ಎಲ್ ಎಸಿಯಲ್ಲಿ ಭಾರತ- ಚೀನಾ ಸೇನಾಪಡೆಗಳಿಂದ ಗುಂಡಿನ ಚಕಮಕಿ 

 ಕಳೆದ ಮೂರು ತಿಂಗಳಿನಿಂದಲೂ ಭಾರತ ಹಾಗೂ ಚೀನಾ ನಡುವಣ ವಿವಾದವಾಗುತ್ತಿರುವ  ಪೂರ್ವ ಲಡಾಖ್ ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳ ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿರುವ ಬಗ್ಗೆ ಮಂಗಳವಾರ ಮೂಲಗಳಿಂದ ತಿಳಿದುಬಂದಿದೆ.
ಪಾಂಗೊಂಗು ಸರೋವರ
ಪಾಂಗೊಂಗು ಸರೋವರ

ಲಡಾಖ್:  ಕಳೆದ ಮೂರು ತಿಂಗಳಿನಿಂದಲೂ ಭಾರತ ಹಾಗೂ ಚೀನಾ ನಡುವಣ ವಿವಾದವಾಗುತ್ತಿರುವ  ಪೂರ್ವ ಲಡಾಖ್ ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳ ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿರುವ ಬಗ್ಗೆ ಮಂಗಳವಾರ ಮೂಲಗಳಿಂದ ತಿಳಿದುಬಂದಿದೆ.

ಸೋಮವಾರ ಲಡಾಖ್ ನ ಪಾಂಗೊಂಗ್ ಸರೋವರದ ದಕ್ಷಿಣ ದಂಡೆಯಲ್ಲಿರುವ ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿದ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಚೀನಾ  ಹೇಳಿಕೆ ನೀಡಿತ್ತು. ಇದರ ಬೆನ್ನಲ್ಲೇ, ಇಂದು ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾ ಸೇನೆಯಿಂದ ಸರಣಿ ಪ್ರಚೋದನಾಕಾರಿ  ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಪ್ರತಿರೋಧದ ಕ್ರಮಗಳನ್ನು ಕೈಗೊಳ್ಳುವಂತೆ ಚೀನಾ ಗಡಿ ಭದ್ರತಾ ಪಡೆಯನ್ನು ಒತ್ತಾಯಿಸಿದ್ದಾಗಿ ಪೀಪಲ್ ಲೀಬರೇಷನ್ ಆರ್ಮಿ( ಪಿಎಲ್ ಇ) ವಕ್ತಾರರೊಬ್ಬರು ಹೇಳಿದ್ದಾರೆ.

ಆದಾಗ್ಯೂ, ಚೀನಾದ ಪ್ರತಿರೋಧ ಕ್ರಮಗಳ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಚೀನಾದ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಭಾರತೀಯ ಸೇನೆ ಕಾನೂನುಬಾಹಿರವಾಗಿ ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿದ್ದು, ಪಾಂಗೊಂಗು ಸರೋವರದಲ್ಲಿ ದಕ್ಷಿಣ ದಂಡ ಹಾಗೂ ಶೆನ್ ಪೊ ಪರ್ವತ ಪ್ರದೇಶಕ್ಕೆ ಪ್ರವೇಶಿಸಿದೆ ಎಂದು ಪಿಎಲ್ ಎ ಅಧಿಕಾರಿಗಳು ಕೂಡಾ ಹೇಳಿದ್ದಾರೆ.

ಕಾರ್ಯಾಚರಣೆ ವೇಳೆಯಲ್ಲಿ ಚೀನಾ ಗಡಿ ಭದ್ರತಾ ಪಡೆಗಳ ಮೇಲೆ ಭಾರತೀಯ ಸೇನೆ ಗುಂಡಿನ ಚಕಮಕಿ ನಡೆಸಿದ್ದು, ಪರಿಸ್ಥಿತಿ ಸ್ಥಿರಗೊಳಿಸಲು ಪ್ರತಿರೋಧದ ಕ್ರಮಗಳನ್ನು  ಕೈಗೊಳ್ಳುವಂತೆ ಒತ್ತಾಯಿಸಿದ್ದಾಗಿ ಅವರು ತಿಳಿಸಿದ್ದಾರೆ.

ಗಂಭೀರ ರೀತಿಯ ಪ್ರಚೋದನಾಕಾರಿ ಕ್ರಮ ಅತ್ಯಂತ ಕೆಟ್ಟ ನಡತೆ ಎಂದು ಹೇಳಿರುವ ಚೀನಾ, ಅಪಾಯಕಾರಿ ಕ್ರಮಗಳನ್ನು ಕೂಡಲೇ  ನಿಲ್ಲಿಸಬೇಕೆಂದು ಭಾರತದ ಬಳಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com