ಭಾರತದಲ್ಲಿ ಕೊರೋನಾ ಸ್ಫೋಟ: ಕೋವಿಡ್-19 ನಿಂದ ಮೃತಪಟ್ಟ ಒಟ್ಟು ಸೋಂಕಿತರಲ್ಲಿ ಶೇ.20ರಷ್ಟು ಏಪ್ರಿಲ್ ನಲ್ಲೇ!

ಕಳೆದ ನಾಲ್ಕು ದಿನಗಳಲ್ಲಿ ಭಾರತದಲ್ಲಿ ಕೋವಿಡ್-19ನಿಂದ ಶೇಕಡಾ 20ರಷ್ಟು ಮಂದಿ ರೋಗಿಗಳು ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ ಹೊಸ ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ 58 ಲಕ್ಷದ 47 ಸಾವಿರದ 932ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೆ ಕಳೆದ ವರ್ಷದಿಂದ ಈವರೆಗೆ 1.80 ಕೋಟಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕಳೆದ ನಾಲ್ಕು ದಿನಗಳಲ್ಲಿ ಭಾರತದಲ್ಲಿ ಕೋವಿಡ್-19ನಿಂದ ಶೇಕಡಾ 20ರಷ್ಟು ಮಂದಿ ರೋಗಿಗಳು ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ ಹೊಸ ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ 58 ಲಕ್ಷದ 47 ಸಾವಿರದ 932ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೆ ಕಳೆದ ವರ್ಷದಿಂದ ಈವರೆಗೆ 1.80 ಕೋಟಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ.

ದೇಶದಲ್ಲಿ ಇದುವರೆಗೆ 2 ಲಕ್ಷದ 01 ಸಾವಿರದ 187 ಮಂದಿ ಒಟ್ಟು ಕೋವಿಡ್ ಸೋಂಕಿಗೆ ಬಲಿಯಾಗಿದ್ದು ಏಪ್ರಿಲ್ ತಿಂಗಳಲ್ಲಿ 38 ಸಾವಿರದ 719 ಮಂದಿ ಕೊರೋನಾ ಸೋಂಕಿಗೆ ಸಾವಿಗೀಡಾಗಿದ್ದಾರೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಚಿತಾಗಾರಗಳಲ್ಲಿ ಕೊರೋನಾ ಸೋಂಕಿತರನ್ನು ದಹನ ಮಾಡಲು ಸಮಸ್ಯೆಯುಂಟಾಗಿದೆ.

ಭಾರತದಲ್ಲಿ ಸರಾಸರಿ ಪ್ರತಿದಿನ 28 ಸಾವಿರ ಮಂದಿ ಕೊರೋನಾದಿಂದ ಸಾಯುತ್ತಿದ್ದಾರೆ, 2ರಿಂದ 3 ಸಾವಿರ ಮಂದಿ ಪ್ರತಿದಿನ ಮೃತಪಡುತ್ತಿದ್ದರೆ ನಗರ ಪ್ರದೇಶಗಳಲ್ಲಿರುವ ಚಿತಾಗಾರಗಳಲ್ಲಿ ಸಮಸ್ಯೆಯಾಗುತ್ತಿರಲಿಲ್ಲ ತಜ್ಞರು ಹೇಳುತ್ತಾರೆ.

ಕೊರೋನಾ ಎರಡನೇ ಅಲೆ ಪಟ್ಟಣ ಮತ್ತು ಗ್ರಾಮಗಳಿಗೂ ವಿಸ್ತಾರ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3 ಲಕ್ಷ ದಾಟಲು ಕೇವಲ 6 ದಿನ ಸಾಕಾಯಿತು, ಕೊರೋನಾ ಸೋಂಕು ಜಗತ್ತಿನಲ್ಲಿ ಕಾಣಿಸಿಕೊಂಡ ನಂತರ ಇಷ್ಟೊಂದು ವೇಗವಾಗಿ ಸೋಂಕು ಹರಡಿ ಕೇವಲ ಐದಾರು ದಿನದಲ್ಲಿ ಇಷ್ಟೊಂದು ವ್ಯಾಪಿಸಿದ್ದು ಭಾರತದಲ್ಲಿಯೇ ಮೊದಲು. ಅಮೆರಿಕದ ಮಿಚಿಗನ್ ವಿಶ್ವವಿದ್ಯಾನಿಲಯದ ಭ್ರಾಮರ್ ಮುಖರ್ಜಿ ಸೇರಿದಂತೆ ಕೆಲವು ಜೀವವಿಜ್ಞಾನಿಗಳು, ಮೇ ಮಧ್ಯದಲ್ಲಿ ಭಾರತದಲ್ಲಿ ಸೋಂಕಿನ ತೀವ್ರತೆಯು ಗರಿಷ್ಠ 8-10 ಲಕ್ಷ ತಲುಪುವ ಸಾಧ್ಯತೆಯಿದೆ ಎಂದು ಗ್ರಹಿಸಿದ್ದಾರೆ. ನಂತರ ಶೀಘ್ರ ಕುಸಿತ ಉಂಟಾಗಬಹುದು ಎಂದು ಹೇಳಿದ್ದಾರೆ.

ಭಾರತದಲ್ಲಿ ಸಾಂಕ್ರಾಮಿಕ ನಿರ್ವಹಣೆಯನ್ನು ಸೂಕ್ಷ್ಮವಾಗಿ ಗಮನಿಸುವವರು ಸ್ವಲ್ಪ ಭಿನ್ನವಾಗಿ ಹೇಳುತ್ತಾರೆ. ದೈನಂದಿನ ಕೋವಿಡ್ -19 ಪ್ರಕರಣಗಳ ಅಧಿಕೃತ ಸಂಖ್ಯೆ ದಿನಕ್ಕೆ 5 ಲಕ್ಷ ಪ್ರಕರಣಗಳನ್ನು ಮೀರಲಿಕ್ಕಿಲ್ಲ, ಇತ್ತೀಚೆಗೆ ಪರೀಕ್ಷೆ ಪ್ರಮಾಣ ಹೆಚ್ಚಾಗಿದೆ, ದೈನಂದಿನ ಪರೀಕ್ಷೆ ಹೆಚ್ಚಾಗಿರುವುದರಿಂದ ಕೊರೋನಾ ಜೂನ್ ಹೊತ್ತಿಗೆ ಇಳಿಮುಖವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಅಧಿಕಾರಿಗಳು ಹೇಳುತ್ತಾರೆ.

ಕೊರೋನಾ ಎರಡನೇ ಅಲೆ ದೇಶದ ಮೆಟ್ರೊ ನಗರಗಳಲ್ಲಿ ಮಾತ್ರವಲ್ಲದೆ ಎರಡನೇ ದರ್ಜೆಯ ನಗರಗಳಲ್ಲಿ, ಪಟ್ಟಣಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com