ಕೋವಿಡ್-19 ಪರಿಣಾಮ ತಗ್ಗಿಸುವಲ್ಲಿ ಭಾರತದ ಆರಂಭಿಕ ನೀತಿ ಉತ್ತಮ- ವಿಶ್ವ ಆರ್ಥಿಕ ವೇದಿಕೆ ಮುಖ್ಯಸ್ಥ ಶ್ವಾಬ್

ಕೋವಿಡ್-19 ಸಾಂಕ್ರಾಮಿಕ ರೋಗ ನಿರ್ವಹಣೆಯಲ್ಲಿ ದೇಶದ ಆರಂಭಿಕ ನೀತಿ  ಪ್ರಬಲವಾಗಿದೆ. ಸುಸ್ಥಿರ ಆರ್ಥಿಕತೆಗೆ ಜಿಗಿತ ಹಾಗೂ ಹೆಚ್ಚಿನ ಡಿಜಿಟಲ್ ಅವಕಾಶ ಇದೀಗ ಅದರ ದೊಡ್ಡ ಅವಕಾಶವಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆ ಮುಖ್ಯಸ್ಥ ಕ್ಲಾಸ್ ಶ್ವಾಬ್ ಹೇಳುವ ಮೂಲಕ ಜಾಗತಿಕ ಕಾರ್ಯಸೂಚಿಯನ್ನು ರೂಪಿಸುವ ಭಾರತ ಶಕ್ತಿಯ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

Published: 25th October 2020 12:45 PM  |   Last Updated: 25th October 2020 12:45 PM   |  A+A-


Klaus_Schwab1

ವಿಶ್ವ ಆರ್ಥಿಕ ವೇದಿಕೆ ಮುಖ್ಯಸ್ಥ ಕ್ಲಾಸ್ ಶ್ವಾಬ್

Posted By : Nagaraja AB
Source : The New Indian Express

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗ ನಿರ್ವಹಣೆಯಲ್ಲಿ ದೇಶದ ಆರಂಭಿಕ ನೀತಿ  ಪ್ರಬಲವಾಗಿದೆ. ಸುಸ್ಥಿರ ಆರ್ಥಿಕತೆಗೆ ಜಿಗಿತ ಹಾಗೂ ಹೆಚ್ಚಿನ ಡಿಜಿಟಲ್ ಅವಕಾಶ ಇದೀಗ ಅದರ ದೊಡ್ಡ ಅವಕಾಶವಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆ ಮುಖ್ಯಸ್ಥ ಕ್ಲಾಸ್ ಶ್ವಾಬ್ ಹೇಳುವ ಮೂಲಕ ಜಾಗತಿಕ ಕಾರ್ಯಸೂಚಿಯನ್ನು ರೂಪಿಸುವ ಭಾರತ ಶಕ್ತಿಯ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

ಭಾರತದ ಬಗ್ಗೆ ಆಶಾವಾದಿಗಳಾಗಿದ್ದು, ಸದೃಢ ಹಾಗೂ ಹೆಚ್ಚು ಸಮಾನ ರಾಷ್ಟ್ರವಾಗಿ  ರೂಪುಗೊಳ್ಳಲು ಶೋಧನೆಯನ್ನು ಭಾರತ ಮುಂದುವರೆಸಿದ್ದು, ವಿಶ್ವ ಪ್ರೇರಣೆಯಾಗಿ ನೋಡುತ್ತದೆ. ಭಾರತದ  ಜನಸಂಖ್ಯಾ ಪ್ರಯೋಜನ ಮತ್ತು ವ್ಯಾಪಕ ವೈವಿಧ್ಯತೆಯೊಂದಿಗೆ, ಜಾಗತಿಕ ಕಾರ್ಯಸೂಚಿಯನ್ನು ರೂಪಿಸುವ ಮತ್ತು ನಮ್ಮ ಸಾಮೂಹಿಕ ಭವಿಷ್ಯವನ್ನು ವ್ಯಾಖ್ಯಾನಿಸುವ ಶಕ್ತಿ ಭಾರತಕ್ಕೆ ಇದೆ  ಎಂದು ಶ್ವಾಬ್ ಪಿಟಿಐಗೆ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದ ಪರಿಣಾಮವನ್ನು ತಗ್ಗಿಸಲು ಭಾರತದ ಆರಂಭಿಕ ನೀತಿ ಪ್ರತಿಕ್ರಿಯೆ ಬಲವಾಗಿತ್ತು, ಲಾಕ್ ಡೌನ್ ಆರಂಭದಿಂದಲೂ ಹಸಿವಿನಿಂದ ಬಳಲುತ್ತಿದ್ದ 800 ಮಿಲಿಯನ್ ಜನರಿಗೆ ದೊಡ್ಡ ಮಟ್ಟದ ಪಡಿತರ ನೀಡಿದ್ದು, ಸಣ್ಣ ಉದ್ಯಮಗಳಿಗೆ ಉಚಿತವಾಗಿ ಸಾಲ ನೀಡಲಾಗಿದೆ. ಆದರೆ, ಇದನ್ನು ತಡೆಯಲು ಸಾಧ್ಯವಾಗದ ಸಂಗತಿಯೆಂದರೆ, ಕಾರ್ಮಿಕರು ಮತ್ತು ದೈನಂದಿನ ವೇತನ ಪಡೆಯುವವರನ್ನು ತೀವ್ರ ಅಭದ್ರತೆಯ ಸ್ಥಿತಿಗೆ ತಂದಿದೆ. ಅವರ  ಜೀವನೋಪಾಯವನ್ನು ರಕ್ಷಿಸುವುದು ಇಂದಿನ ಪ್ರಮುಖ ಕಾಳಜಿಯಾಗಿದೆ. ಇಲ್ಲವಾದಲ್ಲಿ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ  ಇನ್ನಷ್ಟು ಆಳವಾದ, ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಶ್ವಾಬ್ ಹೇಳಿದರು.

ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದ ಸಾಮರ್ಥ್ಯ ಇಲ್ಲದಿರುವುದು ಹಾಗೂ ಉಸಿರಾಟ ಯಂತ್ರಗಳಗಳ ಪೂರೈಕೆಯಲ್ಲಿ ಕೊರತೆ ಇರುವುದನ್ನು ಗಮಿಸಿರುವ ಶ್ವಾಬ್, ಆರೋಗ್ಯ ಪರಿಕರಗಳನ್ನು ಒದಗಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಅವರು ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp