ಯುಪಿ: ಆಕ್ಸಿಜನ್ ಸಿಲಿಂಡರ್‌ಗಾಗಿ ನಟ ಸೋನು ಸೂದ್‌ಗೆ ಟ್ಯಾಗ್ ಮಾಡಿ ಟ್ವೀಟ್, ವ್ಯಕ್ತಿಯನ್ನು ಜೈಲಿಗಟ್ಟಿದ ಪೊಲೀಸರು

ಆಕ್ಸಿಜನ್ ಸಿಲಿಂಡರ್ ಬೇಕೆಂದು ಟ್ವೀಟ್ ಮಾಡಿ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾನೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದವನ ವಿರುದ್ಧ ಸಾಂಕ್ರಾಮಿಕ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಅಮೇಥಿ: ಆಕ್ಸಿಜನ್ ಸಿಲಿಂಡರ್ ಬೇಕೆಂದು ಟ್ವೀಟ್ ಮಾಡಿ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾನೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದವನ ವಿರುದ್ಧ ಸಾಂಕ್ರಾಮಿಕ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತನ್ನ 88 ವರ್ಷದ ಸಂಬಂಧಿ ಪರಿಸ್ಥಿತಿ ಚಿಂತಜನಕವಾಗಿದೆ. ಹೀಗಾಗಿ ಅವರಿಗೆ ಆಕ್ಸಿಜನ್ ಸಿಲಿಂಡರ್ ಬೇಕು ಎಂದು ಶಶಾಂಕ್ ಯಾದವ್ ಎಂಬಾತ ಬಾಲಿವುಡ್ ನಟ ಸೋನು ಸೂದ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದನು. 

ಇದಕ್ಕೆ ಕೇಂದ್ರ ಸಚಿವೆ ಮತ್ತು ಅಮೆಥಿ ಸಂಸದೆ ಸ್ಮೃತಿ ಇರಾನಿ ಅವರು "ಶಶಾಂಕ್ ಅವರನ್ನ ಸಂಪರ್ಕಿಸಲು ಆತ ಟ್ವೀಟ್ ನಲ್ಲಿ ನೀಡಿದ ಮೊಬೈಲ್ ಸಂಖ್ಯೆಗೆ ಮೂರು ಬಾರಿ ಕರೆ ಮಾಡಿದ್ದೆ. ಆದರೆ ಮೊಬೈಲ್ ಸ್ವೀಕರಿಸದ ಕಾರಣ ವ್ಯಕ್ತಿಯನ್ನು ಪತ್ತೆ ಹಚ್ಚಲು ಮತ್ತು ಸಹಾಯ ಮಾಡಲು ಜಿಲ್ಲಾಧಿಕಾರಿ ಮತ್ತು ಅಮೆಥಿ ಪೊಲೀಸರನ್ನು ಎಚ್ಚರಿಸಿದ್ದೇನೆ ಎಂದು ಅವರು ಹೇಳಿದ್ದರು. 

ಈ ಬಗ್ಗೆ ಪ್ರಶ್ನಿಸಿದಾಗ, ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಸಿಂಗ್ ಬುಧವಾರ ಯಾದವ್ ದೂರದ ಸಂಬಂಧಿಗಾಗಿ ಟ್ವೀಟ್ ಮಾಡಿದ್ದಾರೆ ಎಂದು ಹೇಳಿದರು. ಅವನನ್ನು ಸಂಪರ್ಕಿಸಲು ಕರೆ ಮಾಡಿದ್ದೇವು ಆದರೆ ಆತ ಮೊಬೈಲ್ ಕರೆ ಸ್ವೀಕರಿಸಲಿಲ್ಲ. ಅವನು ಯಾವುದಾದರೂ ಸಮಸ್ಯೆಯಲ್ಲಿರಬಹುದು ಎಂದು ನಾವು ಭಾವಿಸಿದ್ದೆವು. ಆದ್ದರಿಂದ ನಾವು ಕಣ್ಗಾವಲು ಬಳಸಿ ಅವನ ಸ್ಥಳವನ್ನು ಪತ್ತೆ ಹಚ್ಚಿ ಅವನ ಮನೆಗೆ ತಲುಪಿದೆವು, ಅಲ್ಲಿ ಅವನು ಮಲಗಿದ್ದನು ಸಿಂಗ್ ಹೇಳಿದರು.

"ಶಶಾಂಕ್ ನ ಉದ್ದೇಶವು ಸಂವೇದನೆ ಮತ್ತು ಭಯವನ್ನು ಸೃಷ್ಟಿಸುವುದು ಎಂದು ಅವನು ಹೇಳಿದ್ದಾಗಿ ಎಂದು ಅಮೆಥಿ ಪೊಲೀಸರು ಮಂಗಳವಾರ ಟ್ವೀಟ್ ಮಾಡಿದ್ದಾರೆ, "ರೋಗಿಗೆ ಕೋವಿಡ್ -19 ಸೋಂಕು ಇರಲಿಲ್ಲ ಅಥವಾ ಅವರಿಗೆ ಆಮ್ಲಜನಕದ ಅಗತ್ಯವಿರಲಿಲ್ಲ. ಸೋಮವಾರ ರಾತ್ರಿ 8 ಗಂಟೆಗೆ ಹೃದಯ ಸ್ತಂಭನದಿಂದಾಗಿ ಅವರು ಸಾವನ್ನಪ್ಪಿದರು. ಆದರೆ ಕೋವಿಡ್ ನಂತರ ಪರಿಸ್ಥಿತಿಯಲ್ಲಿ ಇಂತಹ ಟ್ವೀಟ್‌ಗಳನ್ನು ಮಾಡುವುದು ಖಂಡನೀಯ ಮಾತ್ರವಲ್ಲ ಅಪರಾಧವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ತಮ್ಮ ಸಂಬಂಧಿಗೆ ಕೋವಿಡ್ -19 ಪಾಸಿಟಿವ್ ಎಂದು ಯಾದವ್ ಕೂಡ ತಮ್ಮ ಟ್ವೀಟ್‌ನಲ್ಲಿ ಹೇಳಿಲ್ಲ.

 ಹೀಗಾಗಿ ಆತನ ವಿರುದ್ಧ ಸಾಂಕ್ರಾಮಿಕ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಸಿಆರ್‌ಪಿಸಿಯ ಸೆಕ್ಷನ್ 41ರ ಅಡಿಯಲ್ಲಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಎಸ್‌ಪಿ ಹೇಳಿದರು. ಯಾದವ್ ನನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಆದರೆ ನಂತರ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಯಾದವ್ ಅವರ ಸಂಬಂಧಿಗೆ ಕೋವಿಡ್ ತಗುಲಿರಲಿಲ್ಲ. ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಖಾಸಗಿ ವೈದ್ಯರ ಅಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಅಶುತೋಷ್ ದುಬೆ ಹೇಳಿದ್ದಾರೆ. ರೋಗಿಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿಲ್ಲ ಮತ್ತು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com