ಗುಜರಾತ್ ನಲ್ಲಿ ಮೊದಲ, ಭಾರತದಲ್ಲಿ ಮೂರನೇ ಓಮಿಕ್ರಾನ್ ಪ್ರಕರಣ ಪತ್ತೆ!

ಜಗತ್ತಿನಾದ್ಯಂತ ವ್ಯಾಪಕ ಭೀತಿಗೆ ಕಾರಣವಾಗಿರುವ ಕೊರೋನಾ ರೂಪಾಂತರಿ ಓಮಿಕ್ರಾನ್ ಸೋಂಕು ಕರ್ನಾಟಕದ ಬೆನ್ನಲ್ಲೇ ಇದೀಗ ಗುಜರಾತ್ ನಲ್ಲೂ ಪತ್ತೆಯಾಗಿದೆ.
ಓಮಿಕ್ರಾನ್ ರೂಪಾಂತರಿ
ಓಮಿಕ್ರಾನ್ ರೂಪಾಂತರಿ
Updated on

ಅಹ್ಮದಾಬಾದ್: ಜಗತ್ತಿನಾದ್ಯಂತ ವ್ಯಾಪಕ ಭೀತಿಗೆ ಕಾರಣವಾಗಿರುವ ಕೊರೋನಾ ರೂಪಾಂತರಿ ಓಮಿಕ್ರಾನ್ ಸೋಂಕು ಕರ್ನಾಟಕದ ಬೆನ್ನಲ್ಲೇ ಇದೀಗ ಗುಜರಾತ್ ನಲ್ಲೂ ಪತ್ತೆಯಾಗಿದೆ.

ಹೌದು.. ಗುಜರಾತ್ ನಲ್ಲಿ ಮೊದಲ ಓಮಿಕ್ರಾನ್ ಸೋಂಕು ಪ್ರಕರಣ ವರದಿಯಾಗಿದ್ದು, ಗುಜರಾತ್ ನ ಜಾಮ್ ನಗರದಲ್ಲಿ ಓಮಿಕ್ರಾನ್ ಸೋಂಕು ಪ್ರಕರಣ ವರದಿಯಾಗಿದೆ. ಈ ಹಿಂದೆ ಜಿಂಬಾಬ್ವೆಯಿಂದ ಗುಜರಾತ್ ಗೆ ಆಗಮಿಸಿದ್ದ 50 ವರ್ಷದ ವ್ಯಕ್ತಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಈ ವೇಳೆ ವರದಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಜೆನೋಮ್ ಸಿಕ್ವೆನ್ಸಿಂಗ್ ಅಧಿಕಾರಿಗಳು ಪುಣೆಗೆ ಮಾದರಿ ಕಳುಹಿಸಿದ್ದರು. ಇದೀಗ ಅದರ ವರದಿ ಬಂದಿದ್ದು, ವರದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ.

ಆ ಮೂಲಕ ಜಾಮ್ ನಗರದ ಮೂಲಕ ಗುಜರಾತ್ ಗೂ ಓಮಿಕ್ರಾನ್ ಸೋಂಕು ಒಕ್ಕರಿಸಿದಂತಾಗಿದೆ. ಇದು ದೇಶದ ಮೂರನೇ ಓಮಿಕ್ರಾನ್ ಪ್ರಕರಣವಾಗಿದ್ದು, ಈ ಹಿಂದೆ ಕರ್ನಾಟಕದ ಬೆಂಗಳೂರಿನಲ್ಲಿ ಎರಡು ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ, 'ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಸಿಎಸ್ ಮನೋಜ್ ಅಗರ್ವಾಲ್ ಅವರು, 'ಜಾಮ್‌ನಗರದಲ್ಲಿ ಒಬ್ಬ ವ್ಯಕ್ತಿಗೆ ಓಮಿಕ್ರಾನ್ ಪಾಸಿಟಿವ್ ಕಂಡುಬಂದಿದೆ. ನಾವು ಅವರನ್ನು ಪ್ರತ್ಯೇಕಿಸಿದ್ದೇವೆ ಮತ್ತು ಅವನ ಮೇಲೆ ನಿಗಾ ಇರಿಸಿದ್ದೇವೆ. ಅವರು ವಾಸಿಸುವ ಸ್ಥಳದಲ್ಲಿ ಮೈಕ್ರೋ ಕಂಟೈನ್‌ಮೆಂಟ್ ಝೋನ್ ಮಾಡಲಾಗಿದೆ. ಆ ಪ್ರದೇಶದಲ್ಲಿ ಸಂಪರ್ಕಿತ ಜನರ ಪತ್ತೆ, ಪರೀಕ್ಷೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾಹಿತಿ ನೀಡಿರುವ ಗುಜರಾತ್ ಆರೋಗ್ಯ ಆಯುಕ್ತ ಜೈ ಪ್ರಕಾಶ್ ಶಿವಹರೆ ಅವರು, 'ಓಮಿಕ್ರಾನ್ ರೂಪಾಂತರಕ್ಕೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ. ಈ ವ್ಯಕ್ತಿ ನವೆಂಬರ್ 28 ರಂದು ಜಿಂಬಾಬ್ವೆಯಿಂದ ಗುಜರಾತ್‌ ಗೆ ಆಗಮಿಸಿದ್ದರು. ಡಿಸೆಂಬರ್ 2 ರಂದು ಕೊರೋನ ವೈರಸ್‌ ಪರೀಕ್ಷೆ ನಡೆಸಲಾಗಿತ್ತು. ನಂತರ ಅವರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ಗಾಗಿ ಕಳುಹಿಸಲಾಗಿತ್ತು. ಅದರ ವರದಿ ಈಗ ಲಭ್ಯವಾಗಿದ್ದು,  ಓಮಿಕ್ರಾನ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಇನ್ನು ಜಾಮ್‌ನಗರ ಪುರಸಭೆಯ ಆಯುಕ್ತ ವಿಜಯಕುಮಾರ್ ಖರಾಡಿ ಅವರು ಮಾಹಿತಿ ನೀಡಿದ್ದು, ಸೋಂಕಿತ ವ್ಯಕ್ತಿ ಅವರು ತಮ್ಮ ಮಾವನನ್ನು ಭೇಟಿಯಾಗಲು ಗುಜರಾತ್ ಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಬಳಿಕ ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಬಳಿಕ ಅವರನ್ನು ಗುರು ಗೋಬಿಂದ್ ಸಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿನ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com