ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಓಮ್ರಿಕಾನ್ ಭೀತಿ: ಭಾರತದಲ್ಲಿ ಪ್ರತೀ ಮೂವರಲ್ಲಿ ಒಬ್ಬರು ಮಾಸ್ಕ್ ಇಲ್ಲದೇ ಹೊರಗೆ ಓಡಾಡುತ್ತಿದ್ದಾರೆ: ಅಧ್ಯಯನದ ಆಘಾತಕಾರಿ ವರದಿ

ಇಡೀ ಜಗತ್ತನ್ನಿಲ್ಲಿ ಭೀತಿ ಮೂಡಿಸಿರುವ ಕೋರೋನಾ ವೈರಸ್ ಹೊಸ ರೂಪಾಂತರ ಸೋಂಕು ಓಮ್ರಿಕಾನ್ ವ್ಯಾಪಕವಾಗಿ ಹರಡುತ್ತಿರುವಂತೆಯೇ ಭಾರತದಲ್ಲಿ ಕೋವಿಡ್ ಮೂರನೇ ಅಲೆಯ ಭೀತಿ ಕೂಡ ಆರಂಭವಾಗಿದ್ದು, ಇದಕ್ಕೆ ಸಾರ್ವಜನಿಕರ ನಿರ್ಲಕ್ಷ್ಯದ ಧೋರಣೆಯೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Published on

ನವದೆಹಲಿ: ಇಡೀ ಜಗತ್ತನ್ನಿಲ್ಲಿ ಭೀತಿ ಮೂಡಿಸಿರುವ ಕೋರೋನಾ ವೈರಸ್ ಹೊಸ ರೂಪಾಂತರ ಸೋಂಕು ಓಮ್ರಿಕಾನ್ ವ್ಯಾಪಕವಾಗಿ ಹರಡುತ್ತಿರುವಂತೆಯೇ ಭಾರತದಲ್ಲಿ ಕೋವಿಡ್ ಮೂರನೇ ಅಲೆಯ ಭೀತಿ ಕೂಡ ಆರಂಭವಾಗಿದ್ದು, ಇದಕ್ಕೆ ಸಾರ್ವಜನಿಕರ ನಿರ್ಲಕ್ಷ್ಯದ ಧೋರಣೆಯೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೌದು.. ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಪ್ರತೀ ದಿನ ಪ್ರತೀ ಮೂವರಲ್ಲಿ ಒಬ್ಬರು ಮಾಸ್ಕ್ ಇಲ್ಲದೇ ಹೊರಗೆ ಓಡಾಡುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಡಿಜಿಟಲ್ ಫ್ಲಾಟ್ ಫಾರ್ಮ್ ಆಧಾರಿತ ಪ್ಲಾಟ್‌ಫಾರ್ಮ್ ಲೋಕಲ್ ಸರ್ಕಲ್ಸ್ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಭಾರತದಲ್ಲಿ ಮೂವರಲ್ಲಿ ಒಬ್ಬ ತಮ್ಮ ಪ್ರದೇಶದಲ್ಲಿ ತಮ್ಮ ಮನೆಯಿಂದ ಹೊರಬರುವಾಗ ಮಾಸ್ಕ್ ಗಳನ್ನು ಸಹ ಹೊಂದಿರುವುದಿಲ್ಲ ಎಂದು ಹೇಳಲಾಗಿದೆ.

ಏಪ್ರಿಲ್‌ನಲ್ಲಿ ನಡೆಸಿದ ಸಮೀಕ್ಷೆಯು ಭಾರತದ 364 ಜಿಲ್ಲೆಗಳಲ್ಲಿ ವಾಸಿಸುವ ನಾಗರಿಕರಿಂದ 25,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ್ದು, ಈ ಪೈಕಿ 29ರಷ್ಟು ನಾಗರಿಕರು ಮಾತ್ರ ಮಾಸ್ಕ್  ಧಾರಣೆಗೆ ಪ್ರಾಮುಖ್ಯತೆ ನೀಡಿದ್ದು, ಈ ಶೇಕಡಾವಾರು ಪ್ರಮಾಣ ಸೆಪ್ಟೆಂಬರ್‌ನಲ್ಲಿ ಶೇಕಡಾ 12ಕ್ಕೆ ಇಳಿದಿತು ಮತ್ತು ನವೆಂಬರ್‌ನಲ್ಲಿ ಕೇವಲ ಶೇ.2 ಕ್ಕೆ ತೀವ್ರವಾಗಿ ಕುಸಿದಿತ್ತು ಎಂದು ಹೇಳಲಾಗಿದೆ.

