ಮಹಾರಾಷ್ಟ್ರದಲ್ಲಿ ಘೋರ ದುರಂತ: ಕುಡಿಯಲು ಮದ್ಯ ಸಿಗದೆ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿದ 7 ಕಾರ್ಮಿಕರು ಸಾವು

ಕುಡಿಯಲು ಆಲ್ಕೋಹಾಲ್ ಸಿಕ್ಕಿಲ್ಲವೆಂದು ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿದ ಏಳು ಮಂದಿ ಕಾರ್ಮಿಕರು ದುರಂತ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಕಾರ್ಮಿಕರು ದಾಖಲಾಗಿದ್ದ ಆಸ್ಪತ್ರೆಯ ಮುಂಭಾಗದ ದೃಶ್ಯ
ಕಾರ್ಮಿಕರು ದಾಖಲಾಗಿದ್ದ ಆಸ್ಪತ್ರೆಯ ಮುಂಭಾಗದ ದೃಶ್ಯ
Updated on

ಮುಂಬೈ: ಕುಡಿಯಲು ಆಲ್ಕೋಹಾಲ್ ಸಿಕ್ಕಿಲ್ಲವೆಂದು ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿದ ಏಳು ಮಂದಿ ಕಾರ್ಮಿಕರು ದುರಂತ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಯವತ್ಮಾಲ್ ನಲ್ಲಿ ಈ ಘಟನೆ ವರದಿಯಾಗಿದ್ದು  ಮದ್ಯದಂಗಡಿಗಳನ್ನು ಮುಚ್ಚಿದ್ದರಿಂದ ಮದ್ಯ ಸಿಕ್ಕದೆ ಸ್ಯಾನಿಟೈಸರ್ ಸೇವನೆ ಮಾಡಿದ ಪರಿಣಾಮ ಸಾವು ಸಂಭವಿಸಿದೆ.

"ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇವರೆಲ್ಲರೂ ಕಾರ್ಮಿಕರಾಗಿದ್ದರು. ಅವರು ಆಲ್ಕೊಹಾಲ್ ಖರೀದಿಸಲು ಸಾಧ್ಯವಾಗದೆ ಹೋದಾಗ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿದ್ದಾರೆ" ಎಂದು ಡಬ್ಲ್ಯೂ ಪೊಲೀಸ್ ಠಾಣೆಯ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅಂಜಯ್ ಪೂಜಲ್ವಾರ್ ಹೇಳಿದ್ದಾರೆ.

ಕೋವಿಡ್ ಪ್ರಕರಣಗಳು ಶೀಘ್ರವಾಗಿ ಹೆಚ್ಚುತ್ತಿರುವ ಮಧ್ಯೆ ಮಹಾರಾಷ್ಟ್ರ ಸರ್ಕಾರ ಗುರುವಾರ ಕಠಿಣ ನಿರ್ಬಂಧಗಳನ್ನು ವಿಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com