ತಿರುವಳ್ಳೂರು: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿ ಪ್ರೇಮ್ ಕುಮಾರ್‌ನನ್ನು ಕೊಲೆ ಮಾಡಿ, ಆತನ ಶವವನ್ನು ಹೂತು ಹಾಕಿದ್ದ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯರ ಸಹಚರರಾದ ಅಶೋಕ್ ಮತ್ತು ಆತನ ಮೂವರು ಸಹಚರರನ್ನು ಪೊಲೀಸರು ಹುಡುಕುತ್ತಿದ್ದಾರೆ. ಸೋಮವಾರ ಬಾಲಕಿಯರನ್ನು ಬಂಧಿಸಲಾಗಿದೆ.
ಜಿಲ್ಲೆಯ ಈಚಿಂಗಾಡು ಗ್ರಾಮದಲ್ಲಿ ವ್ಯಕ್ತಿಯೊಬ್ಬನ ರಕ್ತಸಿಕ್ತ ಹಲ್ಲು ಮತ್ತು ಕೂದಲು ಇರುವ ಬಗ್ಗೆ ಸ್ಥಳೀಯರು ತಿರುವಳ್ಳೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಹೂತಿದ್ದ ಶವ ಪತ್ತೆಯಾಗಿದೆ. ತನಿಖೆಯ ಸಮಯದಲ್ಲಿ ಪೊಲೀಸರು ಮೃತನ ಮೊಬೈಲ್ ಫೋನ್ನನ್ನು ಪತ್ತೆ ಹಚ್ಚಿದ್ದಾರೆ. ಈ ಮೊಬೈಲ್ ಮುಲಕ ಚೆಂಗಲ್ಪಟ್ಟು ಜಿಲ್ಲೆಯ ಇಬ್ಬರು 10 ನೇ ತರಗತಿಯ ಹುಡುಗಿಯರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪ್ರೇಮಕುಮಾರ್ ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂದು ಬಾಲಕಿಯರು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.
ಪ್ರೇಮಕುಮಾರ್ ಅವರಿಬ್ಬರ ಜೊತೆ ಸಂಬಂಧ ಬೆಳೆಸಿದ್ದು, ಈ ವಿಚಾರ ಯಾವ ಹುಡುಗಿಯರಿಗೂ ಗೊತ್ತಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಬಾಲಕಿಯರ ವೈಯಕ್ತಿಕ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೇ ಇಬ್ಬರು ಬಾಲಕಿಯರಿಂದ ತಲಾ 50 ಸಾವಿರ ರೂಪಾಯಿ ಸುಲಿಗೆ ಮಾಡಿದ್ದ.
ಪ್ರೇಮಕುಮಾರ್ ಅವರಿಬ್ಬರೊಂದಿಗೆ ಸಂಬಂಧ ಹೊಂದಿದ್ದು, ಹೆಚ್ಚಿನ ಹಣಕ್ಕಾಗಿ ಬೇಡಿಕೆಯನ್ನು ಇಟ್ಟಿದ್ದ. ಬಾಲಕಿಯರಿಗೆ ಹಣ ನೀಡಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಅಶೋಕ್ ಎಂಬ ವ್ಯಕ್ತಿ ಪರಿಚಯವಾಗಿದ್ದು, ಹುಡುಗಿಯರು ಆತನ ಬಳಿ ಸಹಾಯವನ್ನು ಕೇಳಿದ್ದಾರೆ. ಅಲ್ಲದೇ ಅವರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಆತನಿಗೆ ಹೇಳಿದ್ದಾರೆ.
ಅಶೋಕ್ ಅವರ ಸಲಹೆಯ ಮೇರೆಗೆ ಹುಡುಗಿಯರು ಪ್ರೇಮಕುಮಾರ್‌ಗೆ ಕರೆ ಮಾಡಿ ಶುಕ್ರವಾರ ಸಂಜೆ ಶೋಲವರಂ ಟೋಲ್ ಪ್ಲಾಜಾಕ್ಕೆ ಬರುವಂತೆ ಹೇಳಿ, ನಂತರ ಅವನನ್ನು ಅಪಹರಿಸಿದ್ದಾರೆ. ಪ್ರೇಮಕುಮಾರ್‌ನಿಂದ ಫೋನ್ ಅನ್ನು ತೆಗೆದುಕೊಂಡು, ಅದರಲ್ಲಿರುವ ಫೋಟೋಗಳನ್ನು ಡಿಲೀಟ್ ಮಾಡಲು ಹುಡುಗಿಯರು ಅಶೋಕ್‌ಗೆ ಹೇಳಿದ್ದಾರೆ. ಆದರೆ ಅವನು ಮತ್ತು ಅವನ ಸಹಚರರು ಬ್ಲ್ಯಾಕ್ಮೇಲರ್ನನ್ನು ಅಪಹರಿಸಿ, ಈಚಂಗಾಡು ಗ್ರಾಮಕ್ಕೆ ಕರೆದೊಯ್ದು ಕೊಲೆ ಮಾಡಿ ನಂತರ ಶವವನ್ನು ಹೂತು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಶೋಕ್ ಮತ್ತು ಆತನ ಸಹಚರರ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.
Advertisement