'ಕಾನ್ಪುರದಲ್ಲಿ ಉಗ್ರ ಸಂಘಟನೆಗಳು, ಸ್ಲೀಪರ್ ಸೆಲ್ ಗಳು': ಭಾರಿ ಚರ್ಚೆಗೆ ಗ್ರಾಸವಾದ ಉತ್ತರ ಪ್ರದೇಶ ಡಿಜಿಪಿ ಹೇಳಿಕೆ

ಕಾನ್ಪುರದಲ್ಲಿ ಭಯೋತ್ಪಾದಕ ಘಟಕಗಳು ಮತ್ತು ಸ್ಲೀಪರ್ ಸೆಲ್‌ಗಳು ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಮುಕುಲ್ ಗೋಯೆಲ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾನ್ಪುರ: ಕಾನ್ಪುರದಲ್ಲಿ ಭಯೋತ್ಪಾದಕ ಘಟಕಗಳು ಮತ್ತು ಸ್ಲೀಪರ್ ಸೆಲ್‌ಗಳು ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಮುಕುಲ್ ಗೋಯೆಲ್ ಹೇಳಿದ್ದಾರೆ.

ಕಾನ್ಪುರ ಪೊಲೀಸ್ ಕಮಿಷನರೇಟ್‌ನಲ್ಲಿ ಕೋವಿಡ್ ಕೇರ್ ಆಸ್ಪತ್ರೆಯನ್ನು ಉದ್ಘಾಟಿಸಲು ಆಗಮಿಸಿದ್ದ ಡಿಜಿಪಿ. 'ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಗುಪ್ತಚರ ಸಂಸ್ಥೆಗಳು ಉಗ್ರ ಗುಂಪುಗಳು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವ ಮೊದಲು ಅಂತಹ ಪಡೆಗಳನ್ನು ತಟಸ್ಥ ಅಥವಾ ನಿರ್ನಾಮಗೊಳಿಸಲು ಹೆಚ್ಚಿನ ನಿಗಾ ಇಡಲು ನಿರ್ಧರಿಸಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ಎಟಿಎಸ್ ಶಂಕಿತ ಭಯೋತ್ಪಾದಕ ಚಟುವಟಿಕೆಗಳ ಮೇಲೆ ಲಖನೌನಲ್ಲಿ ಕೆಲವರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. 

ಲಖನೌನಲ್ಲಿ ಶಂಕಿತ ಉಗ್ರರ ಬಂಧನವಾಗುತ್ತಿದ್ದಂತೆಯೇ ಇತ್ತ ಕಾನ್ಪುರದಲ್ಲೂ ನಿಗಾ ಇರಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. 

"ಭಯೋತ್ಪಾದನಾ ಘಟಕಗಳ ಬಗ್ಗೆ ನಮ್ಮಲ್ಲಿ ಯಾವುದೇ ನಿರ್ದಿಷ್ಟ ಗುಪ್ತಚರ ಮಾಹಿತಿಯಿಲ್ಲ, ಆದರೆ ನಗರದಲ್ಲಿ (ಕಾನ್ಪುರ) ಭಯೋತ್ಪಾದಕ ಘಟಕಗಳು ಮತ್ತು ಸ್ಲೀಪರ್ ಸೆಲ್‌ಗಳ ಸಾಧ್ಯತೆಯನ್ನು ನಾವು ನಿರಾಕರಿಸಲು ಸಾಧ್ಯವಿಲ್ಲ. ಕಾನ್ಪುರದಲ್ಲಿ ಭಯೋತ್ಪಾದಕರು ಮತ್ತು ಸ್ಲೀಪರ್ ಸೆಲ್‌ಗಳ ಚಲನವಲನಗಳನ್ನು ಗುಪ್ತಚರ ಸಂಸ್ಥೆಗಳು ಶಂಕಿಸಿವೆ ಎಂದು ಅವರು ಹೇಳಿದರು.

ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಇದೇ ರೀತಿಯ ಸೌಲಭ್ಯಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ಕರ್ತವ್ಯದ ಸಮಯದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಸಿಬ್ಬಂದಿಯನ್ನು ಡಿಜಿಪಿ ನೆನಪಿಸಿಕೊಂಡರು.

ಅಲ್-ಖೈದಾ ಬೆಂಬಲಿತ ಅನ್ಸರ್ ಗಜ್ವಾತುಲ್ ಹಿಂದ್ ನ ಇಬ್ಬರು ಭಯೋತ್ಪಾದಕರನ್ನು ಕಳೆದ ತಿಂಗಳು ಲಖನೌ ಹೊರವಲಯದಲ್ಲಿ ಉತ್ತರ ಪ್ರದೇಶ ಎಟಿಎಸ್ ಬಂಧಿಸಿತ್ತು, ಅವರನ್ನು "ಮಾನವ ಬಾಂಬ್" ಗಳಾಗಿ ಬಳಸಿಕೊಂಡು ವಿದ್ವಂಸ ವೆಸಗಲು ಉಗ್ರ ಸಂಘಟನೆಗಳು ಹವಣಿಸುತ್ತಿದ್ದವು. ಅಲ್ಲದೆ ಉತ್ತರ ಪ್ರದೇಶದ ಹಲವು ಸ್ಥಳಗಳಲ್ಲಿ ಸ್ಫೋಟಗಳನ್ನು ಯೋಜಿಸಿದ್ದರು. ಆದರೆ ಪೊಲೀಸರ ಕಾರ್ಯಾಚರಣೆಯಿಂದ ಬಹುದೊಡ್ಡ ಅನಾಹುತ ತಪ್ಪಿದಂತಾಗಿದೆ. ಅಲ್ಲದೆ ಶಂಕಿತ ಉಗ್ರರ ಮನೆಗಳಿಂದ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com