ಭಾರತ- ಚೀನಾ ರಚನಾತ್ಮಕ ಮಾತುಕತೆ: ತ್ವರಿತಗತಿಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಎರಡು ಕಡೆ ಒಪ್ಪಿವೆ-ಎಂಇಎ

ಪೂರ್ವ ಲಡಾಖ್ ಕುರಿತು ಇತ್ತೀಚಿನ ಭಾರತ- ಚೀನಾ ಮಾತುಕತೆ ರಚನಾತ್ಮಕವಾಗಿದೆ ಮತ್ತು ಉಳಿದಿರುವ ಸಮಸ್ಯೆಗಳನ್ನು ಕ್ಷೀಪ್ರಗತಿಯಲ್ಲಿ ಬಗೆಹರಿಸಿಕೊಳ್ಳಲು ಉಭಯ ದೇಶಗಳು ಒಪ್ಪಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪೂರ್ವ ಲಡಾಖ್ ಕುರಿತು ಇತ್ತೀಚಿನ ಭಾರತ- ಚೀನಾ ಮಾತುಕತೆ ರಚನಾತ್ಮಕವಾಗಿದೆ ಮತ್ತು ಉಳಿದಿರುವ ಸಮಸ್ಯೆಗಳನ್ನು ಕ್ಷೀಪ್ರಗತಿಯಲ್ಲಿ ಬಗೆಹರಿಸಿಕೊಳ್ಳಲು ಉಭಯ ದೇಶಗಳು ಒಪ್ಪಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.

12ನೇ ಸುತ್ತಿನ ಮಿಲಿಟರಿ ಮಾತುಕತೆಯ ನಡೆದ ಎರಡು ದಿನಗಳ ನಂತರ ಭಾರತೀಯ ಸೇನೆ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಉಭಯ ಪಕ್ಷಗಳು ನಿರ್ಲಿಪ್ತತೆ ಹೊಂದಿವೆ ಮತ್ತು ಸೇನೆ ಹಿಂತೆಗೆತಕ್ಕೆ ಸಂಬಂಧಿಸಿದಂತೆ ಆಳವಾದ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗಿದೆ. ಪರಸ್ಪರ ತಿಳುವಳಿಕೆಯನ್ನು ಸಭೆ ಹೆಚ್ಚಿಸಿದೆ ಎಂದು ಹೇಳಲಾಗಿದೆ.

ಆನ್ ಲೈನ್ ನಲ್ಲಿ ನಡೆದ ಮಾತುಕತೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಂಇಎ ವಕ್ತಾರ  ಅರಿಂದಮ್ ಬಾಗ್ಚಿ, ಮಾತುಕತೆ ನಂತರ ಈ ಹೇಳಿಕೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಮಾತುಕತೆ ರಚನಾತ್ಮಕವಾಗಿದ್ದು, ಉಳಿದಿರುವ ಸಮಸ್ಯೆಗಳನ್ನು ಅಸ್ತಿತ್ವದಲ್ಲಿರುವ ಒಪ್ಪಂದಗಳಂತೆ ಮಾತುಕತೆ ಮೂಲಕ ತ್ವರಿತಗತಿಯಲ್ಲಿ ಪರಿಹರಿಸಿಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಅವರು ಹೇಳಿದರು.

ಪಾಂಗೊಂಗ್ ಸರೋವರದ ಬಳಿ ಹಿಂಸಾಚಾರ ಸಂಭವಿಸಿದ ನಂತರ ಕಳೆದ ವರ್ಷ ಮೇ 5 ರಂದು ಭಾರತ ಮತ್ತು ಚೀನಾ ಮಿಲಿಟರಿ ಪಡೆಗಳ ನಡುವೆ ವಿವಾದ ತಲೆದೋರಿತ್ತು. ಉಭಯ ದೇಶಗಳು ಭಾರೀ ಪ್ರಮಾಣದ ಸೈನಿಕರನ್ನು ನಿಯೋಜಿಸಿತ್ತು. ಸೂಕ್ಷ್ಮ ಪ್ರದೇಶ ಎಲ್ ಎಸಿ ಉದ್ದಕ್ಕೂ ಪ್ರತಿಯೊಂದು ಕಡೆಯೂ ಪ್ರಸ್ತುತ 50 ಸಾವಿರದಿಂದ 60 ಸಾವಿರ ಪಡೆಗಳನ್ನು ನಿಯೋಜಿಸಲಾಗಿದೆ.

ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಯ ಸರಣಿಯ ಪರಿಣಾಮವಾಗಿ, ಉಭಯ ಪಕ್ಷಗಳು ಫೆಬ್ರವರಿಯಲ್ಲಿ ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಿಂದ ಸೇನೆ ಮತ್ತು ಶಸ್ತ್ರಾಸ್ತ್ರಗಳ ಹಿಂಪಡೆಯುವಿಕೆಯನ್ನು ಪೂರ್ಣಗೊಳಿಸಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com