ಖ್ಯಾತ ಇತಿಹಾಸ ವಿದೂಷಿ ಕಪಿಲಾ ವಾತ್ಸಾಯನ ನಿಧನ

ದೇಶ ಕಂಡ ಖ್ಯಾತ ಇತಿಹಾಸ ವಿದೂಷಿ ಕಪಿಲಾ ವಾತ್ಸಾಯನ ಅವರು ನಿಧನರಾಗಿದ್ದು, ಅವರಿಗೆ 91 ವರ್ಷ ವಯಸ್ಸಾಗಿತ್ತು.
ಕಪಿಲಾ ವಾತ್ಸಾಯನ
ಕಪಿಲಾ ವಾತ್ಸಾಯನ

ನವದೆಹಲಿ: ದೇಶ ಕಂಡ ಖ್ಯಾತ ಇತಿಹಾಸ ವಿದೂಷಿ ಕಪಿಲಾ ವಾತ್ಸಾಯನ ಅವರು ನಿಧನರಾಗಿದ್ದು, ಅವರಿಗೆ 91 ವರ್ಷ ವಯಸ್ಸಾಗಿತ್ತು.

ಇತಿಹಾಸ, ಕಲೆ, ವಾಸ್ತುಶಿಲ್ಪ ಮತ್ತು ಭಾರತೀಯ ಶಾಸ್ತ್ರೀಯ ನೃತ್ಯದ ಪ್ರಸಿದ್ಧ ವಿದೂಷಿ ಕಪಿಲಾ ವಾತ್ಸಾಯನ್ ಅವರು ತಮ್ಮ ದೆಹಲಿ ನಿವಾಸದಲ್ಲಿ ಬುಧವಾರ ನಿಧನರಾಗಿದ್ದಾರೆ.

ಇಂದು ಬೆಳಗ್ಗೆ 9 ಗಂಟೆಗೆ ಗುಲ್ ಮೊಹರ್ ಎನ್ ಕ್ಲೇವ್ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ ನ ಕಾರ್ಯದರ್ಶಿ ಕನ್ವಾಲ್ ಅಲಿ ಅವರು ಹೇಳಿದ್ದಾರೆ. ಇದೇ ಟ್ರಸ್ಟ್ ನಲ್ಲಿ ಕಪಿಲಾ ವಾತ್ಸಾಯನ್ ಆಜೀವ ಪರ್ಯಂತ ಸದಸ್ಯತ್ವ ಹೊಂದಿದ್ದಾರೆ. ಇಷ್ಟು ಮಾತ್ರವಲ್ಲದೇ ಕಪಿಲಾ  ವಾತ್ಸಾಯನ್ ಅವರು, ಐಐಸಿಯ ಏಷ್ಯಾ ಪ್ರಾಜೆಕ್ಟ್ ನಲ್ಲೂ ಸದಸ್ಯರಾಗಿದ್ದಾರೆ. 

ಇನ್ನು ಕಪಿಲಾ ವಾತ್ಸಾಯನ್ ಅವರ ಸಾವಿಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೂಟ್ ಅವರು ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com