ಪಾಟ್ನಾ: ಪೂರ್ವ ಸೆಂಟ್ರಲ್ ರೈಲ್ವೆ(ಇಸಿಆರ್) ಉದ್ಯೋಗಿಯೊಬ್ಬರು ತಮ್ಮ ಕೋವಿಡ್ ಸೋಂಕಿತ ಹೆಂಡತಿಯನ್ನು ಕೊಂದು ನಂತರ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಾಟ್ನಾದಲ್ಲಿ ವರದಿಯಾಗಿದೆ.
ಉದ್ಯೋಗಿ ಅತುಲ್ ಲಾಲ್, ಮೊದಲು ತಮ್ಮ ಪತ್ನಿ ತುಲಿಕಾ ಕುಮಾರಿಯವರ ಕತ್ತು ಸೀಳಿ ನಂತರ ಮನೆಯ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು ಈ ಹೃದಯ ಕದಡುವ ಘಟನೆ ಚಿತ್ರಗುಪ್ತನಗರದಲ್ಲಿ ನಡೆದಿದೆ.
ಕೆಲ ಕುಟುಂಬ ಸಮಸ್ಯೆಗಳ ಬಗ್ಗೆ ಗಂಡ ಮತ್ತು ಹೆಂಡತಿ ಜಗಳವಾಡಿದ್ದರು. ಮಹಿಳೆಗೆ ಕೋವಿಡ್ ಸೋಂಕು ತಗುಲಿರುವುದರಿಂದ ತಮಗೂ ಬರಬಹುದು ಎಂಬ ಆತಂಕದಿಂದ ನೆರೆಹೊರೆಯವರು ಸಮಾಧಾನಪಡಿಸಲು ಪ್ರಯತ್ನಿಸಲಿಲ್ಲ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಜಗಳದಿಂದ ಕೋಪಗೊಂಡಿದ್ದ ಅತುಲ್ ಲಾಲ್ ತನ್ನ ಹೆಂಡತಿಯ ಗಂಟಲನ್ನು ಬ್ಲೇಡ್‌ನಿಂದ ಸೀಳಿದ್ದಾನೆ. ಇದನ್ನು ಕಂಡ ಸುಮಾರು 6 ಮತ್ತು 9 ವರ್ಷ ವಯಸ್ಸಿನ ಮಕ್ಕಳು ಕೂಗಾಡಿದ್ದು ಇದರಿಂದ ಹೆದರಿದ ಅತುಲ್ ಲಾಲ್ ಐದನೇ ಮಹಡಿಯಿಂದ ಹಾರಿ ಸಾವನ್ನಪ್ಪಿದರು. ದಂಪತಿಗಳು ಅರಾ ಜಿಲ್ಲೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement