ಗೋವು ಕೆಲವರಿಗೆ ‘ಪಾಪ’, ನಮಗೆ ‘ತಾಯಿ’: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಗೋವು ಕೆಲವರಿಗೆ ‘ಪಾಪ’, ನಮಗೆ ‘ತಾಯಿ’.. ಹಸುಗಳು, ಎಮ್ಮೆಗಳ ಮೇಲೆ ಹಾಸ್ಯ ಮಾಡುವವರು ಅವುಗಳಿಂದ ಬರುತ್ತಿರುವ ಕೋಟಿಗಟ್ಟಲೇ ಜೀವನೋಪಾಯವನ್ನು ಮರೆತು ಬಿಡುತ್ತಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ವಾರಣಾಸಿಯಲ್ಲಿ ಪ್ರಧಾನಿ ಮೋದಿ
ವಾರಣಾಸಿಯಲ್ಲಿ ಪ್ರಧಾನಿ ಮೋದಿ
Updated on

ವಾರಾಣಾಸಿ: ಗೋವು ಕೆಲವರಿಗೆ ‘ಪಾಪ’, ನಮಗೆ ‘ತಾಯಿ’.. ಹಸುಗಳು, ಎಮ್ಮೆಗಳ ಮೇಲೆ ಹಾಸ್ಯ ಮಾಡುವವರು ಅವುಗಳಿಂದ ಬರುತ್ತಿರುವ ಕೋಟಿಗಟ್ಟಲೇ ಜೀವನೋಪಾಯವನ್ನು ಮರೆತು ಬಿಡುತ್ತಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ 2095 ಕೋಟಿ ರೂ.ಗಳ 27 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ವಾರಣಾಸಿಯ ಯುಪಿ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಆಹಾರ ಪಾರ್ಕ್‍ನಲ್ಲಿ ಬನಾಸ್ ಡೈರಿ ಸಂಕುಲ್‍ಗೆ ಶಂಕುಸ್ಥಾಪನೆ ನೆರವೇರಿಸಿ ಬನಾಸ್ ಡೈರಿಗೆ ಸಂಬಂಧಿಸಿದ 1.7 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗಳಿಗೆ ರೂ 35-ಕೋಟಿ ಬೋನಸ್‍ಗಳನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದರು. ರಾಮನಗರದ ಹಾಲು ಉತ್ಪಾದಕರ ಸಹಕಾರಿ ಯೂನಿಯನ್ ಪ್ಲಾಂಟಿನ ಜೈವಿಕ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ಮಾಡಿದರು. ಭೂ ಮಾಲೀಕತ್ವದ ಸಮಸ್ಯೆಗಳನ್ನು ಕಡಿಮೆ ಮಾಡಲು, ಪ್ರಧಾನಮಂತ್ರಿ ವಾಸ್ತವಿಕವಾಗಿ 20 ಲಕ್ಷಕ್ಕೂ ಹೆಚ್ಚು ಜನರಿಗೆ ಗ್ರಾಮೀಣ ವಸತಿ ಹಕ್ಕುಗಳ ದಾಖಲೆ ‘ಘರೌನಿ’ ವಿತರಿಸಿದರು. 10 ದಿನಗಳಲ್ಲಿ ತಮ್ಮ ಕ್ಷೇತ್ರಕ್ಕೆ ಮೋದಿಯವರ ಎರಡನೇ ಭೇಟಿ ಇದಾಗಿದೆ. ಡಿಸೆಂಬರ್ 13ರಂದು ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ಆಗಮಿಸಿದ್ದರು.

ಇಂದು ಉದ್ಘಾಟನೆ ನಂತರ ಮಾತನಾಡಿದ ಮೋದಿ, 'ನಮ್ಮ ದೇಶದಲ್ಲಿ ಹಿಂದಿನ ಕಾಲದಲ್ಲಿ ನೈಸರ್ಗಿಕ ಕೃಷಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಕಾಲಾನಂತರದಲ್ಲಿ, ರಾಸಾಯನಿಕ ಆಧಾರಿತ ಕೃಷಿಯು ಸ್ವಾಭಾವಿಕ ಕೃಷಿಗೆ ಸೀಮಿತವಾಯಿತು. ರಾಸಾಯನಿಕ ಕೃಷಿ ಮರೆತು ಮತ್ತೆ ನೈಸರ್ಗಿಕ ಕೃಷಿಗೆ ಮರಳುವುದು ಇಂದಿನ ಅಗತ್ಯವಾಗಿದೆ. ಭೂಮಿ ತಾಯಿಯ ಪುನರುಜ್ಜೀವನಕ್ಕಾಗಿ, ನಮ್ಮ ನೆಲವನ್ನು ರಕ್ಷಿಸಲು, ಮುಂದಿನ ಪೀಳಿಗೆಯ ಭವಿಷ್ಯವನ್ನು ಭದ್ರಪಡಿಸಲು ನಾವು ಮತ್ತೊಮ್ಮೆ ನೈಸರ್ಗಿಕ ಕೃಷಿಯತ್ತ ಮುಖಮಾಡಬೇಕು ಎಂದು ಸಲಹೆ ನೀಡಿದರು.

ಕೆಲವರು ಗೋವು ಮತ್ತು ಗೋವಿನ ಸಗಣಿಯ ಬಗ್ಗೆ ಮಾತನಾಡುವುದೇ ಅಪರಾಧ ಎಂದು ಬಿಂಬಿಸಿ ಬಿಟ್ಟಿದ್ದಾರೆ. ಗೋವು ಕೆಲವರಿಗೆ ಪಾಪ ಆಗಿರಬಹುದು, ಆದರೆ ನಮಗೆ ಗೋವು ತಾಯಿಯಾಗಿದೆ. ಹಸು, ಎಮ್ಮೆಗಳನ್ನು ಗೇಲಿ ಮಾಡುವ ಜನರು ಜಾನುವಾರುಗಳಿಂದ ದೇಶದ 8 ಕೋಟಿ ಕುಟುಂಬಗಳು ಜೀವನ ನಡೆಸುತ್ತಿದೆ ಎಂಬುದನ್ನು ಮರೆಯುತ್ತಾರೆ. ಹೈನುಗಾರಿಕೆ ಕ್ಷೇತ್ರ, ಪಶುಸಂಗೋಪನೆ, ದೇಶದ ಶ್ವೇತ ಕ್ರಾಂತಿಯಲ್ಲಿನ ನೂತನ ಶಕ್ತಿಯು ರೈತರ ಸ್ಥಿತಿಯನ್ನು ಬದಲಾಯಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಕಳೆದ 6-7 ವರ್ಷಗಳಿಗೆ ಹೋಲಿಸಿದರೆ ಭಾರತದಲ್ಲಿ ಹಾಲಿನ ಉತ್ಪಾದನೆಯು ಸುಮಾರು ಶೇ.45ರಷ್ಟು ಹೆಚ್ಚಾಗಿದೆ. ಇಂದು, ಭಾರತವು ವಿಶ್ವದ ಹಾಲಿನ ಸುಮಾರು ಶೇ.22ರಷ್ಟನ್ನು ಉತ್ಪಾದಿಸುತ್ತಿದೆ ಎಂದು ಹೇಳಿದರು.

ಅಂತೆಯೇ ಇಂದು ಉತ್ತರ ಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಜ್ಯ ಮಾತ್ರವಲ್ಲ, ಡೈರಿ ಕ್ಷೇತ್ರದ ವಿಸ್ತರಣೆಯಲ್ಲೂ ಮುಂದಿರುವುದು ನನಗೆ ಖುಷಿ ತಂದಿದೆ. ದೇಶದಲ್ಲಿಯೇ ಉತ್ತರ ಪ್ರದೇಶವು ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಜ್ಯವಾಗಿದೆ ಹಾಗೂ ಡೈರಿ ವಲಯವನ್ನು ವಿಸ್ತರಿಸಿಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ಸುಗಳು ಮತ್ತು ಎಮ್ಮೆಗಳ ಕುರಿತು ಹಾಸ್ಯ ಮಾಡುತ್ತಿರುವವರು, ಕೋಟ್ಯಂತರ ಜನರು ಜೀವನ ನಿರ್ವಹಣೆಗೆ ಅವುಗಳ ಮೇಲೆ ಅವಲಂಬಿಸಿರುವುದನ್ನು ಮರೆತಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ವಲಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೂ ಅವರು ಚಾಲನೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com