಿಡ್-19 ಲಸಿಕೆಯನ್ನು ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ ಗಳಿಗೆ ಒಳಪಡಿಸಲು ಔಷಧ ನಿಯಂತ್ರಕ (ಡಿಸಿಜಿಐ) ಅನುಮೋದನೆ ನೀಡಿದೆ.

2 ಹಾಗೂ 3 ನೇ ಹಂತದಲ್ಲಿ ಕ್ಲಿನಿಕಲ್ ಟ್ರಯಲ್ ಗಳನ್ನು ನಡೆಸಲು ಈ ಅನುಮೋದನೆ ನೀಡಲಾಗಿದ್ದು, ಸೆಪ್ಟೆಂಬರ್ 16 ರಂದು ರಷ್ಯಾದ ನೇರ ಹೂಡಿಕೆ ಫಂಡ್ (ಆರ್ ಡಿಐಎಫ್) ಹಾಗೂ ಡಾ. ರೆಡ್ಡಿಸ್ ಲ್ಯಾಬರೋಟರಿ ಲಿಮಿಟೆಡ್ ಭಾರತದಲ್ಲಿ ಸ್ಪುಟ್ನಿಕ್ V ಕೋವಿಡ್-19 ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಸಲು ಒಪ್ಪಿಗೆ ಸೂಚಿಸಿದ್ದವು

ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ ಗಮಲೇಯಾ ಸೈಂಟಿಫಿಕ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಆ.11 ರಂದು ಅಡೆನೊವೈರಸ್ ವೆಕ್ಟರ್ ಆಧಾರಿತ ಲಸಿಕೆಯನ್ನು ತಯಾರಿಸಿ ಘೋಷಿಸಿದ್ದವು. 

ಕೊರೋನಾ ವಿರುದ್ಧ ಪರಿಣಾಮಕಾರಿ ಲಸಿಕೆಯನ್ನು ಹೊರತರಲು ಬದ್ಧರಾಗಿದ್ದೇವೆ ಎಂದು ರೆಡ್ಡೀಸ್ ಲ್ಯಾಬರೋಟರೊಯ ಸಹ ಅಧ್ಯಕ್ಷರಾದ ಜಿವಿ ಪ್ರಸಾದ್ ಹೇಳಿದ್ದಾರೆ.

ಔಷಧೀಯ ನಿಯಂತ್ರಕದ ಅನುಮತಿಂದಾಗಿ ಆರ್ ಡಿಐಎಫ್ ಡಾ.ರೆಡ್ಡೀಸ್ ಗೆ 100 ಮಿಲಿಯನ್ ಡೋಸ್ ನಷ್ಟು ಲಸಿಕೆಯನ್ನು ಪೂರೈಸುತ್ತದೆ ಎಂದು ಜಿವಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com