ಮುಚ್ಚಲಿದೆ ವಿವಾದಾತ್ಮಕ ಪೆಗಾಸಸ್ ಬೇಹುಗಾರಿಕಾ ಕಂಪೆನಿ?: ಸಾಲಗಾರರದ್ದೇ ದೊಡ್ಡ ಚಿಂತೆ!

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬೇಹುಗಾರಿಕೆ ಆರೋಪದ ಕಾರಣ ಪೆಗಾಸಸ್ ವಿವಾದಕ್ಕೆ ಕಾರಣವಾಗಿತ್ತು. ರಾಜಕೀಯ ವಿರೋಧಿಗಳು, ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ಕಣ್ಣಿಡಲು ಬಳಸಲಾಗಿತ್ತು ಎಂದು ಆರೋಪಿಸಲಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಬೇಹುಗಾರಿಕೆ ಹಗರಣದಿಂದಾಗಿ ಮುನ್ನೆಲೆಗೆ ಬಂದಿದ್ದ ಸಾಫ್ಟ್‌ವೇರ್ ಸಂಸ್ಥೆ (NSO) ಎನ್.ಎಸ್.ಓ ತನ್ನ “ಪೆಗಾಸಸ್” ಸ್ಪೈವೇರ್ ವಿಭಾಗವನ್ನು ಮುಚ್ಚಲಿದೆ. ಎನ್.ಎಸ್.ಓ ಗ್ರೂಪ್ ಲಿಮಿಟೆಡ್ ತನ್ನ ಸಾಲಗಳ ಕಾರಣದಿಂದಾಗಿ ಡೀಫಾಲ್ಟ್ ಅಪಾಯವನ್ನು ಎದುರಿಸುತ್ತಿದೆ. 

ಇಂತಹ ಪರಿಸ್ಥಿತಿಯಲ್ಲಿ ಕಂಪನಿಗೆ ತನ್ನ ವಿವಾದಾತ್ಮಕ ‘ಪೆಗಾಸಸ್’ ಅನ್ನು ಸ್ಪೈವೇರ್ ವಿಭಾಗವನ್ನುಮಾರಾಟ ಮಾಡುವ ಯೋಜನೆಯೂ ಇದೆ ಎಂದು ತಿಳಿದುಬಂದಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬೇಹುಗಾರಿಕೆ ಆರೋಪದ ಕಾರಣ ಪೆಗಾಸಸ್ ಇತ್ತೀಚೆಗೆ ವಿವಾದಕ್ಕೆ ಕಾರಣವಾಗಿತ್ತು.

ಈ ಸಂಬಂಧ ಅನೇಕ ಹೂಡಿಕೆ ನಿಧಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಇದರಲ್ಲಿ ಕಂಪನಿಗೆ ಸಂಪೂರ್ಣ ಹಣ ನೀಡಿ ಮಾರಾಟ ಮಾಡುವ ಕುರಿತು ಚರ್ಚೆ ನಡೆದಿದೆ. 

ಪೆಗಾಸಸ್ ಸಾಫ್ಟ್‌ವೇರ್ ಬಳಕೆದಾರರ ಫೋನ್‌ಗಳನ್ನು ಟ್ರ್ಯಾಕ್ ಮಾಡುತ್ತದೆ. ಇತ್ತೀಚೆಗೆ, ಕಂಪನಿಯು ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲಿನ ಬಳಕೆದಾರರ ಡೇಟಾವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿತ್ತು. ರಾಜಕೀಯ ವಿರೋಧಿಗಳು, ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ಕಣ್ಣಿಡಲು ಬಳಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com