ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಲಿದೆ, ಆದರೆ ತೀವ್ರತೆ ಕಡಿಮೆಯಿರಲಿದೆ: ಓಮಿಕ್ರಾನ್ ಕಂಡು ಹಿಡಿದ ವೈದ್ಯೆ

ಓಮಿಕ್ರಾನ್ ರೂಪಾಂತರಿ ವೈರಾಣು ಮೊದಲ ಬಾರಿಗೆ ದ.ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಆಂಜೆಲಿಕ್ ಕೊಯೆಝಿ ಅವರು ವೈರಾಣುವನ್ನು ಮೊದಲು ಪತ್ತೆ ಹಚ್ಚಿದ್ದರು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಮುಂದಿನ ದಿನಗಳಲ್ಲಿ ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಕಾಣಲಿದೆ, ಆದರೆ ಅದರ ತೀವ್ರತೆ ಕಡಿಮೆಯಿರಲಿದೆ ಎಂದು ಓಮಿಕ್ರಾನ್ ಕಂಡು ಹಿಡಿದ ದ.ಆಫ್ರಿಕಾ ವೈದ್ಯೆ ಆಂಜೆಲಿಕ್ ಕೊಯೆಝಿ ಅವರು ತಿಳಿಸಿದ್ದಾರೆ.

ಓಮಿಕ್ರಾನ್ ರೂಪಾಂತರಿ ವೈರಾಣು ಮೊದಲ ಬಾರಿಗೆ ದ.ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಆಂಜೆಲಿಕ್ ಕೊಯೆಝಿ ಅವರು ವೈರಾಣುವನ್ನು ಮೊದಲು ಪತ್ತೆ ಹಚ್ಚಿದ್ದರು.

ಲಸಿಕೆ ಹಾಕಿಸಿಕೊಂಡವರಿಗೆ ಒಮಿಕ್ರಾನ್ ವೈರಾಣುವಿನಿಂದ ರಕ್ಷಣೆ ದೊರೆಯುವ ಭರವಸೆಯನ್ನು ಅವರು ನೀಡಿದ್ದಾರೆ. ಅಲ್ಲದೆ ಓಮಿಕ್ರಾನ್ ತಳಿ ಹರಡುವಿಕೆಯನ್ನು ಲಸಿಕೆ ನಿಯಂತ್ರಿಸುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com