ಮಾಸ್ಕ್ ಗಳ ಕುರಿತು ಸೂಕ್ತ ತಿಳುವಳಿಕೆ ಅಗತ್ಯ
ಇನ್ನು ಪ್ರತೀ ಮೂವರಲ್ಲಿ ಇಬ್ಬರು ಭಾರತೀಯರು ಇನ್ನೂ COVID-19 ನಿಂದ ಸೀಮಿತ ರಕ್ಷಣೆ ಮಾತ್ರ ಒದಗಿಸುವ ಬಟ್ಟೆಯ ಮುಖವಾಡಗಳನ್ನು ಧರಿಸಿರುವುದರಿಂದ ಮುಖವಾಡಗಳ ಪರಿಣಾಮಕಾರಿತ್ವದ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಸಮಯದ ಅಗತ್ಯವಾಗಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಕೋವಿಡ್ ವೈರಾಣು ವಿರುದ್ಧ ಹೋರಾಟದಲ್ಲಿ ಎನ್ 95 ಅಥವಾ ಅದರ ಸಮಕಾಲೀನ ಮಾಸ್ಕ್ ಗಳನ್ನು ಬಳಕೆ ಮಾಡುವುದು ಸೂಕ್ತ ಎಂದು ಹೇಳಲಾಲಿದೆ. 

ಈ ಬಗ್ಗೆ ಮಾತನಾಡಿರುವ ಲೋಕಲ್ ಸರ್ಕಲ್ಸ್ ಸಂಸ್ಥಾಪಕ ಸಚಿನ್ ತಪರಿಯಾ ಅವರು, 'ಓಮಿಕ್ರಾನ್ ರೂಪಾಂತರದ ಹೊತ್ತಿನಲ್ಲಿ ಮಾಸ್ಕ್ ಗಳ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ಅನುಸರಣೆಯನ್ನು ಹೆಚ್ಚಿಸಲು ಅಗತ್ಯವಾದ ದಂಡವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತಗಳು ಸಾಧ್ಯವಿರುವ ಎಲ್ಲಾ ಕಾರ್ಯವಿಧಾನಗಳನ್ನು ಪರಿಚಯಿಸುವುದು ನಿರ್ಣಾಯಕವಾಗಿದೆ. ಒಳಾಂಗಣದಲ್ಲಿ ಇಬ್ಬರು ವ್ಯಕ್ತಿಗಳು ಮಾಸ್ಕ್ ಧರಿಸದಿದ್ದರೆ, ಕೇವಲ 10 ನಿಮಿಷಗಳಲ್ಲಿ, ಸೋಂಕಿತ ವ್ಯಕ್ತಿಯು ಇತರ ವ್ಯಕ್ತಿಗೆ ವೈರಸ್ ಅನ್ನು ಹರಡಬಹುದು, ಆದರೆ ಇಬ್ಬರೂ N-95 ಮಾಸ್ಕ್ ಅನ್ನು ಧರಿಸಿದ್ದರೆ, ವೈರಸ್ ಗೆ ಸೋಂಕು ಹರಡಲು 600 ಗಂಟೆಗಳ ಕಾಲ ಸಮಯ ಬೇಕಾಗುತ್ತದೆ ಎಂದು ಹೇಳಿದರು.

ಪ್ರಪಂಚದಾದ್ಯಂತದ ವಿಜ್ಞಾನಿಗಳು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಓಮಿಕ್ರಾನ್ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದು, ಮೊದಲು ಆಫ್ರಿಕಾದಲ್ಲಿ ಪತ್ತೆಯಾದ ಬಳಿಕ ಈ ರೂಪಾಂತರವನ್ನು ಮೂರು ದೇಶಗಳಲ್ಲಿ ಗುರುತಿಸಿದ ನಂತರ ಈ ವಾರದ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು "ಕಳವಳಿಕೆಯ ರೂಪಾಂತರ" ಎಂದು ವರ್ಗೀಕರಿಸಿದೆ. ಅಂತೆಯೇ ಕೇವಲ ಒಂದು ವಾರದೊಳಗೆ, ಓಮಿಕ್ರಾನ್ ವಿಶ್ವದಾದ್ಯಂತ 40 ದೇಶಗಳಲ್ಲಿ ಪತ್ತೆಯಾಗಿದೆ, ಭಾರತವು ಕರ್ನಾಟಕದ ಮೂಲಕ ತನ್ನ ಮೊದಲ ಎರಡು ಪ್ರಕರಣಗಳನ್ನು ವರದಿ ಮಾಡಿದ್ದು, ಇದೀಗ ಈ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಗುಜರಾತ್ ನ ಜಾಮ್ ನಗರ ಮತ್ತು ಮಹಾರಾಷ್ಟ್ರದ ಮುಂಬೈ ನಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com