ಮಹಾರಾಷ್ಟ್ರ: ಓಮಿಕ್ರಾನ್ ಸೋಂಕಿತ ಕಳೆದ ಎಪ್ರಿಲ್ ನಿಂದ ಹಡಗಿನಲ್ಲಿದ್ದ: ಕೊರೊನಾ ಲಸಿಕೆ ಪಡೆಯಲಾಗಿರಲಿಲ್ಲ

ಹಡಗಿನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆತನಿಗೆ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ. ಅದರ ಹೊರತಾಗಿಯೂ ಆತ ಲಸಿಕೆ ಪಡೆದುಕೊಳ್ಳಲು ಪ್ರಯತ್ನ ನಡೆಸಿದ್ದಾಗಿ ತಿಳಿಸಿದ್ದಾನೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಮೊದಲ ಓಮಿಕ್ರಾನ್ ವೈರಾಣು ಸೋಂಕಿತ ವ್ಯಕ್ತಿ ಮರೈನ್ ಎಂಜಿನಿಯರ್ ಆಗಿದ್ದು, ಎಪ್ರಿಲ್ ತಿಂಗಳಿನಿಂದ ಹಡಗಿನಲ್ಲಿ ಇದ್ದಿದ್ದಾಗಿ ತಿಳಿದುಬಂದಿದೆ. 

ಹಡಗಿನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆತನಿಗೆ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ. ಅದರ ಹೊರತಾಗಿಯೂ ಆತ ಲಸಿಕೆ ಪಡೆದುಕೊಳ್ಳಲು ಪ್ರಯತ್ನ ನಡೆಸಿದ್ದಾಗಿ ತಿಳಿಸಿದ್ದಾನೆ. 

ಮುಂಬೈನ್ ದೊಂಬಿವಿಲಿ ನಿವಾಸಿಯಾಗಿರುವ ಆತ ದಕ್ಷಿಣ ಆಫ್ರಿಕಾ ವಿಮಾನ ನಿಲ್ದಾನದಿಂದ ದುಬೈ ಮೂಲಕ ನವದೆಹಲಿಗೆ ಬಂದಿಳಿದಿದ್ದ. ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಲಾಗಿ ಓಮಿಕ್ರಾನ್ ವೈರಾಣು ಸೋಂಕು ಇರುವುದು ಪತ್ತೆಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com