The New Indian Express
ವಾಷಿಂಗ್ಟನ್: ಐಫೋನಿನಲ್ಲಿ ಪತ್ತೆಯಾಗಿದ್ದ ಭದ್ರತಾಲೋಪವನ್ನು ಸರಿಪಡಿಸಿರುವುದಾಗಿ ಆಪಲ್ ಸಂಸ್ಥೆ ತಿಳಿಸಿದೆ. ಈ ಹಿಂದೆ ಸೌದಿ ಅರೇಬಿಯಾದ ಸಾಮಾಜಿಕ ಕಾರ್ಯಕರ್ತರು ಹಾಗೂ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರ ಐಫೋನುಗಳನ್ನು ಹ್ಯಾಕ್ ಮಾಡಿರುವ ಸಂಗತಿ ಬೆಳಕಿಗೆ ಬಂದಿತ್ತು.
ಇಸ್ರೇಲ್ ಮೂಲದ ಹ್ಯಾಕಿಂಗ್ ಸಂಸ್ಥೆ ಎನ್ ಎಸ್ ಒ ಈ ಕೃತ್ಯದ ಹಿಂದೆ ಇದೆ ಎನ್ನುವುದಕ್ಕೆ ಸಾಕ್ಷ್ಯಗಳು ಲಭ್ಯವಾಗಿದ್ದವು. ಸೌದಿ ಸರ್ಕಾರದ ಸೂಚನೆ ಮೇರೆಗೆ ಇಸ್ರೇಲ್ ಸಂಸ್ಥೆ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿತ್ತು.
ಇದನ್ನೂ ಓದಿ: ಇಸ್ರೇಲಿನ ಪೆಗಾಸಸ್ ಸ್ಪೈವೇರ್ ಗೆ ವಿಶ್ವದಾದ್ಯಂತ 50,000 ಫೋನ್ ನಂಬರ್ ಲಿಂಕ್: ವರದಿ
ಜಗತ್ತಿನಲ್ಲೇ ಅತ್ಯಂತ ಸುರಕ್ಷಿತವಾದ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಐಫೋನ್ ಸಂಸ್ಥೆಗೆ ಘಟನೆಯಿಂದ ಮುಜುಗರ ಉಂಟಾಗಿತ್ತು. ಐಫೋನ್ ನಲ್ಲಿ ಇದ್ದ ಒಂದು ಲೋಪವನ್ನು ಇಸ್ರೇಲಿ ಸಂಸ್ಥೆ ಪತ್ತೆಹಚ್ಚಿತ್ತು. ಆ ಲೋಪದ ಸಹಾಯದಿಂದ ಸಂಸ್ಥೆ ಗೂಡಚರ್ಯೆ ತಂತ್ರಾಂಶವನ್ನು ಬಳಕೆದಾರರಿಗೆ ತಿಳಿಯದಂತೆಯೇ ಅವರ ಐಫೋನುಗಳಲ್ಲಿ ಇನ್ ಸ್ಟಾಲ್ ಮಾಡಿತ್ತು.
ಆ ತಂತ್ರಾಂಶ ಬಳಕೆದಾರರ ಮೊಬೈಲಿನಲ್ಲಿ ದಾಖಲಾಗಿದ್ದ ಮಾಹಿತಿಯನ್ನು ಕದ್ದು ಗೌಪ್ಯವಾಗಿ ರವಾನೆ ಮಾಡುತ್ತಿತ್ತು. ಇದೀಗ ಆ ಲೋಪವನ್ನು ಸರಿಪಡಿಸಲಾಗಿದೆಯೆಂದು ಆಪಲ್ ತಿಳಿಸಿದೆ.
ಇದನ್ನೂ ಓದಿ: ಪೆಗಾಸಸ್ ಸ್ಪೈ ವೇರ್: 40 ಕ್ಕೂ ಹೆಚ್ಚು ಭಾರತೀಯ ಪತ್ರಕರ್ತರ ಫೋನ್ ಹ್ಯಾಕ್; ಗೂಢಚರ್ಯೆ ಯತ್ನ?