ರಾಷ್ಟ್ರಹಿತದ ಕಾರ್ಯಗಳಿಗೆ ವಿಪಕ್ಷಗಳಿಂದ ಅಡ್ಡಿ: ಪ್ರಧಾನಿ ಮೋದಿ

ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎನ್‍ಡಿಎ ಕೈಗೊಳ್ಳುವ ಯೋಜನೆಗಳನ್ನು ವಿಪಕ್ಷಗಳು ವಿರೋಧಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಹಾಗೂ ಬಿಹಾರದ ಪ್ರಗತಿಗಾಗಿ ಸೂಕ್ತ ಪಕ್ಷವನ್ನು ಆಯ್ಕೆ ಮಾಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಭಗಲ್ ಪುರ: ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎನ್‍ಡಿಎ ಕೈಗೊಳ್ಳುವ ಯೋಜನೆಗಳನ್ನು ವಿಪಕ್ಷಗಳು ವಿರೋಧಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಹಾಗೂ ಬಿಹಾರದ ಪ್ರಗತಿಗಾಗಿ ಸೂಕ್ತ ಪಕ್ಷವನ್ನು ಆಯ್ಕೆ ಮಾಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿರುವ ಮೋದಿ ಭಗಲ್ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಯಾವುದೇ ಒಂದು ಪಕ್ಷದ ಹೆಸರನ್ನು ಉಲ್ಲೇಖಿಸದ ಅವರು. ಬಿಹಾರದ ಜನರು ವಿಪಕ್ಷಗಳಿಗೆ ಅವಕಾಶ ನೀಡಿದಾಗಲೆಲ್ಲಾ ದ್ರೋಹವನ್ನೇ ಎಸಗಿವೆ. ರಾಜ್ಯವನ್ನು  ಅಭಿವೃದ್ಧಿಪಡಿಸುವ ಬದಲು ಮತ್ತು ತಮ್ಮ ವೈಯಕ್ತಿಕ ಪ್ರಗತಿಗೆ, ಕುಟುಂಬ ಹಾಗೂ ಸಂಬಂಧಿಕರ ಅಭಿವೃದ್ಧಿಗೆ ಮಾತ್ರ ಅವರು ಆದ್ಯತೆ ನೀಡಿದ್ದಾರೆ. ಜನರ ಕಲ್ಯಾಣಕ್ಕಾಗಿ ಗಮನ ಹರಿಸಿಲ್ಲ ಎಂದು ಟೀಕಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಜನರು ಅಚ್ಚುಕಟ್ಟಾಗಿ ಮತ್ತು ಎಚ್ಚರಿಕೆಯಿಂದ ಆಯ್ಕೆ ಮಾಡದಿದ್ದರೆ ಅಂತಹ ಶಕ್ತಿಗಳು ವಿಜೃಂಭಿಸುವ ಸಾಧ್ಯತೆ ಇರುತ್ತವೆ ಎಂದು ಅವರು ಹೇಳಿದ್ದಾರೆ. ರಾಜ್ಯದ ಜನತೆ ಮತದ ಮೌಲ್ಯವನ್ನು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದ ಮೋದಿ, ಪ್ರಗತಿ ಮತ್ತು ಬಿಹಾರದ ಒಟ್ಟಾರೆ  ಅಭಿವೃದ್ಧಿಗಾಗಿ ಎನ್‍ ಡಿಎ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

ಪ್ರತಿಪಕ್ಷಗಳು ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಬಯಸುತ್ತಿವೆ
370ನೇ ವಿಧಿ ರದ್ದುಗೊಳ್ಳಲು ಎಲ್ಲರೂ ಕಾಯುತ್ತಿದ್ದರು. ಆದರೆ, ತಾವು ಅಧಿಕಾರಕ್ಕೆ ಬಂದರೆ ಕೇಂದ್ರ ಸರಕಾರದ ನಿರ್ಧಾರವನ್ನು ರದ್ದುಪಡಿಸುವುದಾಗಿ ಪ್ರತಿಪಕ್ಷಗಳು ಹೇಳುತ್ತಿವೆ. ಎನ್‌ಡಿಎ ಸರಕಾರವು 370ನೇ ವಿಧಿಯನ್ನು ರದ್ದುಪಡಿಸಿತು. ಈ ಜನರು(ಪ್ರತಿಪಕ್ಷ)ತಾವು ಅಧಿಕಾರಕ್ಕೆ ಬಂದರೆ ಸ್ಥಾನಮಾನವನ್ನು  ಮರಳಿ ಸ್ಥಾಪಿಸುತ್ತೇವೆ ಎಂದು ಹೇಳುತ್ತಾರೆ. ಇಂತಹ ಹೇಳಿಕೆಯನ್ನು ನೀಡಿದ ನಂತರ ಅವರಿಗೆ ಬಿಹಾರದಲ್ಲಿ ಮತ ಕೇಳುವ ಧೈರ್ಯವಿದೆಯೇ? ಇದು ಬಿಹಾರಕ್ಕೆ ಅವಮಾನವಲ್ಲವೇ? ಈ ರಾಜ್ಯವು ದೇಶವನ್ನು ರಕ್ಷಿಸಲು ತನ್ನ ಮಗ ಹಾಗೂ ಮಗಳನ್ನು ಗಡಿಗೆ ಕಳುಹಿಸುತ್ತಿದೆ'' ಎಂದು ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com