ಗುಂಟೂರು: ಗರ್ಭಿಣಿಯಾಗಲು ಹೊಕ್ಕಳು ಬಳ್ಳಿ ಸೇವಿಸಿ ಮಹಿಳೆ ಸಾವು

ಗರ್ಭಿಣಿಯಾಗಲು ಸಹಾಯ ಮಾಡಬಹುದೆಂಬ ನಿರೀಕ್ಷೆಯಲ್ಲಿ ಹೊಕ್ಕುಳ ಬಳ್ಳಿ ಸೇವಿಸಿದ ನಂತರ 19 ವರ್ಷದ ಮಹಿಳೆಯೊಬ್ಬಳು  ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಾದೆಂಡ್ಲದ ತುಬಡು ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆ ದಾಚೆಪಲ್ಲಿ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಗುಂಟೂರು: ಗರ್ಭಿಣಿಯಾಗಲು ಸಹಾಯ ಮಾಡಬಹುದೆಂಬ ನಿರೀಕ್ಷೆಯಲ್ಲಿ ಹೊಕ್ಕುಳ ಬಳ್ಳಿ ಸೇವಿಸಿದ ನಂತರ 19 ವರ್ಷದ ಮಹಿಳೆಯೊಬ್ಬಳು  ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಾದೆಂಡ್ಲದ ತುಬಡು ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆ ದಾಚೆಪಲ್ಲಿ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. 

ತುಬಡು ಗ್ರಾಮದ ರವಿ  ಎಂಬಾತನೊಂದಿಗೆ ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆ, ಗರ್ಭಿಣಿಯಾಗಲು ಎರಡು ವರ್ಷದಿಂದ ಪ್ರಯತ್ನಿಸುತ್ತಿದ್ದರು. ಇದಕ್ಕಾಗಿ ನಾಟಿ ಔಷಧಗಳನ್ನೆಲ್ಲಾ ಪಡೆದಿದ್ದರು. ಗರ್ಭಿಣಿಯಾಗಲು ಹೊಕ್ಕಳ ಬಳ್ಳಿ ಸೇವಿಸಿ ಆಕೆ ಸಾವನ್ನಪ್ಪಿರುವುದಾಗಿ ಕೆಲ ಸ್ಥಳೀಯರು ಆರೋಪಿಸಿದ್ದಾರೆ. 

ಗುರುವಾರ ಆಕೆ ನವಜಾತ ಶಿಶುವಿನ ಹೊಕ್ಕಳ ಬಳ್ಳಿಯನ್ನು ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದು, ಕೂಡಲೇ ನರಸರಾವ್ ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಆಕೆ ತಾಯಿ ನಾಂದೆಡ್ಲದ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನರಸರಾವ್ ಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ನಂತರ ಕ್ರಮ ಕೈಗೊಳ್ಳುವುದಾಗಿ ನಾಂದೆಡ್ಲದ ಸಿಐ ಸತೀಶ್ ತಿಳಿಸಿದ್ದಾರೆ. 

ಗರ್ಭಿಣಿಯಾಗಲು ಹೊಕ್ಕಳು ಬಳ್ಳಿ ಸೇವನೆ ಅವೈಜ್ಞಾನಿಕವಾಗಿದೆ. ಈ ಬಗೆಗಿನ ಅರಿವಿನ ಕೊರತೆಯಿಂದಾಗಿ ಇಂತಹ ಘಟನೆಗಳು ಸಂಭವಿಸುತ್ತಿವೆ. ನಂಬಿಕೆ ಮತ್ತು ಮೂಢನಂಬಿಕೆ ಪದ್ಧತಿಗಳಲ್ಲಿ ನಂಬಿಕೆ ಅವೈಜ್ಞಾನಿಕವಾಗಿದೆ ಎಂದು ಸ್ತ್ರಿ ರೋಗ ತಜ್ಞೆ ಡಾ. ಕವಿತಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com